PLEASE LOGIN TO KANNADANET.COM FOR REGULAR NEWS-UPDATES

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ ಕೊಪ್ಪಳ ಘಟಕವು ಶಿಕ್ಷಣದ ವ್ಯಾಪಾರೀಕರಣ ಹಾಗೂ ಖಾಸಗೀಕರಣವನ್ನು ಖಂಡಿಸಿ ದಿನಾಂಕ: ೧೨-೦೬-೨೦೧೩ ರಂದು ನಗರದ ಅಶೋಕ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಎಸ್.ಐ.ಓ. ನೇತೃತ್ವದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಲು ಹಾಗೂ ಖಾಸಗಿ ಶಾಲೆಗಳು ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡುತ್ತಿರುವುದರ ವಿರುದ್ಧ ಪ್ರತಿಭಟನೆಯನ್ನು ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಡಿ.ಡಿ.ಪಿ.ಐ. ಗೆ ಮನವಿ ಸಲ್ಲಿಸಿತ್ತು. ಆದರೆ ಡಿ.ಡಿ.ಪಿ.ಐ. ಕೇವಲ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಮಾತ್ರ ಶಾಲಾ ನಿರ್ವಹಣಾ ಶುಲ್ಕ ಪಡೆಯುತ್ತಿರುವುದು ಕರ್ನಾಟಕ ಶಿಕ್ಷಣ ಕಾಯ್ದೆ ೧೨೫ ರ ನಿಯಮದ ಪರಕಾರ ಕಾನೂನು ಬಾಹಿರವಾಗಿದ್ದು ಹೆಚ್ಚುವರಿ ಶುಲ್ಕವನ್ನು ಕೂಡಲೇ ಮರುಪಾವತಿ ಮಾಡಬೇಕು ಮತ್ತು ೭ ದಿನದ ಒಳಗಾಗಿ ವರದಿ ನೀಡಬೇಕೆಂದು ಶಾಲೆಗೆ ನೋಟೀಸ್ ಕಳಿಸಿರುವುದು ಸ್ವಾಗತಾರ್ಹ.
ಆದರೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾವು ಕೇವಲ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿರುದ್ಧ ಮಾತ್ರವಲ್ಲದೇ ಎಲ್ಲಾ ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಹಾಗೂ ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿತ್ತು. ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನಾರ್ಹ. ಈಗಿರುವ ಸಮಸ್ಯೆಗಳನ್ನು ಈ ಕೆಳಗಿನಂತೆ ಬಗೆಹರಿಸಬೇಕೆಂದು ಮನವಿ ಸಲ್ಲಿಸಲಾಗಿತ್ತು.
೧) ಎಲ್ಲಾ ಶಾಲೆಗಳಲ್ಲಿ ಶುಲ್ಕ ವಿವರವನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು.
೨) ಶುಲ್ಕದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
೩) ಶುಲ್ಕದ ರಶೀದಿ ಹಾಗೂ ಸಂಸ್ಥೆಯ ರಸೀದಿ ಪುಸ್ತಕವನ್ನು ಪರಿಶೀಲಿಸಬೇಕು.
೪) ಸುತ್ತೋಲೆ, ಶುಲ್ಕದ ವಿವರ ಶಾಲೆಯಲ್ಲಿರುವ ಸೀಟುಗಳ ವಿವರ ಇತ್ಯಾದಿಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಮನೆಬಾಗಿಲಿಗೆ ವಿತರಿಸಬೇಕು.
೫) ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ. ಅಕ್ಟ್) ಅರಿವು ಮೂಡಿಸಲು ಜಿಲ್ಲೆಯಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
೬) ಅಲ್ಪಸಂಖ್ಯಾತ ಸಂಸ್ಥೆಗಳು ಸರಕಾರದ ನಿಯಂತ್ರಣದಲ್ಲಿರಬೇಕು.
೭) ನುರಿತ ಶಿಕ್ಷಕರನ್ನು ನೇಮಿಸಬೇಕು.
೮) ಡಿ-ಗ್ರೂಪ್ ನೌಕರರನ್ನು ನೇಮಿಸಬೇಕು.
೯) ಆಟದ ಮೈದಾನವನ್ನು ನಿರ್ಮಿಸಬೇಕೆಂದು ಎಸ್.ಐ.ಓ. ಆಗ್ರಹಿಸುತ್ತದೆ. 

ಆದಷ್ಟು ಬೇಗ ಈ ಬೇಡಿಕೆಗಳ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಡಿ.ಡಿ.ಪಿ.ಐ.ಯವರಿಗೆ ಎಸ್.ಐ.ಓ. ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಮತ್ತೆ ಉಗ್ರವಾದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಸ್.ಐ.ಓ.ನ ಸ್ಥಾನೀಯ ಘಟಕದ ಅಧ್ಯಕ್ಷ ಮೊಹಮ್ಮದ್ ಅಸದುಲ್ಲಾ ಖಾನ್ ಆಗ್ರಹಿಸಿರುತ್ತಾರೆ.

Advertisement

0 comments:

Post a Comment

 
Top