PLEASE LOGIN TO KANNADANET.COM FOR REGULAR NEWS-UPDATES


: ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಉದ್ದೇಶಕ್ಕಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸುವವರು ನಗರಸಭೆಯ ಆರೋಗ್ಯ ವಿಭಾಗದಲ್ಲಿ ಪರವಾನಿಗೆ ಪಡೆದುಕೊಳ್ಳಬೇಕು.  ತಪ್ಪಿದಲ್ಲಿ ಅಂತಹವರ ವಿರುದ್ಧ ದಂಡ ವಿಧಿಸಿ, ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಕೊಪ್ಪಳ ನಗರದಲ್ಲಿ ಅನಧಿಕೃತವಾಗಿ, ಬೇಕಾಬಿಟ್ಟಿಯಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸುತ್ತಿರುವುದು ಕಂಡುಬಂದಿದ್ದು, ಇದರಿಂದ ನಗರದ ಸೌಂದರ್ಯೀಕರಣಕ್ಕೆ ಧಕ್ಕೆಯಾಗುವುದಲ್ಲದೆ, ಪಾದಚಾರಿಗಳಿಗೆ, ವಾಹನ ಚಾಲಕರಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ.  ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರ, ಜನಸಂಚಾರ ಹೆಚ್ಚಳವಾಗುತ್ತಿದ್ದು,  ಒಂದೊಮ್ಮೆ ವಾಹನ ಚಾಲಕರ ದೃಷ್ಟಿ ಪ್ಲೆಕ್ಸ್ ಮೇಲೆ ಹಾಯಿಸಿದರೆ ಅಪಾಯ ತಪ್ಪಿದ್ದಲ್ಲ. ಇಂತಹ ಅನಧಿಕೃತ ಪ್ಲೆಕ್ಸ್ ಬ್ಯಾನರ್‌ಗಳಿಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಯಾವುದೇ ಪ್ಲೆಕ್ಸ್/ಬ್ಯಾನರ್ ಅಳವಡಿಸಲು, ನಗರಸಭೆ ತೋರಿಸಿದ ಸ್ಥಳದಲ್ಲಿ ಅನುಮತಿ ಪಡೆದು ಹಾಕಬೇಕಾಗುತ್ತದೆ. ಇನ್ನುಮುಂದೆ ಯಾವುದೇ ಪ್ಲೆಕ್ಸ್/ಬ್ಯಾನರ್ ಹಾಕುವ ಸಮಯದಲ್ಲಿ ನಗರಸಭೆ ನಿರ್ಧಿಷ್ಟಪಡಿಸಿದ ಸ್ಥಳಗಳಲ್ಲಿ ಅನುಮತಿ ಪಡೆದು, ಶುಲ್ಕ ಪಾವತಿಸಿ, ನಂತರವೇ ಅಳವಡಿಸತಕ್ಕದ್ದು. ಯಾವುದೇ ಬ್ಯಾನರ್ಸ್, ಬಂಟಿಂಗ್ಸ್, ಕಟೌಟ್, ಫ್ಲ್ಯಾಗ್ ಹಾಗೂ ಪ್ಲೆಕ್ಸ್‌ಗಳನ್ನು ಸರ್ಕಾರಿ ಕಛೇರಿಗಳು ಹಾಗೂ ಕಟ್ಟಡಗಳ ಮೇಲೆ ಹಾಕುವಂತಿಲ್ಲ ನಗರಸಭೆ ವಿವಿಧ ಸ್ಥಳಗಳಲ್ಲಿ ವಿಧಿಸಲಾದ ದರಗಳನ್ನು ಗೊತ್ತುಪಡಿಸಿದ್ದು ಪ್ರತಿ ಚದರ ಮೀಟರ್ ದಿನ ಒಂದಕ್ಕೆ ರೂ.೧೫/- ರಿಂದ ೨೫/- ರವರೆಗೆ ನಿಗದಿಪಡಿಸಲಾಗಿದೆ. ನಗರಸಭೆಯ ನಿಯಮವನ್ನು ಪಾಲಿಸಿಕೊಂಡು ಅನುಮತಿಯ ನಂತರವೇ ಬ್ಯಾನರ್‌ಗಳನ್ನು ಹಾಕಬೇಕು.  ತಪ್ಪಿದಲ್ಲಿ ಅನಧಿಕೃತವಾದವುಗಳನ್ನು ತೆರವುಗೊಳಿಸಿ, ಅದರ ವೆಚ್ಚವನ್ನು ಸಂಬಂಧಿತ ಸಂಘಟಕರಿಂದ ವಸೂಲಿ ಮಾಡಲಾಗುವುದು.  ನಗರದ ಎಲ್ಲಾ ಮ್ಯಾದಾರರು ನಗರಸಭೆಯಿಂದ ಪರವಾನಿಗೆ ಪಡೆದ ನಂತರ ಹಾಗೂ ಶುಲ್ಕ ಪಾವತಿಸಿರುವ ರಸೀದಿ ಸಂಖ್ಯೆ ಬ್ಯಾನರ್‌ಗಳ ಮೇಲೆ ಬರೆಯಿಸಿದ ನಂತರವೇ ಬ್ಯಾನರ್‌ಗಳನ್ನು ಅಳವಡಿಸತಕ್ಕದ್ದು, ಅನಧಿಕೃತ ಬ್ಯಾನರ್‌ಗಳನ್ನು ಅಳವಡಿಸಿರುವುದನ್ನು ಕಂಡುಬಂದಲ್ಲಿ ಅಂತಹವರ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ, ದಂಡ ವಿಧಿಸಿ, ಅವರ ವಿರುದ್ದ ಕಾನೂನು ರೀತ್ಯಾ ಮೊಕದ್ದಮೆ ಹೂಡಲಾಗುವುದೆಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.

Advertisement

0 comments:

Post a Comment

 
Top