ಕೊಪ್ಪಳ ಜುಲೈ ೦೧, ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉಪಯೋಗ ಮಾಡಿಕೊಳ್ಳುವುದರಲ್ಲಿ ತಾಲೂಕಿನಲ್ಲಿಯೇ ಮಾದರಿ ಕೆಲಸವಾಗಿದೆ. ಪ್ರತಿದಿನ ಸತತವಾಗಿ ೩೦೦ ರಿಂದ ೩೫೦ ಜನ ಕೂಲಿಕಾರ್ಮಿಕರು ದುಡಿಯುತ್ತಿದ್ದಾರೆ, ಯಾವುದೇ ಜೆಸಿಬಿ ಯಂತ್ರಗಳನ್ನು ಬಳಕೆ ಮಾಡದೆ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಯಾವುದೇ ಯಂತ್ರೋಪಕರಣಗಳು ಮಾಡುವ ಕಲಕ್ಕೆ ಮಾರುಹೋಗದೆ. ಸ್ಥಳಿಯ ಕೂಲಿಕಾರ್ಮಿಕರಿಗೆ ಈ ಕೆಲಸವನ್ನು ಮೀಸಲಾಗಿಟ್ಟು ಅವರಿಗೆ ಉದ್ಯೋಗವದಗಿಸಿ ಕೊಡುವ ಮುಖಾಂತರ ಈ ಯೋಜನೆ ಸಂಪೂರ್ಣ ಲಾಬವನ್ನು ಕೂಲಿಕಾರ್ಮಿಕರಿಗೆ ಮಿಸಲಾಗಿಡಲಾಗಿದೆ.ಈ ಎಲ್ಲಾ ಕೆಲಸವು ನಡೆಯಬೇಕಾದರೆ ಮುಖ್ಯವಾಗಿ ಉದ್ಯೋಗ ಖಾತ್ರಿ ಬರ ಹೋರಾಟ ಸಮಿತಿಯ ಶ್ರಮವನ್ನು ಇಲ್ಲಿ ಸ್ಮರಿಸಲೆಬೇಕು. ಯಮನುರಸಾಬ್ ಹಿರೆಮಸುತಿ ತಿಳಿಸಿದ್ದಾರೆ.
0 comments:
Post a Comment