PLEASE LOGIN TO KANNADANET.COM FOR REGULAR NEWS-UPDATES

 ಡಾ|| ಜಿ.ಎಸ್. ಶಿವರುದ್ರಪ್ಪನವರು ನಮ್ಮ ನಾಡು ಕಂಡ ದೊಡ್ಡ ಕವಿಗಳು, ಚಿಂತಕರು,ವಿಮರ್ಶಕರು ಹಾಗೂ ಪ್ರವಾಸ ಕಥನಕಾರರಾಗಿದ್ದರು. ಗ್ರಾಮೀಣ ಬಡಕುಂಟುಂಬದಿಂದ ಬಂದ ಅವರು  ಪ್ರಾರಂಭದಿಂದಲೂ ಪ್ರತಿಭಾನ್ವಿತರಾಗಿದ್ದು  ಜನ - ಮನವನ್ನು ಬದುಕಿಸಬೇಕೆಂದು ಆಶಿಸಿ ಬರೆದ ಕವಿಗಳಾಗಿದ್ದರು .  ೨೩ ಗದ್ಯ ಕೃತಿಗಳನ್ನು , ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ೬ ಸಂಪುಟಗಳನ್ನು, ಜನ ಸಾಮಾನ್ಯರಿಗಾಗಿ ರಚಿಸಿದ ಸಾಹಿತ್ಯ ಚರಿತ್ರೆಯ ೧೦ ಸಂಪುಟಗಳನ್ನು ಹೊರತಂದ ಕೀರ್ತಿ ಜಿ.ಎಸ್. ಶಿವರುದ್ರಪ್ಪನವರಿಗೆ ಸಲ್ಲುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲರಾದ ಕೊಪ್ಪಳದ ಹಿರಿಯ ಸಾಹಿತಿಗಳಾದ  ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು. 

          ದಿ  ೩ ರಂದು ಕೊಪ್ಪಳ ತಾಲೂಕಿನ ಇರಕಲ್‌ಗಡ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಇವರು ಹಮ್ಮಿಕೊಂಡಿದ್ದ  ರಸಗ್ರಹಣ  ಕಾರ್ಯಕ್ರಮದಲ್ಲಿ ಡಾ|| ಜಿ.ಎಸ್. ಶಿವರುದ್ರಪ್ಪನವರ  ಬದುಕು ಮತ್ತು ಬರಹ  ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು. ಚರ್ಚೆಯ  ಮನೋಧರ್ಮಕ್ಕೆ ಪ್ರೋತ್ಸಾಹ ನೀಡಿದ ನವೋದಯದ ಕವಿಗಳಾಗಿದ್ದ ಡಾ|| ಜಿ.ಎಸ್. ಶಿವರುದ್ರಪ್ಪನವರು ಪ್ರೀತಿ ವಿಶ್ವಾಸಗಳಿಂದ ಜೀವನ ನಡೆಸುವ ಬಗ್ಗೆ ತಮ್ಮ ಕವನಗಳಲ್ಲಿ ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.  ನಂತರ ಡಾ|| ಜಿ.ಎಸ್.ಶಿವರುದ್ರಪ್ಪನವರ ಪ್ರಮುಖ ಆಯ್ದ ಕವನಗಳನ್ನು ವಾಚಿಸಿ ಅವುಗಳ ಭಾವಾರ್ಥವನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮನ ಮುಟ್ಟುವಂತೆ ವಿವರಿಸಿದರು.  ಉಪನ್ಯಾಸದ ನಂತರ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸಂವಾದದಲ್ಲಿ ಪಾಲ್ಗೊಂಡಿದ್ದ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಡಾ|| ಜಿ.ಎಸ್. ಶಿವರುದ್ರಪ್ಪನವರ ಕವನಗಳನ್ನು ಹಾಡಿದರು.  ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಹನುಮಂತಪ್ಪ ಗುಡಿಹಿಂದಿನರವರು ಅಧ್ಯಕ್ಷತೆ ವಹಿಸಿದ್ದರು.  ಉಪನ್ಯಾಸಕರಾದ ಶ್ರೀ ಛತ್ರದ, ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಡಾ||ಹುಲಿಗೆಮ್ಮನವರು ಸ್ವಾಗತಿಸಿದರ
ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ   ಟಿ.ಕೊಟ್ರಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

Advertisement

0 comments:

Post a Comment

 
Top