PLEASE LOGIN TO KANNADANET.COM FOR REGULAR NEWS-UPDATES



ಟಿಪ್ಪು ಸುಲ್ತಾನನ ಪಾಲಿಗೆ ಅಂದು “ಅನುಕೂಲದೈವ”ವೇ ಇದ್ದಿದ್ದರೆ, ನೆಪೊಲಿಯನ್‌ಗೆ ಸುಯೇಜ್ ಕಾಲುವೆ ಬಳಿ ಸಾಕಾದಷ್ಟು ಜಹಜು ಗಳು ಸಿಗುತ್ತಿದ್ದವು. ‘ಅನುಕೂಲ ಪವನ’ನು ಹತ್ತು ಸಾವಿರ ಸೈನಿಕರನ್ನು ಹೊತ್ತು ತಂದು ಸುಲ್ತಾನನಿಗೆ ಒದಗಿಸುತ್ತಿದ್ದ. ಯಾರು ಬಲ್ಲರು? ನೆಪೊಲಿಯನ್, ಟಿಪ್ಪು ಸುಲ್ತಾನ ಇಬ್ಬರೂ ಭೇಟಿಯಾಗುತ್ತಿದ್ದರೋ ಏನೊ! ಹಾಗೆ ಆಗಿದ್ದರೆ ಭಾರತದಲ್ಲಿ ಬ್ರಿಟಿಷರ ಹೆಸರೇ ಇರುತ್ತಿರಲಿಲ್ಲ.
27-1-1799ನೆಯ ದಿನ, ಕೈರೋದಿಂದ ನೆಪೊಲಿಯನ್ ಟಿಪ್ಪುವಿಗೊಂಡು ಪತ್ರ ಬರೆದ. ಅದನ್ನು ಮಕ್ಕಾದ ಷರೀಫನಿಗೆ ಕಳುಹಿಸಿ, ಟಿಪ್ಪುವಿಗೆ ಮುಟ್ಟಿಸುವಂತೆ ಸೂಚನೆ ಮಾಡಿದ. ದುರ್ದೈವದಿಂದ ಆ ಪತ್ರ ಟಿಪ್ಪುವಿನ ಕೈ ಸೇರುವುದು ತಡವಾಯಿತು. ಆ ವೇಳೆಗೆ ಟಿಪ್ಪುರ ಸ್ವರ್ಗವಾಸಿಯಾಗಿದ್ದ!
ಅರಬಿ ಭಾಷೆಯಲ್ಲಿ ನೆಪೊಲಿಯನ್ ಮಕ್ಕಾ ಷರೀಫನಿಗೆ ಪತ್ರ ಬರೆದು, ಟಿಪ್ಪುವಿಗೆ ಫ್ರೆಂಚ್ ಭಾಷೆಯಲ್ಲಿ ಪತ್ರ ಬರೆದು ಕಳುಹಿಸಿದ. ಆ ಪತ್ರದ ಆಂಗ್ಲ ಭಾಷಾಂತರವಿದು: ಶ್ರೀರಂಗಪಟ್ಟಣ ದ ಪತನಾಂತರ ಟಿಪ್ಪುವಿನ ಅರಮನೆಯಲ್ಲಿ ಆಂಗ್ಲರು ವಶಪಡಿಸಿಕೊಂಡ ಅಮೂಲ್ಯ ವಸ್ತುಗಳಲ್ಲಿ ಅತ್ಯಮೂಲ್ಯವಾದವುಗಳೆಂದರೆ “ರಾಜ್ಯದ ರಹಸ್ಯ ಕಾಗದಪತ್ರಗಳು”. ಆ ಕಟ್ಟುಗಳಲ್ಲಿ ಅನೇಕ ಪತ್ರಗಳಿವೆ.
