PLEASE LOGIN TO KANNADANET.COM FOR REGULAR NEWS-UPDATES

ಇಕ್ಬಾಲ್ ಅನ್ಸಾರಿಯವರ ೫೦ ನೇ ಹುಟ್ಟು ಹಬ್ಬದ ನಿಮಿತ್ಯ  
ಕೊಪ್ಪಳ ಜೂನ್ : ೧೭, ಗಂಗಾವತಿ ಶಾಸಕರಾದ ಇಕ್ಬಾಲ್ ಅನ್ಸಾರಿಯವರ ೫೦ ನೇ ಹುಟ್ಟು ಹಬ್ಬದ ನಿಮಿತ್ಯ  ಕೊಪ್ಪಳ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಅನ್ಸಾರಿ ಅಭಿಮಾನಿಗಳಿಂದ ಹಣ್ಣು ಹಂಪಲ ವಿತರಿಸಲಾಯಿತು. ಹಾಗೂ ಅವರಿಗೆ ಶುಭ ಕೋರಲಾಯಿತು. 
ದೀನ ಧಲಿತರ ನಾಯಕ ಜನಪರ ಕಳಕಳಿ, ಧಾನ ವೀರ ಕರ್ಣ, ದಿನ ದಲಿತರ ಕಾಳಜಿ ಹಾಗೂ ಗಂಗಾವತಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಇಕ್ಬಾಲ್ ಅನ್ಸಾರಿಯವರ ಬಾಳಿನಲ್ಲಿ ಇನ್ನು ಉತ್ತವವಾದ ಸೇವೆ ಸಲ್ಲಿಸಲು ದೇವರು ಅವರಿಗೆ ಆರೋಗ್ಯ ಆಯುಶ್ಯ ಹಾಗ ಇನ್ನು ಅಧಿಕಾರ ದೇವರು ಅವರಿಗೆ ನೀಡಲಿ ಎಂದು ಅಭಿಮಾನಿಗಳು ಶುಭ ಹಾರೈಸಿದರು. 
ಈ ಕಾರ್ಯಕ್ರಮದ ನೇತೃತ್ವವನ್ನು ಮಹಮ್ಮದ ಪೀರಸಾಬ ಬೆಳಗಟ್ಟಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮೈ ಲೈಕ್ ಜಿಲಾನ್, ತಾಹೇರ ಅಲಿ, ನೀಸಾಮುದ್ದೀನ್ ದಪೇದಾರ್, ಸೈಯದ್ ಪಾಷಾ, ಕಾಸೀಮ್ ಗೂದಿ, ಮುಸ್ತಪ್ಪ ಕುದರಿಮೋತಿ, ಸಿದ್ದೇಶ ಪುಜಾರ, ಜಿಲಾನ್ ಸಾಲಿ, ಈರಣ್ಣ ಭಾಗ್ಯನಗರ, ನಾಗೇಶ ಜುನೇದ, ಅಬ್ಬಾಸ ಕುಕನೂರ, ಅಕ್ಬರ ಪಾಷಾ, ಮಾನ್ವಿ ಪಾಷಾ, ಸೈಯದ್ ನಾಸಿರ್ ಹುಸೇನಿ, ಮುಜೀದ್ ಖಾನ್ ವಕೀಲರು, ಬಾಬು ಬಸರಳ್ಳಿ, ರಹೀಮ್, ಖಾಸಿಮ್ ಡೋಣಿ, ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು .

Advertisement

0 comments:

Post a Comment

 
Top