PLEASE LOGIN TO KANNADANET.COM FOR REGULAR NEWS-UPDATES


ನಮ್ಮ ಉತ್ತರ ಕರ್ನಾಟಕದ ಜಾನಪದ ಕಲೆಗಳಲ್ಲಿ ಬಯಲಾಟವು ಒಂದು ಗಂಡು ಕಲೆ ಮತ್ತು ಆಕರ್ಷಕ ಕಲೆಯಾಗಿ ಮಹತ್ವ ಸ್ಥಾನ ಪಡೆದಿದೆ ಇಂತಹ ಒಂದು ಪರಂಪರೆ ಸಿನಿಮಾ, ಟಿವಿ ಮತ್ತು ಪಾಶ್ಚೀಮಾತ್ಯ ಸಂಗೀತದ ಒಡೆತಕ್ಕೆ ಸಿಲುಕಿ ಮರೆಯಾಗುತ್ತಿದೆ. ಇಂತಹ ಜನಪದ ಕಲೆಗಳನ್ನು ಸ್ಪರ್ಧೆಗಳ ಮೂಲಕ ಸಂಘಟಿಸಿ ಪುನಶ್ಚೇತನ ಗೊಳಿಸುವ ಅಗತ್ಯವಿದೆ ಎಂದು ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಮಾಸ್ತರ ಕಣಗಾಲ್ ಹೇಳಿದರು. ಅವರು ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರೆಯ ನಿಮಿತ್ತ ಶ್ರೀ ತಾಯಮ್ಮ ದೇವಿ ಭಜನಾ ಯುವಕ ಮಂಡಳಿಯವರು ಏರ್ಪಡಿಸಿದ ಕುರುಕ್ಷೇತ್ರ, ಬಯಲಾಟ ಜ್ಯೋತಿ ಬೆಳಗಿಸಿ ಮಾತನಾಡಿದರು ನಂತರ ನಿವೃತ್ತ ಡಿ.ವೈ.ಎಸ್.ಪಿ ಎನ್ ಮುದಿಯಪ್ಪ ಇವರು ಮಾತನಾಡಿ ಗ್ರಾಮೀಣ ಭಾಗದ ಜಾನಪದ ಕಲೆಗಳು ನಮ್ಮ ನಾಡನ್ನು ಶ್ರೀ ಮಂತಗೊಳಿಸಿವೆ. ದೊಡ್ಡಾಟ, ದಪ್ಪಿನಾಟ, ಶ್ರೀ ಕೃಷ್ಣ ಪಾರಿಜಾತ, ಜಾನಪದ ಪ್ರಕಾರಗಳಾದ ಲಾವಣಿ ಹಾಡು ಗೀ ಗೀ ಪದ ಜಾನಪದ ಗೀತೆಗಳು ಬೀಸುವ ಕಲ್ಲಿನ ಪದ, ಸೋಬಾನ ಪದ, ಇವುಗಳಲ್ಲಿ ನಮ್ಮ ನಾಡಿನ ಪರಂಪರೆ ಹಾಸುಹೊಕ್ಕಾಗಿದೆ. ಇಂತಹ ಜಾನಪದ ಕಲೆ ಉಳಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದರು. ಕಾರ್ಯಕ್ರಮದಲ್ಲ ಮುಖ್ಯ ಅತಿಥಿಗಳಾಗಿ ಗ್ರಾಮದ ಹಿರಿಯರಾದ ವಿ.ಎಲ್. ಹಿರೇಗೌಡ್ರ, ಭೀಮರೆಡ್ಡಿ ರಡ್ಡೇರ, ಯಂಕಪ್ಪ ಕೋರಗಲ್, ರಾಜು ಹಿರೇಮಠ, ರಾಜು ಹುರಕಡ್ಲಿ, ತಿಪ್ಪಣ್ಣ ವಡ್ಡೀನ, ರಾಮಣ್ಣ ಮಡಿವಾಳ, ವೀರೇಶ ಹುರಕಡ್ಲಿ, ಮೈಲಪ್ಪ ದೇವರಮನಿ, ನಿಂಗಪ್ಪ ದೇವರಮನಿ, ಮಲ್ಲಯ್ಯ ಸಾಲಿಮಠ, ಬಸವರಾಜ ಹುಬ್ಬಳ್ಳಿ, ಬಡಕಪ್ಪ ಮಾಸ್ತರ ಬಳ್ಳಾರಿ, ಶಿವಪುತ್ರಪ್ಪ ಮಾಸ್ತರ ತಳವಾರ ಮಹೇಶ ಮಾಸ್ತರ ತಳವಾರ, ಇತರರು ವೇದಿಕೆ ಮೇಲೆ ಇದ್ದರು. ಅಶೋಕ ಬಳ್ಳಾರಿ ಸ್ವಾಗತಿಸಿದರು, ಪಕೀರೆಶ ಕಮ್ಮಾರ ನಿರೂಪಿಸಿದರು, ಬಸಯ್ಯ ಅಬ್ಬಿಗೇರಿ ಮಠ ವಂದಿಸಿದರು.

Advertisement

0 comments:

Post a Comment

 
Top