PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಜಿಲ್ಲಾ ಪಂಚಾಯತಿ ಕೊಪ್ಪಳ, ಎನ್.ಟಿ.ಟಿ.ಎಫ್. ಬೆಂಗಳೂರು ಹಾಗೂ ಸುಮೆರು ಫೌಂಡೇಶನ್ ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಸಂಜೀವಿನಿ-ಎನ್.ಆರ್.ಎಲ್.ಎಂ. ಯೋಜನೆಯಡಿ ಐಟಿಐ ಮತ್ತು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ರಾಜೀವ್‍ಗಾಂಧಿ ಚೈತನ್ಯ ಯೋಜನೆಯ ಫಲಾನುಭವಿಗಳಿಗೆ ತಾಂತ್ರಿಕ ತರಬೇತಿ ಹಾಗೂ ಉದ್ಯೋಗ ಪ್ರಾಪ್ತಿ ಕುರಿತು ಸಮಾಲೋಚನೆ ಸಭೆ ಜ.18 ರಂದು ಬೆಳಿಗ್ಗೆ 11.30 ಕ್ಕೆ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ರಾಜೀವ್‍ಗಾಂಧಿ ಚೈತನ್ಯ ಯೋಜನೆಯ ಫಲಾನುಭವಿಯಾಗಿರಬೇಕು, 18 ರಿಂದ 21 ವರ್ಷದವರಾಗಿರಬೇಕು, ಫಲಾನುಭವಿಯು ಎಸ್‍ಎಸ್‍ಎಲ್‍ಸಿ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿದ್ದರೆ ಶೇ.50% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅರ್ಹ ಫಲಾನುಭವಿಗಳು ಆಯಾ ತಾಲೂಕಾ ಪಂಚಾಯತಿಯ ಎನ್.ಆರ್.ಎಲ್.ಎಮ್. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಲ್ಲಿ ನೋಂದಣಿ ಮಾಡಿಕೊಳ್ಳಬೇಕು.  ನೋಂದಣಿಗಾಗಿ ಕೊಪ್ಪಳ ತಾಲೂಕು ಅಭ್ಯರ್ಥಿಗಳು, ಸಾಬಣ್ಣ-988692434, ಯಲಬುರ್ಗಾ - ಉದಯಕುಮಾರ-9986136129, ಕುಷ್ಟಗಿ - ಕರಿಬಸಪ್ಪ-8970264440, 8151892193 ಹಾಗೂ ಗಂಗಾವತಿ ತಾಲೂಕು ಅಭ್ಯರ್ಥಿಗಳು ಮಲ್ಲಿಕಾರ್ಜುನ-7022042421 ಇವರನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.

Advertisement

0 comments:

Post a Comment

 
Top