ಆ ಪತ್ರಗಳಲ್ಲಿ ಈ ಪತ್ರವೂ ಒಂದು. ಆಂಗ್ಲರು ಹೊರಗಿಡದೆ ರಹಸ್ಯವಾಗಿಯೇ ಉಳಿಸಿಕೊಂಡಿರುವ ಪತ್ರಗಳಿನ್ನೆಷ್ಟಿವೆಯೊ? (Tippu's Secret Correspondence M.Wood's Selections ಇಂದ)

ನೆಪೊಲಿಯನ್ ಬೊನಾಪಾರ್ಟ್ ಟಿಪ್ಪು ಸುಲ್ತಾನರಿಗೆ ಫ್ರೆಂಚ್ ಭಾಷೆಯಲ್ಲಿ ಬರೆದ ಪತ್ರದ ಕನ್ನಡಾನುವಾದ:
ಫ್ರೆಂಚ್ ಗಣರಾಜ್ಯ; ಸ್ವಾತಂತ್ರ, ಗುರಿ-ಸಮಾನತೆ
ತಂಗುವಿಡು, ಕೈರೋ
ಗಣರಾಜ್ಯದ ೭ನೆ ಸಂವತ್ಸರ
೨೭-೧-೧೭೯೯
ಏಕೈಕ ಮತ್ತು ಅವಿಭಾಜ್ಯ, ನೆಪೊಲಿಯನ್ ಬೊನಾಪಾರ್ಟ್, ರಾಷ್ಟ್ರೀಯ ಪರಿಷತ್ತಿನ ಸದಸ್ಯ ಮತ್ತು ದಂಡನಾಯಕನಿಂದ.
ಮಹೋತ್ತಮ ಉದಾರಿ ಸುಲ್ತಾನ ಮತ್ತು ನಮ್ಮ ಪರಮೋತ್ತಮ ಮಿತ್ರ ಟಿಪ್ಪು ಸಾಹೇಬರಿಗೆ:
“ಅಸಂಖ್ಯಾತವೂ, ಅಜೇಯವೂ ಆದ ಸೈನ್ಯದಿಂದೊಡಗೂಡಿ, ಇಂಗ್ಲೆಂಡಿನ ಕಬ್ಬಿಣದ ನೊಗದಿಂದ ತಮ್ಮನ್ನು ಮುಕ್ತಗೊಳಿಸುವ ಉತ್ಕಟ ಅಪೇಕ್ಷೆಯಿಂದ, ನಾನು ಕೆಂಪು ಸಮುದ್ರದ ತೀರ ಪ್ರದೇಶಕ್ಕೆ ಬಂದಿರುವೆನೆಂಬ ಸಮಾಚಾರವನ್ನು ಈಗಾಗಲೇ ನಿಮಗೆ ತಿಳಿಹಿಸಲಾಗಿದೆ. ತಮ್ಮ ರಾಜಕೀಯ ಪರಿಸ್ಥಿತಿಯೇನೆಂಬುದನ್ನು ಮಸ್ಕತ್, ಮಕ್ಕಾ ಮೂಲಕ ತಮ್ಮಿಂದ ತಿಳಿಯಲು ಈ ಸಮಯದಲ್ಲಿ ವಿಶೇಷ ಕುತೂಹಲದಿಂದ ಕೂಡಿ ದ್ದೇನೆ. ತಮ್ಮ ಅಂತರಂಗಕ್ಕೆ ಸೇರಿದ, ಬುದ್ಧಿವಂತ ನಾದೊಬ್ಬ ಗೃಹಸ್ಥನನ್ನು ತಾವು ನನ್ನ ಬಳಿಗೆ ಕಳುಹಿಸಬೇಕೆಂದು ಆಶಿಸುತ್ತೇನೆ. ಆತನೊಂದಿಗೆ ನಾನು ಮಾತುಕತೆ ನಡೆಸಬಹುದು.
ಜಗದೀಶ್ವರನು ತಮ್ಮ ಬಲವನ್ನು ಬೆಳೆಸಲಿ.
