ಡಿಸೆಂಬರ್ ೨೦೧೦ ಕ್ಕಿಂತ ಮೊದಲು ಖಾಯಂ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಕೊಪ್ಪಳ ಜಿಲ್ಲೆಯ ಕಾರ್ಡುದಾರರು ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದ ಗ್ರಾ.ಪಂ. ಗಳಲ್ಲಿ ಹಾಗೂ ನಗರ/ಪಟ್ಟಣ ಪ್ರದೇಶಗಳಲ್ಲಿ ಪ್ರಾರಂಭಿಸಿರುವ ಸೇವಾ ಕೇಂದ್ರಗಳಲ್ಲಿ ಇಂತಹ ಕಾರ್ಡುಗಳ ನವೀಕರಣಕ್ಕಾಗಿ ಹಾಗೂ ತಿದ್ದುಪಡಿಗಳಿಗಾಗಿ ಕುಟುಂಬ ಸದಸ್ಯರ ಭಾವಚಿತ್ರ ಹಾಗೂ ಹೆಬ್ಬೆರಳು ಗುರುತನ್ನು ಸಂಗ್ರಹಿಸುವ ಕಾರ್ಯ ನಡೆದಿದ್ದು, ಈ ರೀತಿ ಖಾಯಂ ಕಾರ್ಡುಗಳನ್ನು ನವೀಕರಿಸಲು ಮತ್ತು ಬದಲಾಯಿಸಲು ಕೋರಿದ ಕಾರ್ಡುದಾರರಿಗೆಲ್ಲ ಖಾಯಂ ಕಾರ್ಡುಗಳನ್ನು ಮುದ್ರಿಸಿ ನೀಡಲು ಕಾಲಾವಕಾಶ ಬೇಕಾಗಿರುವುದರಿಂದ ಕಾರ್ಡುದಾರರು ಈ ವಿಷಯಕ್ಕೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇಂತಹ ಕಾರ್ಡುದಾರರು ಗ್ರಾಮಾಂತರ ಪ್ರದೇಶದವರಾಗಿದ್ದಲ್ಲಿ ಸಂಬಂಧಪಟ್ಟ ತಮ್ಮ ಗ್ರಾ.ಪಂ. ಕಛೇರಿಗಳಿಗೆ ಹಾಗೂ ನಗರ/ಪಟ್ಟಣ ಪ್ರದೇಶದವರಾಗಿದ್ದಲ್ಲಿ ತಹಶೀಲ್ದಾರರ ಕಛೇರಿಗಳಿಗೆ ಹೋಗಿ ಖಾಯಂ ಕಾರ್ಡುಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಗ್ರಾಮಾಂತರ ಕಾರ್ಡುಗಳನ್ನು ಯಾವುದೇ ಕಾರಣ್ಕೂ ತಹಶೀಲ್ದಾರರ ಕಛೇರಿಯಲ್ಲಿ ವಿತರಿಸುವುದಿಲ್ಲ, ಈಗಾಗಲೇ ಕುಟುಂಬದ ಸದಸ್ಯರೆಲ್ಲರೂ ಭಾವಚಿತ್ರ ಹಾಗೂ ಜೀವಮಾಪನ ನೀಡಿದ್ದು ಈ ಪ್ರಕ್ರಿಯೆ ಮುಕ್ತಾಯದ ನಂತರ ನೀಡಿರುವ ಸ್ವೀಕೃತಿಯನ್ನು ನ್ಯಾಯಬೆಲೆ ಅಂಗಡಿಕಾರರಿಗೆ ನೀಡಿ ಅಥವಾ ತೋರಿಸಿ ಪಡಿತರ ಧಾನ್ಯ ಅಕ್ಕಿ, ಗೋದಿ, ಸಕ್ಕರೆ ಹಾಗೂ ಸೀಮೆ ಎಣ್ಣೆಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ
0 comments:
Post a Comment