PLEASE LOGIN TO KANNADANET.COM FOR REGULAR NEWS-UPDATES






ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಹತ್ತಿರಕ್ಕೆ ಬರುತ್ತಿರಲು ಶ್ರೀಗವಿಮಠವು ಅತ್ಯಾಕರ್ಷಕವಾಗಿ ಕಂಗೊಳಿಸುತ್ತಲಿದೆ. ಶ್ರೀಗವಿಸಿದ್ಧೇಶ್ವರರ ಕರ್ತೃ ಗದ್ದುಗೆಯ ಸುತ್ತಲೂ ತಲೆಯೆತ್ತಿ ನಿಂತಿರುವ ಕಲ್ಲಿನ ಮಂಟಪವು ವಿನೂತನವಾಗಿ ಮತ್ತು ಆಕರ್ಷಕವಾದ ಶಿಲ್ಪ ಕೆತ್ತನೆಗಳಿಂದ ನೋಡುಗರ ಕಣ್ಮನಗಳನ್ನು ಸೆಳೆಯುತ್ತಲಿದೆ. ಅದರಲ್ಲಿಯಂತೂ ಶ್ರೀಗವಿಮಠದ ರಸ್ತೆಗೆ ಉತ್ತರಾಭಿಮುಖವಾಗಿ ಎತ್ತರದಲ್ಲಿ ಕಾಣುವ  ಕಲ್ಲಿನ ಮಂಟಪವಂತೂ ಮುಖ್ಯ ಆಕರ್ಷಣೆಯ ಕೇಂದ್ರವಾಗಿದೆ.  ಈ ಕಲ್ಲಿನ ಮಂಟಪಗಳು ನವಿರಾದ, ಮನೋಜ್ಞವಾದ ಕೆತ್ತನೆಗಳಿಂದ ಕೂಡಿದ್ದೂ ಪ್ರಮುಖ ಅಕರ್ಷಣೆಯ ಕೇಂದ್ರವಾಗಿದೆ.  ಈ ಕೆತ್ತನೆಯ ಕಾರ್ಯವನ್ನು ಆಂದ್ರಮೂಲದ ಕರ್ನೂಲ್ ಜಿಲ್ಲೆಯ ಆಧೋನಿ ತಾಲೂಕಿನ ನದಿಚ್ಯಾಗಿ ಗ್ರಾಮದ ಶ್ರೀಮರಿಯಪ್ಪ ಅಂಬಿಗರ  ಎಂಬ ಕಲಾವಿದ ಹತ್ತು ಜನ ತನ್ನ ಸಹ ಕಲಾವಿದರೊಂದಿಗೆ ಸೇರಿಕೊಂಡು ತಿಂಗಳುಗಟ್ಟಲೇ ಈ ಕಾರ್ಯವನ್ನು ಮಾಡಿದ್ದಾರೆ. ಈ ಸುಂದರ ಶೈಲಿಯ ಕೆತ್ತನೆಯ ಸ್ತಂಭಗಳು ಹಾಗೂ  ಅವುಗಳ ಮೇಲಿನ ಮಂಟಪಗಳ ರಚನೆಯ ಸಂಕಲ್ಪವು ಪೂಜ್ಯ ಶ್ರೀಗವಿಸಿದ್ಧೇಶ್ವರ ಶ್ರೀಗಳದ್ದಾಗಿದೆ. ಅವರೇ ನನಗೆ ಈ ಯೋಜನೆಯ ಸ್ಕೆಚ್ ಹಾಕಿಕೊಟ್ಟು ನನ್ನ ಕಾರ್ಯಕ್ಕೆ ಪ್ರೇರೇಪಣೆ ನೀಡಿದರೆಂದು ಕಲಾವಿದ ಮರಿಯಪ್ಪ ಹೇಳುತ್ತಾನೆ. ಪೂಜ್ಯರ ಈ ಸಂಕಲ್ಪ ಶಕ್ತಿಯಿಂದಾಗಿ ಶ್ರೀಗವಿಮಠವು ಕಂಗೊಳಿಸಲು ಕಾರಣವಾಗಿದೆ. 


೧) ಉಡಿತುಂಬುವ ಕಾರ್ಯಕ್ರಮಕ್ಕೆ ಉಚಿತ ವಾಹನ ಸೌಲಭ್ಯ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ  ಅಂಗವಾಗಿ ಶ್ರೀಮಠದಲ್ಲಿ ನಾಳೆ ಉಡಿ ತುಂಬುವ ಕಾರ್ಯಕ್ರುಮ ಹಾಗೂ ಬಸವಪಟ  ಕಾರ್ಯಕ್ರಮಗಳು ಸಂಜೆ ೫ ಗಂಟೆಗೆ  ಜರುಗುವದು.  ಶ್ರೀಗವಿಮಠದ ಕೈಲಾಸ ಮಂಟಪದಲ್ಲಿರುವ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವದರ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಈ ಉಡಿತುಂಬುವ ಕಾರ್ಯಕ್ರಮಕ್ಕೆ ಶ್ರೀಮಠಕ್ಕೆ ಆಗಮಿಸುವ ಸ್ಥಳೀಯ  ಮಹಿಳೆಯರಿಗಾಗಿ ಸಾಯಂಕಾಲ ೫ ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೆ ನಗರದ ಎಲ್ಲ ಭಾಗಗಳಿಂದಲೂ ವಿಶೇಷವಾಗಿ ಉಚಿತ ವಾಹನ ಸೌಲಭ್ಯವನ್ನು ಮಾಡಲಾಗಿದೆ.  ವಾಹನಗಳ ಮಾರ್ಗ ಇಂತಿದೆ.