ತಮ್ಮ ಶತ್ರಗಳನ್ನು ಧ್ವಂಸ ಮಾಡಲಿ.
-(ಸಹಿ) ಬೊನಾಪಾರ್ಟ್
ಈ ಒಂದು ಪತ್ರವು ಟಿಪ್ಪು-ನೆಪೊಲಿಯನ್ ಇಬ್ಬರು ಮಹಾರರು ಪರಸ್ಪರ ಸ್ನೇಹಬಾಂಧವ್ಯ ವೆಂತಹುದೆಂಬುದನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುತ್ತದೆ. ಟಿಪ್ಪುವಿನ ಪತನದೊಂದಿಗೆ, ರಾಜ್ಯಾಪಹಾರದೊಂದಿಗೆ, ಅರಮನೆಯ ಗ್ರಂಥ ಭಂಡಾರದೊಂದಿಗೆ, ಅಮೂಲ್ಯ ಪತ್ರ ವ್ಯವಹಾರ ಸಾಹಿತ್ಯಾಪಹಾರವೂ ಆಯಿತು. ಅಪಹೃತ ಸಾಹಿತ್ಯ ದಲ್ಲಿ ತಮಗೆ ಅನುಕೂಲವಾದಷ್ಟನ್ನು ಆಂಗ್ಲರು ಪ್ರಕಟಿಸಿದರು. ೧-೮-೧೭೯೯ರಲ್ಲಿ ಮದರಾಸಿನ ಸೆಯಿಂಟ್ ಜಾರ್ಜ್ ಕೋಟೆಯಲ್ಲಿ-
1. ಟಿಪ್ಪು ಸುಲ್ತಾನನಿಗೂ ಫ್ರೆಂಚ್ ಜನಾಂಗಕ್ಕೂ ನಡೆದ ಪತ್ರ ವ್ಯವಹಾರ;
2. ಟಿಪ್ಪು ಸುಲ್ತಾನನಿಗೂ ತುರ್ಕಿ, ಪರ್ಶಿಯ ವೊದಲಾದ ವಿದೇಶಿಗಳಿಗೂ ನಡೆದ ಪತ್ರವ್ಯವಹಾರ.
ಎಲ್ಲ ಇಂಗ್ಲಿಷಿಗೆ ಭಾಷಾಂತರವಾಗಿ ಪ್ರಕಟ ವಾಯಿತು. ಅನಂತರ ಕರ್ಕ್ ಪ್ಯಾಟ್ರಿಕ್ ಎಂಬಾತ ಟಿಪ್ಪು ಸುಲ್ತಾನನ ಪರ್ಶಿಯನ್ ಪತ್ರಗಳಲ್ಲಿ ಹಲವನ್ನಾಯ್ದು, ಇಂಗ್ಲಿಷಿಗೆ ಭಾಷಾಂತರ ಮಾಡಿ, ಪ್ರಕಟಿಸಿದ, ಅಪ್ರಕಟಿತ ಸಾಹಿತ್ಯ ಅಪಾರವಾಗಿದೆ. ಈ ಐತಿಹಾಸಿಕ ಸಾಹಿತ್ಯವನ್ನೆಲ್ಲ ಸಂಗ್ರಹ ಮಾಡಿ, ಸಂಶೋಧನೆ ನಡೆಸಿದಾಗ, ಸತ್ಯ ದರ್ಶನ ವಾದೀತು; ಟಿಪ್ಪು ಸುಲ್ತಾನನು ಆಂಗ್ಲ ಇತಿಹಾಸ ಕಾರರು ಹೇಳುವಂತೆ ಮೃಗವಾ, ಭೂತವಾ, ಕಿರಾತನಾ; ಇಲ್ಲ ಮನುಷ್ಯನಾ, ನಾಗರಿಕನಾ, ಪ್ರಮಾಣಿಕನಾ, ದೇಶಭಕ್ತನಾ, ಮಾನಧನನೆ- ಎಂಬುದು ಸ್ಪಷ್ಟವಾದೀತು.
