PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ : ಹೈದ್ರಾಬಾದ್ ಕರ್ನಾಟಕದ ೬ ಜಿಲ್ಲೆಗಳಿಗೆ ೩೭೧ ನೇ ಕಲಂ ತಿದ್ದುಪಡಿ ಜಾರಿಗೆ ಹೋರಾಟ ನಡೆಸಿದ ಪ್ರಮುಖ ಹೋರಾಟಗಾರ ವೈಜನಾಥ ಪಾಟೀಲ್ ಹಾಗೂ ಇನ್ನಿತರ ಕ್ರಿಯಾಶೀಲ ಹೋರಾಟಗಾರರನ್ನು ಜನೇವರಿ ೨೪ ರಂದು ಬೆಳಿಗ್ಗೆ ೧೧.೩೦ಕ್ಕೆ ಸತ್ಕರಿಸಲಾಗುವುದು ಎಂದು ಕೊಪ್ಪಳ ತಾಲೂಕಾ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಎಂ.ವಿ.ಪಾಟೀಲ್ ಹೇಳಿದರು.
       ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ಹೈ-ಕ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿರುವ ವೈಜನಾಥ ಪಾಟೀಲ್, ಈ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಸುಮಾರು ೧೮ ವರ್ಷಗಳಿಂದ ಹೋರಾಟ ನಡೆಸಿ ಸಂವಿದಾನದ ೩೭೨ ನೇ ಕಲಂ ತಿದ್ದುಪಡಿ ಕುರಿತು ಜಾಗೃತಿ ಮೂಡಿಸಿದವರು. ಅಂದು ಅವರನ್ನು ನಗರದ ಗಡಿಯಾರ ಕಂಬದಿಂದ ಸಾಹಿತ್ಯ ಭವನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಗುವುದು ಎಂದರು.
         ಕಾರ್ಯಕ್ರಮದ ಸಾನಿಧ್ಯವನ್ನು ಗವಿಮಠ ಸಂಸ್ಥಾನದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸುವರು. ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ, ಜಿ.ಪಂ.ಅಧ್ಯಕ್ಷ ರಾಘವೇಂದ್ರ ಹಿಟ್ನಾಳ, ಜೆಡಿಎಸ್ ಮುಖಂಡ ಪ್ರದೀಪಗೌಡ ಮಾಲೀಪಾಟೀಲ್, ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಮತ್ತಿತರರು ಪಾಲ್ಗೊಳ್ಳುವರು ಎಂದರು.
        ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ರುದ್ರಮುನಿ ಗಾಳಿ, ವೀರಣ್ಣ ಹಂಚಿನಾಳ, ವೈಜನಾಥ ದಿವಟರ್, ಸರೋಜಾ ಬಾಕಳೆ, ಶಬ್ಬೀರ ಸಿದ್ಧಕಿ ಮತ್ತಿತರರು ಇದ್ದರು.

Advertisement

0 comments:

Post a Comment

 
Top