PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ವಿದ್ಯಾರ್ಥಿಗಳು ಬರಿ ಶಿಕ್ಷಣವನ್ನು ಅಧ್ಯಯನ ಮಾಡಿದರೆ ಸಾಲದು ಅವರು ಇಂದಿನ ಜಾಗತೀಕರಣದಲ್ಲಿ ಶೈಕ್ಷಣಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದರು. ಅವರು ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ೨೦೧೩-೧೪ನೇ ಸಾಲಿನ ವಿಶೇಷ ಶಿಬಿರದಲ್ಲಿ ೪ನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಾಪಕರಾದ   ಶಿವಕುಮಾರ ಕುಕನೂರ ಮಾತನಾಡಿದರು. ಮುಂದುವರಿದು ವಿದ್ಯಾರ್ಥಿಗಳಲ್ಲಿನ ಸಕರಾತ್ಮಕ ಚಿಂತನೆಗಳು ಭವಿಷ್ಯವನ್ನು ನಿರ್ಮಿಸಿ ಯಶಸ್ವಿಗೆ ಕಾರಣವಾಗುತ್ತವೆ ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಧ್ಯಪಕರಾದ ಶ್ರೀ ಸಂತೋಷಗೌಡರ ಅವರು ವಿದ್ಯಾರ್ಥಿಗಳಲ್ಲಿನ ಚಿಂತನೆಗಳು ಸಾಧನೆಯ ಸೂತ್ರಗಳಾಗಬೇಕು ಉತ್ತಮ ಗುರಿ ಇಟ್ಟುಕೊಂಡು ಅದೇ ಮಾರ್ಗದಲ್ಲಿ ಸಾಗಿದಾಗ ಯಶಸ್ಸು ದೊರೆಯುತ್ತದೆ ಎಂದರು. ವೇದಿಕೆ ಮೇಲೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಸಿದ್ದಲಿಂಗಪ್ಪ
ಕೊಟ್ನೆಕಲ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಂಜನಾ ಕಂದಾರಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಸಣ್ಣದುರಗೇಶ ಸ್ವಾಗತಿಸಿದರೆ, ಕೊನೆಗೆ ರಮೇಶ ನಾಯಕ ವಂದಿಸಿದರು. ಹನುಮಂತ ವಾಲ್ಮೀಕಿ ಮತ್ತು ಕೆ.ಎಂ.ವಿರುಪಾಕ್ಷಯ್ಯ ಕಾರ್ಯಕ್ರಮ ನಿರೂಪಿಸಿರು. ಈ ಶಿಬಿರದಲ್ಲಿ ೫೦ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top