PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ.   ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಈ ಬಾರಿ ಗ್ರಾಹಕ ಸಂರಕ್ಷಣಾ ಕಾಯ್ದೆ- ೧೯೮೬-೨೫ ವರ್ಷಗಳ ಸಾಧನೆ ಎಂಬ ಘೋಷವಾಕ್ಯದೊಂದಿಗೆ ದಿನಾಚರಣೆ ಆಚರಿಸಲಾಗುತ್ತಿದ್ದು, ಗ್ರಾಹಕರ ಜವಾಬ್ದಾರಿಗಳು ಮತ್ತು ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡುವುದು ಅಗತ್ಯವಾಗಿದೆ.
  ಸಾರ್ವಜನಿಕರು ತಮ್ಮ ದೈನಂದಿನ ಜೀವನದಲ್ಲಿ ಗ್ರಾಹಕರಾಗಿ ಸಮಾಜದಲ್ಲಿ ಕೆಲಸಗಳನ್ನು ನಿರ್ವಹಿಸಬೇಕಾಗುತ್ತಿದ್ದು, ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಗಳು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿರಬೇಕು, ಗ್ರಾಹಕರ ಜವಾಬ್ದಾರಿಗಳೆಂದರೆ, ಖರೀದಿಯ ಪೂರ್ವ ಯೋಜನೆಯನ್ನು ತಯಾರಿಸಿಕೊಳ್ಳುವುದು, ಖರೀದಿಸುವ ವಸ್ತುವಿನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಳ್ಳುವುದು, ಇಷ್ಟಪಡುವ ವಸ್ತುವನ್ನು ಆಯ್ಕೆ ಮಾಡಲು ಹಿಂಜರಿಯಬಾರದು, ಆಯ್ಕೆಯ ನಿರ್ಧಾರ ಗ್ರಾಹಕರದೇ ಅಂತಿಮ, ವಸ್ತುಗಳನ್ನು ಕಂಡ ಕೂಡಲೇ ಖರೀದಿಸಬಾರದು, ಆ ವಸ್ತುಗಳ ಗುಣಮಟ್ಟ, ಗುಣಮಾನಕ ಅಂದರೆ ಐಎಸ್‌ಐ / ಆಗ್ಮಾರ್ಕ್ ಹೊಂದಿರುವುದನ್ನು ಖಾತ್ರಿ ಪಡಿಸಿಕೊಂಡು ಖರೀದಿಸುವುದು, ಕಳ್ಳಸಂತೆಯಲ್ಲಿ ವಸ್ತುಗಳನ್ನು ಖರೀದಿಸಬಾರದು, ಜಾಹೀರಾತುಗಳ ಭರವಸೆಗಳಿಗೆ ಮರಳಾಗಬಾರದು, ಪರಿಸರವನ್ನು ಮಲಿನಗೊಳಿಸದಂತೆ, ಸಂಪನ್ಮೂಲ ಉಳಿಸುವುದು, ವಸ್ತುಗಳಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಭದ್ರವಾಗಿಟ್ಟುಕೊಳ್ಳುವುದು, ವಂಚನೆ ಕಂಡುಬಂದಾಗ ದೂರು ಕೊಡಲು ಹಿಂಜರಿಯಬಾರದು, ನಕಲಿ ವಸ್ತುವಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಆ ಕುರಿತು ತಯಾರಕರಿಗೆ ಮಾಹಿತಿ ನೀಡುವುದು ಗ್ರಾಹಕರ ಜವಾಬ್ದಾರಿಗಳಾಗಿವೆ.  ಇನ್ನು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದಾದರೆ, ಅತ್ಯವಶ್ಯಕ ಪದಾರ್ಥಗಳು, ವಸ್ತುಗಳು ಮತ್ತು ಸೇವೆಗಳ ಹಕ್ಕು ಗ್ರಾಹಕರು ಹೊಂದಿರುತ್ತಾರೆ.  ಅದೇ ರೀತಿ ಯಾವುದೇ ಪದಾರ್ಥ, ಸೇವೆಗಳಿಂದ ಜೀವಕ್ಕೆ ಇಲ್ಲವೆ ಆಸ್ತಿಪಾಸ್ತಿಗೆ ಹಾನಿ ಆಗದಂತೆ ಸುರಕ್ಷತೆಯನ್ನು ಹೊಂದುವುದು, ತಾವು ಖರೀದಿಸುವ ವಸ್ತು, ಪದಾರ್ಥ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದುವುದು, ಸಾಧ್ಯವಾಉವ ಸಂದರ್ಭದಲ್ಲಿ/ ಕಡೆಗಳಲ್ಲಿ ತಮಗೆ ಬೇಕೆನಿಸುವ ವಸ್ತು, ಪದಾರ್ಥ ಇಲ್ಲವೆ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವುದು, ಬಳಕೆದಾರರಿಗೆ ಸಂಬಂಧಪಟ್ಟ ವಿಷಯಗಳಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸಲು ಪ್ರಾತಿನಿಧ್ಯದ ಹಕ್ಕು, ದೋಷಯುಕ್ತ ವಸ್ತು, ಪದಾರ್ಥ ಅಥವಾ ಸೇವೆಯಿಂದ ಉಂಟಾಗುವ ನಷ್ಟಕ್ಕೆ ಅಥವಾ ಹಾನಿಗೆ ಪರಿಹಾರ ಪಡೆಯುವ ಹಕ್ಕು, ಮಾರುಕಟ್ಟೆಯಲ್ಲಿ ಬುದ್ದಿವಂತಿಕೆಯಿಂದ ವ್ಯವಹಾರ ನಡೆಸಲು ಬೇಕಾದ ಗ್ರಾಹಕ ಶಿಕ್ಷಣ ಹಕ್ಕು ಹಾಗೂ ಮಾಲಿನ್ಯಗೊಳ್ಳದ ಪರಿಸರದ ಹಕ್ಕನ್ನು ಪ್ರತಿಯೊಬ್ಬ ಗ್ರಾಹಕರು ನ್ಯಾಯಯುತವಾಗಿ ಹೊಂದಿದ್ದಾರೆ. 
  ಗ್ರಾಹಕರ ಜವಾಬ್ದಾರಿಗಳು ಮತ್ತು ಗ್ರಾಹಕರ ಹಕ್ಕುಗಳ ಬಗ್ಗೆ ಎಲ್ಲ ಸಾರ್ವಜನಿಕರು ಅರಿವು ಹೊಂದಿದಲ್ಲಿ, ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎನ್ನುತ್ತಾರೆ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಅಶೋಕ ಕಲಘಟಗಿ ಅವರು.

Advertisement

0 comments:

Post a Comment

 
Top