
ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿಯವರ ೫೦ನೇ ಹುಟ್ಟುಹಬ್ಬವನ್ನು ಕೊಪ್ಪಳ ತಾಲೂಕ ಜ್ಯಾತ್ಯಾತೀತ ಜನತಾದಳದಿಂದ ಆಚರಿಸಲಾಯಿತು. ಈ ನಿಮಿತ್ಯ ಕೊಪ್ಪಳದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೇಡ್, ಹಾಲು, ಹಣ್ಣು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕ ಜ್ಯಾತ್ಯಾತೀತ ಜನತಾದಳ ಅಧ್ಯಕ್ಷರಾದ ಅಂದಪ್ಪ ಮರೇಬಾಳ, ನಗರಯುವ ಘಟಕದ ಸಯೈದ್ ಮಹೆಮೂದ್ ಹುಸೇನಿ, ಪ್ರಧಾನ ಕಾರ್ಯದರ್ಶಿ ವೇಂಕಟೆಶ ಬೆಲ್ಲದ, ನಗರಸಭಾ ಸದಸ್ಯರಾದ ಖಾಜಾವಲ್ಲಿ ಬನ್ನಿಕೊಪ್ಪ, ಚನ್ನಪ್ಪ ಕೊಟ್ಯಾಳ, ಮುಖಂಡರಾದ ವಿರೇಶ ಮಹಾಂತಯ್ಯನಮಠ, ಶಂಕರ ಗೆಜ್ಜಿ, ಎಂ.ಡಿ.ಹುಸೇನ, ರವುಫ್ ಕಿಲ್ಲೇದಾರ್, ಗೌಸ ಪಲ್ಟನ್ ಇನ್ನೂ ಅನೇಕ ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.
0 comments:
Post a Comment