ಸ್ವಾಮಿ ವಿವೇಕಾನಂದ ಶಾಲೆಯು ಕೊಪ್ಪಳದ ಆಕ್ಸಫರ್ಡ ಇದ್ದಂತೆ. ಇಂತಹ ಆಕ್ಸಫರ್ಡನಲ್ಲಿ ಶೇಕ್ಸಪಿಯರ್, ಟೆನ್ನಿಸನ್‌ನಂತಹ ಸಾಹಿತಿಗಳು ಉದಯವಾಗಬೇಕು. ಸಾಹಿತ್ಯದತ್ತ ವಿದ್ಯಾರ್ಥಿಗಳ ಅಭಿರುಚಿ ಬೆಳೆಯಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಿಗೆ ಗಟ್ಟಿಬರಹ ಪ್ರಾಪ್ತವಾಗುತ್ತದೆ ಎಂದು ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ನುಡಿದರು.
ಅವರು ಇದೇ ನವಂಬರ್ ೧೪ ರಂದು ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ 'ಕವಿಸಮೂಹ'ದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 'ವಿದ್ಯಾರ್ಥಿ ಕವಿಸಮಯ-ಮಕ್ಕಳ ಬಹುಭಾಷಾ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ಈ ಮೇಲಿನಂತೆ ನುಡಿದರು.
ಇನ್ನೋರ್ವ ಅತಿಥಿಗಳಾಗಿದ್ದ ಕನ್ನಡನೆಟ್.ಕಾಂ ಸಂಪಾದಕರಾದ ಸಿರಾಜ್ ಬಿಸರಳ್ಳಿ ಮಾತನಾಡುತ್ತ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಲು ಸಾಹಿತ್ಯ ಮತ್ತು ಅಧ್ಯಯನ ಅಗತ್ಯವಾಗಿದೆ. ಕವಿಗೆ ಭಾಷೆಯ ಚೌಕಟ್ಟು ಇರುವುದಿಲ್ಲ. ಭಾಷೆ ಯಾವುದೇ ಇರಲಿ ಮಕ್ಕಳು ಬರೆಯುವುದನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೇ, ಬಹುಭಾಷಾ ಕವನ ವಾಚನಗೈದ ೧೫ ವಿದ್ಯಾರ್ಥಿಗಳ ಕಾವ್ಯದ ವಿಮರ್ಶೆಯನ್ನೂ ಮಾಡಿದರು.
ಕವಿ, ಶಿಕ್ಷಕ ಮಾನಪ್ಪ ಬೆಲ್ಲದ್ ಮಾತನಾಡಿ ವಿದ್ಯಾರ್ಥಿ ಜೀವನದ ಮಹತ್ವದ ಕುರಿತು ಹೇಳಿದರು. ಅಧ್ಯಕ್ಷತೆ ವಹಿಸಿದ ಶಾಲಾ ಹಿರಿಯ ಶಿಕ್ಷಕ ಎಸ್.ಸಿ. ಹಿರೇಮಠ ನೆಹರೂ ಧೀಮಂತ ವ್ಯಕ್ತಿತ್ವದ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ಶಿಕ್ಷಕ ಮಹೇಶ ಬಳ್ಳಾರಿ ಮಾತನಾಡಿದರೆ, ನಿರೂಪಣೆಯನ್ನು ಕು. ರಶ್ಮಿ, ನಜತ್, ವಿಭಾ ನೆರವೇರಿಸಿದರು. ಸ್ವಾಗತವನ್ನು ಕು. ಮೇಘಾ ವಾರದ ಮಾಡಿದರೆ, ಪ್ರಿಯಾಂಕಾ ಮಾನ್ವಿ ವಂದಿಸಿದರು.
ವಿದ್ಯಾರ್ಥಿಗಳಾದ ಕು. ಪ್ರಿಯಾ ಪುರಂದರೆ, ಕೊಟ್ರೇಶ, ಸಾಗರ ಹುಲ್ಲೂರ, ದಾದಾಪೀರ, ಮುಕ್ತಾರ್ ಆಲಂ, ಅಕ್ಷಯ್ ಬೆಲ್ಲದ್, ಪೂರ್ಣಿಮಾ ಮೆಣಸಿನಕಾ, ನಮ್ರತಾ, ಪೂರ್ಣಿಮಾ ಪಾಟೀಲ, ರಾಗಿಣಿ, ಕೆ.ಎಸ್. ಶಶಾಂಕ್ ಕವನ ವಾಚನ ಮಾಡಿದರು.
0 comments:
Post a Comment