ಕೊಪ್ಪಳ ಜೂನ ೩೦: ರೋಟರಿಯಿಂದ ಶಾಲೆ ಪ್ರಾರಂಭಿಸುವುದು, ರೋಟರಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು, ಮಹಿಳೆಯರಿಗೆ ಮತ್ತು ಯುವಕರಿಗೆ ಸದಸ್ಯತ್ವದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಆರೋಗ್ಯ ಜಾಗೃತಿ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದು, ರೋಟರಿ ಆವರಣದಲ್ಲಿ ಉದ್ಯಾನವನ ನಿರ್ಮಿಸುವುದು, ಶಾಲಾ ಕಟ್ಟಡ ನಿರ್ಮಿಸುವುದು, ರೋಟರಿ ಪೌಂಡೇಶನ್‌ಗೆ ೨೦೦೦ ಡಾಲರ್ ದೇಣಿಗೆ ನೀಡುವುದು, ಶಿಶುವಿಹಾರವನ್ನು ಆರಂಭಿಸುವುದು, ಶಿಕ್ಷಕರ ದಿನಾಚರಣೆ, ಮಕ್ಕಳ ದಿನಾಚರಣೆ, ವೈದ್ಯರ ದಿನಾಚರಣೆ ಹಮ್ಮ್ಮಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಕೊಪ್ಪಳ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾದ ಇಂದಿರಾ ಭಾವಿಕಟ್ಟಿ ಹೇಳಿದರು.
ಅವರು ರವಿವಾರ ಬೆಳಗ್ಗೆ ಭಾಗ್ಯನಗರ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಹಮ್ಮಿಕೊಂಡ ೨೦೧೩-೧೪ ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ರೋಟರಿ ಜಿಲ್ಲೆ ೩೧೬೦ ರ ಮಾಜಿ ಜಿಲ್ಲಾ ಗವರ್ನರ ಪಿ.ಎಸ್. ಶಂಭುಲಿಂಗಪ್ಪ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೀಡಿ ಮಾತನಾಡುತ್ತಾ, 'ರೋಟರಿಯಲ್ಲಿ ತೊಡಗಿಸಿ ಸೇವೆಯನ್ನು ಸಲ್ಲಿಸಿ' ಇದು ಈ ವರ್ಷದ ಉದ್ದೇಶ ವಾಗಿದೆ. ರೋಟರಿ ಸದಸ್ಯರು ತಮಗೆ ಸಿಕ್ಕ ಕಾಲಾವಾಕಾಶದಲ್ಲಿ ತಮ್ಮ ಶಕ್ತಿಯನ್ನು ಮೀರಿ ಈ ಸಂಸ್ಥೆಗೆ ಸೇವೆ ಸಲ್ಲಿಸಬೇಕು ಎಂದರು.
ಮಾಜಿ ಜಿಲ್ಲಾ ಗವರ್ನರ ಡಾ|| ಕೆ.ಜಿ ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ರೋಟರಿ ಸಂಸ್ಥೆಯಿಂದ ದೇಶದಲ್ಲಿ ಅಲ್ಲದೇ ಹೊರದೇಶದಲ್ಲಿಯೂ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ|| ಮಹಾದೇವ ಸ್ವಾಮಿ, ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಅಲಬಣ್ಣ ಕಣವಿ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಸಂಧ್ಯಾ ಮಾದಿನೂರ, ಸಾಹಿತಿಗಳಾದ ಡಾ. ವಿ. ಬಿ. ರಡ್ಡೇರ, ರೊಟರಿ ಸದಸ್ಯರಾದ ವೀರಣ್ಣ ಕಮತರ, ಹಿರಿಯರಾದ ಸಿದ್ದಲಿಂಗಯ್ಯ ಹಿರೆಮಠ, ಡಾ|| ರಾಧಾ ಕುಲಕರ್ಣಿ, ಎಸ್.ಎಲ್. ಮಾಲಿಪಾಟೀಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೊಮ್ಮಣ್ಣ ಆರ್ ಅಕ್ಕಸಾಲಿ ನಿರೂಪಿಸಿದರು. ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಡಾ. ಮಹಾಂತೇಶ ಮಲ್ಲನಗೌಡರ ಸ್ವಾಗತಿಸಿದರು. ಶೈಲಜಾ ಶರಣಪ್ಪ ವರದಿ ವಾಚನ ಮಾಡಿದರು. ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾದ ನೀಲಪ್ಪ ಬಾವಿಕಟ್ಟಿ ಅತಿಥಿಗಳ ಪರಿಚಯ ಮಾಡಿದರು. ನೂತನ ಕಾರ್ಯದರ್ಶಿಗಳಾದ ಎ.ಜಿ.ಶರಣಪ್ಪ ವಂದಿಸಿದರು.
0 comments:
Post a Comment