ಮಾರ್ಗ೧: (ವಾಹನ ನಂ ೧): ಶ್ರೀಗವಿಶ್ರೀನಗರ, ಗಂಜ್ ಕ್ರಾಸ್, ಬಿ.ಟಿ.ಪಾಟೀಲನಗರ,ಹಳೇಡಿ.ಸಿ ಆಫೀಸ್,ಅಶೋಕ ಸರ್ಕಲ್,ಬಸ್ ನಿಲ್ದಾಣ, ಅಮೀನಪುರ, ಬನ್ನಿಕಟ್ಟಿ, ಬಸವ ನಗರ,ಸದಾಶಿವ ನಗರದ ಮುಖ್ಯರಸ್ತೆಗಳಿಂದ ಶ್ರೀಗವಿಮಠ ಹೊರಡುವದು.

ಮಾರ್ಗ೨:  (ವಾಹನ ಸಂಖ್ಯೆ ೨): ಶಾರದಾಟಕೀಸ್, ಅಂಬೇಡ್ಕರ್ ಸರ್ಕಲ್,ಕೆ.ಸಿ.ಸರ್ಕಲ್,ಹೈದರಲಿ ಸರ್ಕಲ್,ಹಳೇ ಡಿ.ಸಿ.ಆಫೀಸ್, ಪೋಲೀಸ್ ಕಾಲನಿ,ಲಕ್ಷೀಟಾಕೀಸ್,ಪ್ರಶಾಂತ ಕಾಲನಿ,ಬಿ.ಟಿ.ಪಾಟೀಲ ನಗರ,ಕುಷ್ಟಗಿಗೇಟ್,ಗಂಜ್ ಕ್ರಾಸ್ ನಮೂಲಕ ಮುಕ್ಯರಸ್ತೆಗಳ ಮೂಲಕ ಶ್ರೀಗವಿಮಠಕ್ಕೆ ಹೊರಡುವದು.

ಮಾರ್ಗ ೩: (ವಾಹನ ಸಂಖ್ಯೆ ೩): ಗಡಿಯಾರ ಕಂಬ,ಜವಾಹರ ರಸ್ತೆ,ಆಜಾದ್ ಸರ್ಕಲ್,ದುರ್ಗಮ್ಮಕಟ್ಟಿ,ಅಶೋಕ ಸರ್ಕಲ್,ವಿಜಯನಗರ ಕಾಲನಿ, ಭಾಗ್ಯನಗರ ಕ್ರಾಸ.

ಮಾರ್ಗ ೪:  (ವಾಹನ ಸಂಖ್ಯೆ ೪): ಗಡಿಯಾರ ಕಂಬ,ಬಳ್ಳೊಳ್ಳಿ ಮಿಲ್,ಗೋಶಾಲಾ,ಸಿರಸಪ್ಪಯ್ಯನ ಮಠ, ಬಹದ್ದೂರ ಬಂಡಿ ಕ್ರಾಸ್,

ಹೀಗೆ ೪ ವಾಹನಗಳು  ಈ ಮೇಲೆ ಸೂಚಿಸಿದ ಮಾರ್ಗವಾಗಿ ಅಂದು ಸತತವಾಗಿ ಸಂಜೆ ೫ ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೆ ಸಂಚರಿಸಲಿವೆ. ಸದ್ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಾಗೆಯೇ ಇದರ ಹೆಚ್ಚಿನ  ಮಾಹಿತಿಗಾಗಿ ಡಾ.ಬಸವರಾಜ ಪೂಜಾರ ಅವರ ಮೊಬೈಲ್ ಸಂಖ್ಯೆ ೯೪೪೮೨೬೨೮೬೩  ಸಂಪರ್ಕಿಸಬೇಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ. 


 ೨) ದಾಸೋಹದಲ್ಲಿ ಇಂದು ಸಮರ್ಪಣೆ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಗಾಗಿ ನಡೆಯಲಿರುವ ಮಹಾದಾಸೋಹಕ್ಕಾಗಿ ಇಂದು ಹೊಸೂರ,ಹೊಸಳ್ಳಿ,ಕೂಕನಪಳ್ಳಿ,ಕೆಂಪಳ್ಳಿ,ಮ್ಯಾದ್ನೇರಿ,ಬಿಸರಳ್ಳಿ, ಮೆತಗಲ್,ಯಡ್ಡೋಣಿ,ತಾಳಕನಕಾಪುರ, ಹಂಚಿನಾಳ ಗ್ರಾಮಗಳಿಂದ ರೊಟ್ಟಿ ಹಾಗೂ ದವಸ ಧಾನ್ಯಗಳು ಶ್ರೀಗವಿಮಠಕ್ಕೆ ಅರ್ಪಣೆಯಾದವು. ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಗಳು ಆಶಿರ್ವದಿಸಿದ್ದಾರೆ.




Advertisement

0 comments:

Post a Comment

 
Top