ರಾಜ್ಯ ಸರ್ಕಾರಿ ನೌಕರರ ಸಂಘದ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯಕಾರಿ ಸಮಿತಿಗೆ ಜರುಗುವ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದೆ.
ಜಿಲ್ಲಾ, ತಾಲೂಕು ಶಾಖೆ ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿಗೆ ಜು. ೧೧ ರಿಂದ ೨೨ ರವರೆಗೆ ಚುನಾವಣೆ ಪ್ರಕ್ರಿಯೆ ಜರುಗಲಿದೆ. ಅದೇ ರೀತಿ ತಾಲೂಕು ಶಾಖೆ, ಯೋಜನಾ ಘಟಕಗಳ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ಜು. ೨೩ ರಿಂದ ಆಗಸ್ಟ್ ೦೧ ರವರೆಗೆ. ಜಿಲ್ಲಾ ಶಾಖೆ ಅಧ್ಯಕ್ಷರು, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಚುನಾವಣೆ ಆಗಸ್ಟ್ ೦೨ ರಿಂದ ೧೨. ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಇಲಾಖಾವಾರು ಚುನಾವಣೆಗಳು ಜು. ೧೧ ರಿಂದ ಆಗಸ್ಟ್ ೦೫. ಹಾಗೂ ಕೇಂದ್ರ ಸಂಘದ ಅಧ್ಯಕ್ಷರು ಮತ್ತು ಖಜಾಂಚಿ ಸ್ಥಾನದ ಚುನಾವಣೆಗಳು ಆಗಸ್ಟ್ ೨೨ ರಿಂದ ಸೆಪ್ಟಂಬರ್ ೧೩ ರವರೆಗೆ ನಡೆಯಲಿವೆ.
ಜಿಲ್ಲಾ ಮತ್ತು ತಾಲೂಕು ಕಾರ್ಯಕಾರಿ ಸಮಿತಿ ಚುನಾವಣೆಗೆ ಜು. ೧೧ ರಿಂದ ೧೫ ರ ಸಂಜೆ ೪ ಗಂಟೆಯವರೆಗೆ ನಾಮಪತ್ರಗಳ ವಿತರಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜುಲೈ ೧೫ ಸಂಜೆ ೦೫ ಗಂಟೆ ಕೊನೆಯ ದಿನಾಂಕವಾಗಿದೆ. ಜು. ೧೫ ರಂದು ಸಂಜೆ ೫ ಗಂಟೆಯ ನಂತರ ನಾಮಪತ್ರಗಳ ಪರಿಶೀಲನೆ ನಡೆದು, ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ಉಮೇದುವಾರಿಕೆ ಹಿಂಪಡೆಯಲು ಜು. ೧೬ ರಂದು ಸಂಜೆ ೦೪ ಗಂಟೆಯವರೆಗೆ ಅವಕಾಶವಿರುತ್ತದೆ. ಜು. ೨೨ ರಂದು ಬೆಳಿಗ್ಗೆ ೧೧ ರಿಂದ ಸಂಜೆ ೦೪ ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, ಅದೇ ದಿನ ಸಂಜೆ ೪-೩೦ ಗಂಟೆಗೆ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮತಗಳ ಎಣಿಕೆ ನಂತರ ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಮತ್ತು ಪ್ರಧಾನಕಾರ್ಯದರ್ಶಿ ನಾಗರಾಜ ಜುಮ್ಮನ್ನವರ ತಿಳಿಸಿದ್ದಾರೆ.
0 comments:
Post a Comment