ಹೊಸದಿಲ್ಲಿ, ಜ. 21: ದಿಲ್ಲಿಯಲ್ಲಿ ಒಂದು ತಿಂಗಳ ಹಿಂದೆ ಜಾರಿಗೆ ತರಲಾದ ಮೂರು ಅಂಕೆಗಳ ಮಹಿಳಾ ತುರ್ತು ಸಹಾಯವಾಣಿ ಸೇವೆಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಜಾರಿಗೆ ತರಲಾಗು ವುದು ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.‘‘ತುರ್ತು ಸಂಖ್ಯೆ ‘181’ನ್ನು ನಾವು ದೇಶಾದ್ಯಂತ ಎಲ್ಲ ಮಹಿಳೆ ಯರಿಗೆ ಒದಗಿಸುತ್ತಿದ್ದೇವೆ’’ ಎಂದು ಟೆಲಿಕಾಂ ಸಚಿವ ಕಪಿಲ್ ಸಿಬಲ್ ಸುದ್ದಿಗಾರರಿಗೆ ತಿಳಿಸಿದರು.ಮೂರು ಅಂಕಿಗಳ ತುರ್ತು ಸಂಖ್ಯೆ ‘181’ನ್ನು ರಾಷ್ಟ್ರೀಯ ಮಹಿಳಾ ಸಹಾಯವಾಣಿಯಾಗಿ ಮಾಡಲು ಸಾಧ್ಯವಾಗುವಂತೆ ಈ ಸಂಖ್ಯೆಯನ್ನು ಎಲ್ಲ ರಾಜ್ಯಗಳಿಗೆ ಒದಗಿಸುವ ಕುರಿತ ಸಚಿವಾ ಲಯದ ನಿರ್ಧಾರದ ಬಗ್ಗೆ ಎಲ್ಲ ಮುಖ್ಯಮಂತ್ರಿಗಳಿಗೆ ಸಿಬಲ್ ಪತ್ರ ಬರೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ತುರ್ತು ಸಂಖ್ಯೆಯನ್ನು ನೀಡಿದ ಬಳಿಕ ರಾಜ್ಯ ಸರಕಾರಗಳು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸ ಬೇಕಾಗುತ್ತದೆ. ‘‘ಟೆಲಿಕಾಂ ಸಚಿವಾಲಯ ಈ ಸಂಖ್ಯೆಯನ್ನು ಎಲ್ಲ ರಾಜ್ಯಗಳಿಗೆ ನೀಡಲಿದೆ.
ಈ ಸಂಖ್ಯೆ ದೇಶಾದ್ಯಂತ ಕಾರ್ಯಗತವಾಗುವಂತೆ ರಾಜ್ಯ ಸರಕಾರಗಳು ಬಳಿಕ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸ ಬೇಕಾಗುತ್ತದೆ’’ ಎಂದು ಮೂಲಗಳು ಹೇಳಿವೆ.ದಿಲ್ಲಿಯಲ್ಲಿ ಡಿಸೆಂಬರ್‌ನಲ್ಲಿ ನಡೆದ 23ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಭೀಕರ ಸಾಮೂಹಿಕ ಅತ್ಯಾ ಚಾರದ ಬಳಿಕ ದೇಶಾದ್ಯಂತ ಎದ್ದ ಆಕ್ರೋಶದ ಅಲೆಯ ಹಿನ್ನೆಲೆಯಲ್ಲಿ ಟೆಲಿಕಾಂ ಸಚಿವಾಲಯ ದಿಲ್ಲಿಯಲ್ಲಿ ಮಹಿಳೆಯರಿಗಾಗಿ ತುರ್ತು ಸೇವೆ ಯ ಸಂಖ್ಯೆಯನ್ನು ಜಾರಿಗೆ ತಂದಿತ್ತು.
ದಿಲ್ಲಿಯಲ್ಲಿ ಮೊದಲು ನೀಡಲಾದ ಸಂಖ್ಯೆ 167. ಬಳಿಕ ನೆನಪಿಸಲು ಸುಲಭ ಎಂಬ ಕಾರಣಕ್ಕಾಗಿ ‘181’ಕ್ಕೆ ಬದಲಾಯಿಸಲಾಗಿತ್ತು. ಸಂಕಷ್ಟದಲ್ಲಿರುವ ಮಹಿಳೆಯರ ರಕ್ಷಣೆಗಾಗಿ ಮೂರು ಅಂಕೆಗಳ ಫೋನ್ ಸಂಖ್ಯೆಯೊಂದನ್ನು ಬಿಡುಗಡೆ ಮಾಡುವಂತೆ ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಟೆಲಿಕಾಂ ಇಲಾಖೆಗೆ ಮನವಿ ಮಾಡಿದ್ದರು.
0 comments:
Post a Comment