೧೬ ಪ್ರಕಾರದ ಜನಪದ ಕಲೆಗಳ ಅನಾವರಣ-ರಾಜ್ಯ ಮಟ್ಟಕ್ಕೆ ತಂಡ ಆಯ್ಕೆ
ಕೊಪ್ಪಳ, ಮಾ. ೩. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗುಲ್ಬರ್ಗಾ ವಿಭಾಗ ಮಟ್ಟದ ಯುವಜನ ಮೇಳ ನಗರದ ಬಾಲಿಕೆಯರ ಸ. ಪ. ಪೂ. ಕಾಲೇಜು ಒಳಾಂಗಣ ಆವರಣದಲ್ಲಿ ನಿನ್ನೆ ವರ್ಣರಂಜಿತ ತೆರೆಕಂಡಿತು.
ಜಿಲ್ಲಾ ಪಂಚಾಯತ ಅಧ್ಯಕ್ಷ ಟಿ. ಜನಾರ್ಧನ, ತಾ. ಪಂ. ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ, ಜಿ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅಮರೇಶ ಕುಳಗಿ, ಅಶೋಕ ತೋಟದ, ಸಂಗನಗೌಡ್ರ ಬಿ. ಟಿ. ಪಾಟೀಲ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಯುವ ಸಂಘಟಕ ಡಾ|| ಎಸ್. ಬಾಲಾಜಿ, ಕೊಪ್ಪಳ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನ್‌ರಾವ್, ಯಾದಗಿರಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸೂಗಪ್ಪ ಪಾಟೀಲ, ಜಗದಯ್ಯ ಸಾಲಿಮಠ, ಸಿ. ವಿ. ಜಡಿಯವರ, ಮಂಜುನಾಥ ಜಿ. ಗೊಂಡಬಾಳ ಇತರರು ಇದ್ದರು.
ಭಾವಗೀತೆ, ಲಾವಣಿ, ರಂಗ ಗೀತೆ, ಜನಪದ ಗೀತೆ, ಜನಪದ ನೃತ್ಯ, ಡೊಳ್ಳು ಕುಣಿತ, ವೀರಗಾಸೆ, ಭಜನೆ ಹೀಗೆ ೧೬ ಪ್ರಕಾರಗಳ ಸ್ಪರ್ಧೆಗಳಲ್ಲಿ ಗುಲ್ಬರ್ಗಾ ವಿಭಾಗದ ೬ ಜಿಲ್ಲೆಯ ಕಲಾವಿದರು ಪಾಲ್ಗೊಂಡಿದ್ದರು. ದಶಕದ ಅವಧಿಯಲ್ಲಿ ಮೊದಲ ಬಾರಿ ಅಷ್ಟೊಂದು ಸಂಖ್ಯೆಯ ಸ್ಪರ್ಧಾಳುಗಳು ಪಾಲಗೊಂಡಿದ್ದು, ಊಟ, ವಸತಿ, ಉತ್ತಮ ವೇದಿಕೆ ಎಲ್ಲವೂ ಚೆನ್ನಾಗಿತ್ತು ಎಂದು ಸಮಾರೋಪದಲ್ಲಿ ಸ್ಪರ್ಧಾಳುಗಳು ಅಭಿಪ್ರಾಯ ಪಟ್ಟರು. ಎರಡನೆ ದಿನ ಕೊಪ್ಪಳ ಜಿಲ್ಲಾಮಟ್ಟದ ಯುವ ಸಮಾವೇಶ ಹಾಗೂ ಪರರಥಮ ಬಾರಿಗೆ ಗುಲ್ಬರ್ಗಾ ವಿಭಾಗದ ರಾಷ್ಟ್ರ ಮತ್ತು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲೆಯ ರಾಜ್ಯ ಯುವ ಪ್ರಶಸ್ತಿ ವಿಜೇತ ಜವಳಿ ರುದ್ರಪ್ಪ ಮಾತನಾಡಿ, ಮೊದಲ ಬಾರಿಗೆ ಮಂಜುನಾಥರು ನಮ್ಮೆಲ್ಲರನ್ನೂ ಒಂದು ವೇದಿಕೆಗೆ ತಂದಿದ್ದಾರೆ ಅದರಿಂದ ಸ್ಪೂರ್ತಿ ಪಡೆದ ನಾನು ರಾಜ್ಯಮಟ್ಟದಲ್ಲಿ ಇಂಥದೊಂದು ಕಾರ್ಯಕ್ರಮ ಮಾಡುತ್ತೇನೆ ಎಲ್ಲರೂ ಬನ್ನಿ ಎಂದರು. ಸಮಾರೋಪ ಭಾಷಣ ಮಾಡಿದ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕ ಡಾ|| ಎಸ್. ಬಾಲಾಜಿ ಮಾತನಾಡಿ, ಜನಪದ ಕಲೆಗಳು ಉಳಿಯಬೇಕಾದರೆ ಯುವ ಸಂಘಟನೆಗಳು ಗಟ್ಟಿಗೊಳ್ಳಬೇಕು, ಅವು ಜನಪದ ಕಲೆಗಳ ಸಂಗ್ರಹ ಮಾಡಬೇಕು ಎಂದರು. ವಿಭಾಗಮಟ್ಟದಲ್ಲಿ ಕಾರ್ಯಕ್ರಮ ಸಂಘಟಿಸಲು ಹಣ ಸಾಲದು ಅದು ದ್ವಿಗುಣಗೊಳ್ಳಬೇಕು, ಆದರೆ ಕೊಪ್ಪಳದಲ್ಲಿ ಮಾಡಿರುವ ಕಾರ್ಯಕ್ರಮ ಮಾದರಿಯಾಗಿದೆ ಅದನ್ನು ಬೇರೆ ವಿಭಾಗದವರಿಗೂ ತಿಳಿಸುವದಾಗಿ ಹೇಳಿದರು. ಸಮಾರಂಭದಲ್ಲಿ ರಾಷ್ಟ್ರ ಪರಶಸತಿ ಪಡೆದ ನಬಿಸಾಬ ಸಿಂಧನೂರ, ಓಂಪ್ರಕಾಶ ರೊಟ್ಟೆ ಬೀದರ, ಶಿವಯ್ಯಸ್ವಾಮಿ ಬೀದರ, ರಾಜ್ಯ ಪ್ರಶಸ್ತಿ ಪಡೆದ ಸುರೇಶ ಬಡಿಗೇರ, ಶಿವಕುಮಾರಸ್ವಾಮಿ ಬೀದರ, ಮಹೇಶ ಗುರನಾಳ್ಕರ ಬೀದರ, ಬಸವರಾಜ ಗಸ್ತಿ ಸಿಂಧನೂರ, ಹೇಮಾ ಸಿಂಧನೂರ, ರಮೇಶ ಗುಂಡಿ ಹೊಸಪೇಟೆ, ಎಚ್. ಸಿ. ರಾಘವೇಂದ್ರ ಹೊಸಪೇಟೆ, ಶರಣಪ್ಪ ವಡಗೇರಿ ಕುಷ್ಟಗಿ, ಅಕ್ಬರ ಸಿ. ಕಾಲಿಮಿರ್ಚಿ, ಜಗದಯ್ಯ ಸಾಲಿಮಠ, ಶ್ರೀನಿವಾಸ ಕಂಟ್ಲಿ, ಕ್ರೀಡಾ ಇಲಾಖೆ ಅಧೀಕಷಕ ರಾಮಕೃಷ್ಣ ಇಲಾಖೆ ಯೋಜನೆಗಳ ಕುರಿತು, ನಿವೃತ್ತ ಪರಾಂಶುಪಾಲ ಸಿ. ವಿ. ಜಡಿಯವರ ಜನಪದ ಮತ್ತು ಸಂಸಕೃತಿ ಕುರಿತು, ಡಾ|| ಎಸ್. ಬಾಲಾಜಿ ಯುವ ಸಂಘಟನೆ ಮತ್ತು ಹೋರಾಟ ಕುರಿತು, ಮಂಜುನಾಥ ಗೊಂಡಬಾಳ ಯುವಜನತೆ ಹಾಗೂ ಉದ್ಯೋಗ ಕುರಿತು ಮಾತನಾಡಿದರು. ಸಹಾಯಕ ಕ್ರೀಡಾಧಿಕಾರಿಗಳಾದ ಎನ್.ಎಸ್.ಪಾಟೀಲ ಕೊಪ್ಪಳ, ತಿಪ್ಪೇಸ್ವಾಮಿ ಗಂಗಾವತಿ, ಮಲ್ಲಿಕಾರ್ಜುನ ಲಕ್ಕಲಕಟ್ಟಿ ಕುಷ್ಟಗಿ, ಹನುಮಂತಪ್ಪ ವಗ್ಯಾನವರ ಯಲಬುರ್ಗಾ ಇತರರು ಇದ್ದರು.
ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳನ್ನು ಒಳಗೊಂಡ ಜನಪದ ಸೊಗಡಿನ ಈ ಮೇಳ ಅರ್ಥಪೂರ್ಣವಾಯಿತು ಎಂಬ ಕುಷಿ ಇದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೇಳಿದರು. ಸದಾಶಿವ ಪಾಟೀಲ ನಾಡಗೀತೆ ಹಾಡಿದರು, ದಾನಮ್ಮ ಗಂಗಾವತಿ ಹಾಗೂ ಮಂಜುನಾಥ ಬಂಡಿಹರ್ಲಾಪೂರ ಕಾರ್ಯಕ್ರಮ ನಿರ್ವಹಿಸಿದರು, ಧರ್ಮಣ್ಣ ಹಟ್ಟಿ ವಂದಿಸಿದರು.
0 comments:
Post a Comment