PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಶಿಕ್ಷಣದಿಂದ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ಕಾಳಿದಾಸ ಪ್ರೌಢ ಶಾಲೆಯಲ್ಲಿ ಕರ್ನಾಟಕ ಕುರಬರ ಬೋರ್ಡ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಯಾವುದೇ ಒಂದು ಸಮಾಜದ ಬದಲಾವಣೆಯನ್ನು ಹೊಂದಬೇಕಾದರೆ ಸಮಾಜದಲ್ಲಿನ ಎಲ್ಲರೂ ಮೊದಲು ಶಿಕ್ಷಣವನ್ನು ಪಡೆಯಬೇಕು,ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದಲ್ಲಿ ಬದಲಾವಣೆಯನ್ನು ತರಬಹುದು ಜೊತೆಗೆ ಅಭಿವೃದ್ದಿ ಹೊಂದಲು ಸಾಧ್ಯ.ಕಾಳಿದಾಸ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ರೀತಿಯಲ್ಲಿ ನೇರವು ನಿಡುವುದರೊಂದಿಗೆ ಸಮಾಜದ ಅಭಿವೃದ್ದಿಗೆ ಶ್ರಮಿಸುವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ ಉದ್ಘಾಟಿಸಿದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಮುಖಂಡರು ಹಾಗೂ ಕುರುಬರ ಬೋರ್ಡಿಂಗ್‌ನ ಅಧ್ಯಕ್ಷರಾದ ಹನುಮಂತಪ್ಪ ಅಂಗಡಿ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ಗವಿಸಿದ್ದಪ್ಪ ಹಿಟ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
 ಕಾರ್ಯಕ್ರಮದಲ್ಲಿ ಎಚ್.ಎಸ್.ಪಾಟೀಲ, ಎ.ಪಿ.ಎಂ.ಸಿ.ಯ ಅಧ್ಯಕ್ಷರಾದ ಡಿ.ಮಲ್ಲಣ್ಣ,ಲಿಂಗರಾಜ ಬಿರಾದಾರ,ಬಸವರಾಜ ಆಕಳವಾಡಿ,ನಾಗರಾಜ ಜುಮ್ಮನವರ,ಎಸ್.ಬಿ.ಕುರಿ,ಅಂದಪ್ಪ ಮರೇಬಾಳ,ಮಂಜುನಾಥ ಅಬ್ಬಿಗೇರಿ,ಜಂಭಣ್ಣ ನಂದ್ಯಾಪುರ,ರಾಮಣ್ಣ ಬನ್ನಿಗೋಳ,ಜಡಿಯಪ್ಪ ಬಂಗಾಳಿ,ಪ್ರಸನ್ನ ಗಡಾದ,ಅಮರೇಶ ಉಪಲಾಪೂರ,ವೀರುಪ್ಪಣ್ಣ ಕುರುಬರ ಮುಂತಾದವರು ಹಾಜರಿದ್ದರು. ಎಂ.ಬಿ.ಗಟ್ಟಿ ಸ್ವಾಗತಿಸಿ,ಶಿಕ್ಷಕರಾದಡಿ.ರಾಮಣ್ಣ ಎಲ್ಲರಿಗೂ ವಂದಿಸಿದರು ಎಂದು ಬೀರಪ್ಪ ಅಂಡಗಿ ಚಿಲವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೋಟೊ: ಕರ್ನಾಟಕ ಕುರುಬರ ಬೋರ್ಡಿಂಗ್ ವತಿಯಿಂದ ನೂತನ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರನ್ನು ಸನ್ಮಾನಿಸಲಾಯಿತು.



Advertisement

0 comments:

Post a Comment

 
Top