ಫ್ರೆಂಚರೂ ಇಂಗ್ಲಿಷರೂ ಪರಮ ಶತ್ರುಗಳು. ಅಮೆರಿಕದಲ್ಲಿ ವಸಾಹತುಗಳನ್ನು ಕಳೆದು ಕೊಂಡರು. ಅಲ್ಲಿ ಅವರ ರಕ್ತಬಾಂಧವರೇ ಅವರ ಪಾಲಿಗೆ ಮೃತ್ಯುವಾದರು. ಪೂರ‍್ವಾರ‍್ಧಗೋಳದಲ್ಲಿ ಭಾರತದಲ್ಲಾದರೂ ನಿರುಪಾಧಿಕವಾಗಿ ಸಾಮ್ರಾಜ್ಯ ಧ್ವಜ ಹಾರಿಸೋಣವೆಂದರೆ ಹಾಳು ಫ್ರೆಂಚರ ಕಾಟ! ೧೦-೬-೧೭೯೮ರಲ್ಲಿ ವಿಲಾಯಿತಿಯ ‘ಕೋರ್ಟ್ ಆಫ್ ಡೈರೆಕ್ಟರ್’ಗಳ ರಹಸ್ಯ ಸಮಿತಿಯವರು ಬಂಗಾಳದ ಗವರ್ನರ್ ಜನರಲ್‌ಗೆ ದೀರ್ಘವಾದೊಂದು ಪತ್ರ ಬರೆಯುತ್ತಾ:
“ಪೂರ್ವ ದೇಶದ ನಮ್ಮ ಸಾಮ್ರಾಜ್ಯದ ಕುರಿತು ಫ್ರೆಂಚರಿಗೆ ವೊದಲಿನಿಂದಲೂ ಅಸೂಯೆ ಇದ್ದೇ ಇದೆ. ಗುಡ್ ಹೋಪ್ ಭೂಶಿರ ಬಳಸಿ ಬರುವ ಮಾರ್ಗಕ್ಕಿಂತ ಹತ್ತಿರದ ಮಾರ್ಗ ವೊಂದನ್ನು ಹುಡುಕುವುದರಲ್ಲಿ ಸರಕಾರದವರು ಕುತೂಹಲಿ ಗಳಾಗಿದ್ದರು.  ಇಂದಿನ ಫ್ರೆಂಚ್ ಸರಕಾರ ವಾದರೂ ಎಂತಹ ಕಷ್ಟನಷ್ಟಗಳನ್ನಾದರೂ ಸಹಿಸಿ, ಎಂತಹ ವಿಪತ್ತನ್ನಾದರೂ ಎದುರಿಸಿ, ಅಸಾಧಾರಣ ಸಾಹಸೋದ್ಯಮಗಳನ್ನೂ ಹೂಡಿ, ಪ್ರಪಂಚದ ಆ ಭಾಗದಲ್ಲಿ ಬ್ರಿಟಿಷ್ ಪ್ರಭುತ್ವ ಪ್ರಭಾವವನ್ನು ನಿರ್ಮೂಲಗೊಳಿಸಲಾರದೆ ಹೋದರೂ ದುರ್ಬಲಗೊಳಿಸಲು ಪ್ರಯತ್ನ ಮಾಡುತ್ತಿದೆ. ಈ ಕಾರ್ಯಸಾಧನೆಗೆ ಭಾರತದ ಪ್ರಭುತ್ವಗಳ ಪೂರ್ವಭಾವಿ ಸಂಪರ್ಕ- ಸಹಾಯಗಳು ಬೇಕು. ಅದಿಲ್ಲದೆ ಯಾವ ಕೆಲಸ ಮಾಡಲೂ ಸಾಧ್ಯವಿಲ್ಲ. ಭಾರತದ ಇಂದಿನ ಪರಿಸ್ಥಿತಿಯಲ್ಲಿ ಫ್ರೆಂಚರ ಮಹದಾಶಯ ಸಾಧನೆಗೆ ಟಿಪ್ಪು ಸುಲ್ತಾನನೊಬ್ಬನೇ ಪರಮ ಬಲಯುತ ಸಾಧನವೆಂದೂ ಅವನನ್ನೇ ಅವರು ಉಪಯೋಗಿಸಕೊಳ್ಳುವರೆಂದೂ ಕಾಣುತ್ತದೆ” ಎಂದು ಹೇಳಿದರು. ಟಿಪ್ಪು ಫ್ರೆಂಚರೊಂದಿಗೆ ಕಲೆತಹಾಗಿಲ್ಲ; ಪೂರ್ವ ಸಿದ್ಧತೆಗಳನ್ನೇನೂ ಅವನು ಮಾಡಿಕೊಂಡ ಹಾಗಿಲ್ಲ. ಇತ್ಯಾದಿಯಾಗಿ ಎಣಿಕೆ ಹಾಕುತ್ತ ಕೂಡಬೇಡಿರೆಂದು ಎಚ್ಚರಿಕೆ ಕೊಡುವುದರಿಂದ ಮಾತ್ರ ತೃಪ್ತರಾಗದೆ “ಟಿಪ್ಪುವು ಮೇಲೆ ಬಿದ್ದು ಯುದ್ಧವನ್ನಾರಂಭಿಸುವವರೆಗೆ ಕಾಯಬೇಡಿ” ಎಂದು ಸೂಚಿಸಿದರು.
26-11-1798ನೆಯ ದಿನ ‘ರಹಸ್ಯ ಸಮಿತಿ’ಯವರು ಇಂಡಿಯಾ ಸರಕಾರಕ್ಕೊಂದು ಪತ್ರ ಬರೆದರು. ಫ್ರೆಂಚರು ಈಜಿಪ್ಟನ್ನು ವಶಪಡಿಸಿಕೊಂಡರಾದರೆ, ಆ ದೇಶದಲ್ಲಿ ತಮ್ಮ ಪ್ರಭುತ್ವ ಸ್ಥಾಪಸಿದರಾದರೆ, ಅವರು ಕೆಂಪು ಕಡಲು-ಕ್ಯಾಂಬೆ ಕೊಲ್ಲಿ ಮಾರ್ಗವನ್ನಾಕ್ರಮಿಸು ವುದು ಖಂಡಿತ. ಫ್ರೆಂಚರು ಪೆರಿಂ ದ್ವೀಪ ವನ್ನಾಕ್ರಮಿಸಿ, ಅಲ್ಲಿಗೆ ಸೈನ್ಯ ಕಳಿಸಿ, ಅದನ್ನು ಬಲಗೊಳಿಸುವುದೂ ಖಂಡಿತ. ಪೆರಿಂ ದ್ವೀಪ ಅವರ ಕೈಗೆ ಬೀಳದಂತೆ ನೋಡಿಕೊಳ್ಳಬೇಕು. ಇದು ಫ್ರೆಂಚರ ಕೈಗೆ ಬಿದ್ದರೆ ನೆಪೊಲಿಯನ್ ಟಿಪ್ಪುವಿಗೆ ಸೈನ್ಯ ಕಳುಹಿಸುವುದು ಸುಗಮಗಳಿಂದ ವಾಗುತ್ತದೆ. ಹಿಂದೂ ಸಾಗರಕ್ಕೆ ಹಡಗುಗಳು ಹೋಗಬಾರದೆಂಬುದು ನಿಶ್ಚಯವಾದರೆ ಪೆರಿಂ ದ್ವೀಪವನ್ನು ಬ್ರಿಟಿಷರು ಆಕ್ರಮಿಸಬೇಕು; ತಡಮಾಡಲಾಗದು.
