ಸೋಮವಾರ ನಗರದ ಕನ್ನಡ ಭವನದಲ್ಲಿ ನಡೆದ ರಂಗ ಸಮಾಜ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಬಸವ ಪುರಸ್ಕಾರ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ರಂಝಾನ್ ದರ್ಗಾ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಿದ್ದು, ಈ ಸಮಿತಿ ಅನಂತ ಮೂರ್ತಿಯವರನ್ನು ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ. ಬಸವ ಪುರಸ್ಕಾರ ಪ್ರಶಸ್ತಿಯು 10 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಉಮಾಶ್ರೀ ಇದೇ ಸಂದರ್ಭ ದಲ್ಲಿ ವಿವರಿಸಿದ್ದಾರೆ.
ನಿಯೋಜನೆ ರದ್ದು: ಮೈಸೂರಿನ ರಂಗಾಯಣ ಕಲಾವಿದರನ್ನು ಶಿವಮೊಗ್ಗ ಹಾಗೂ ಧಾರವಾಡಗಳಿಗೆ ನಿಯೋಜಿಸಿದ್ದನ್ನು ರದ್ದುಗೊಳಿಸಿದ್ದು, ಅವರನ್ನು ಪುನಃ ಮೈಸೂರಿನ ರಂಗಾಯಣದಲ್ಲಿ ವರದಿ ಮಾಡಿಕೊಳ್ಳಲು ಆದೇಶಿಸಲಾಗಿದೆ ಎಂದು ಉಮಾಶ್ರೀ ಹೇಳಿದ್ದಾರೆ.
ಜಕಣಾಚಾರಿ ಪ್ರಶಸ್ತಿ: 2012ನೆ ಸಾಲಿನ ಜಕಣಾಚಾರಿ ಪ್ರಶಸ್ತಿಗೆ ಬಳ್ಳಾರಿಯ ಜಿ.ಬಿ.ಹಂಸಾನಂದಚಾರ್ಯರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿ 3ಲಕ್ಷ ರೂ.ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ. ಲೋಹ ಶಿಲ್ಪಗಳಲ್ಲಿ ಪರಿಣಿತಿ ಪಡೆದ ಹಂಸಾ ನಂದಚಾರ್ಯರನ್ನು ಕನಕಮೂರ್ತಿ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಉಮಾಶ್ರೀ ನುಡಿದಿದ್ದಾರೆ.
ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆ: 2012ನೆ ಸಾಲಿನ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಧಾರವಾಡದ ರಂಗ ಕಲಾವಿದೆ ಲಕ್ಷ್ಮಿಬಾಯಿ ಏಣಗಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 3ಲಕ್ಷ ರೂ.ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಉಮಾಶ್ರೀ ಮಾಹಿತಿ ನೀಡಿದ್ದಾರೆ.
0 comments:
Post a Comment