PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣದಾಳ ಗ್ರಾಮದ ಗ್ರಾಮ ಪಂಚಾಯತ್ ಮಾದರಿ ಲೋಕ ಶಿಕ್ಷಣ ಕೇಂದ್ರದಲ್ಲಿ ಮತದಾನ
ಸಾಕ್ಷರತೆ ಕುರಿತು ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಯಿತ್ತು.
ನಂತರ ಕೇಂದ್ರದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ೨೮ ಜನರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲ್ಲರಿಗೂ ಮತದಾನ ಜಾಗೃತಿ ಬಗ್ಗೆ ತಿಳಿಸಿ ಗ್ರಾಮದಲ್ಲಿರುವ ಪ್ರತಿ ಮನೆ ಮನೆಗೆ ತೆರಳಿ ೧೮ ವರ್ಷ ಮೇಲ್ಪಟ್ಟ ಮತದಾರರು ಕಡ್ಡಾಯವಾಗಿ ಮತ ಹಾಕಲು ತಿಳಿಸಲಾಯಿತು.  
ಈ ಸಂದರ್ಭದಲ್ಲಿ ಪ್ರೇರಕರಾದ ಬಸವರಾಜ ಹಡಪದ, ಕಮಲಾ, ಮುಖ್ಯಗುರು ಶರಣಪ್ಪ, ಬಸಮ್ಮ, ಜಯಶ್ರೀ ಸೇರಿದಂತೆ ಗ್ರಾಮದ ಶಿಕ್ಷಕರು, ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

Advertisement

0 comments:

Post a Comment

 
Top