ಫ್ರೆಂಚರಿಗೇನಾದರೂ ಈ ಸುಳಿವು ಗೊತ್ತಾಯಿತೋ ವೊದಲವರು ಆ ದ್ವೀಪವನ್ನಾಕ್ರಮಿಸುತ್ತಾರೆ; ತ್ವರೆಗೊಳಿಸಿ- ಈ ರೀತಿಯಾಗಿ ತಮ್ಮ ಆತುರ ಕಾತರವನ್ನು ವ್ಯಕ್ತಪಡಿಸಿದರು. ಹದಿನೆಂಟನೆಯ ಶತಮಾನಂತ್ಯವು “ಬ್ರಿಟಿಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸುವರೆ-ಇಲ್ಲವೆ” ಎಂಬುದನ್ನು ನಿಶ್ಚಯಿಸಬೇಕಾಗಿತ್ತು. ನಿಜವಾಗಿ ಯೂ ಪಶ್ಚಿಮಾರ್ಧದಲ್ಲಿ ನೆಪೊಲಿಯನ್ ಬೊನಾಪಾರ್ಟಿ, ಪೂರ್ವಾರ್ಧಗೋಳದಲ್ಲಿ ಟಿಪ್ಪು ಸುಲ್ತಾನ್-ಇವರಿಬ್ಬರೂ ಬ್ರಿಟಿಷರ ಪಾಲಿಗೆ ಮೃತ್ಯುಪ್ರಾಯರಾಗಿದ್ದರು. ಸಹಜವಾಗಿ ಅವರ ಹೆಸರುಗಳೇ ಸಾಕಾಗಿತ್ತು. ಬ್ರಿಟಿಷರ ಅಸುರೀ ಶಕ್ತಿಗಳನ್ನೆಲ್ಲ ಕೆಣಕಲು, ಎಬ್ಬಿಸಲು. ಈ ಪತ್ರದ ಕಡೆಯ ವಾಕ್ಯವು ಗಮನಾರ್ಹವಾಗಿದೆ.
“ಭಾರತದಲ್ಲಿನ ನಮ್ಮ ಇರುವಿಕೆಯೇ ಅಲ್ಲದಿದ್ದರೂ ಅಲ್ಲಿನ ನಮ್ಮ ಅಮೂಲ್ಯ ಪ್ರದೇಶಗಳ ಸಂರಕ್ಷಣೆಯು ನಮ್ಮ ಈ ಸರ್ವಸ್ವದ ಮೇಲೆ ಕಣ್ಣಿಟ್ಟು ಘೋರ ಸಂಚುಗಳನ್ನು ಹೂಡುತ್ತಿರುವ ಫ್ರೆಂಚರ ಅಜೇಯ ಬಲವನ್ನು ಹಿಂಗಿಸಿ, ಅವರನ್ನು ಸೋಲಿಸುವುದರ ಮೇಲೆ ನಿಂತಿದೆ.”
ಈ ನಿರ್ಣಯದಂತೆ ಬ್ರಿಟಿಷರು ತಮ್ಮ ರೀತಿ ನೀತಿಗಳನ್ನು ರೂಪಗೊಳಿಸಿಕೊಂಡರು. ಸಂಗ್ರಾಮ ಕಾರ್ಯತಂತ್ರವನ್ನು ಪರಿಪೂರ್ಣ ಗೊಳಿಸಿದರು. ಫ್ರಾನ್ಸ್ ದ್ವೀಪದ ಗವರ್ನರ್- ಜನರಲ್ ಮತ್ತು ದಂಡನಾಯಕ ಮಲಾರ್ಟಕ್ 30-1-1798 ನೆಯ ದಿನ ಹೊರಡಿಸಿದ ಪ್ರಕಟಣೆಯನ್ನು ನೆಪಮಾಡಿಕೊಂಡರು. ಟಿಪ್ಪುವಿನ ಮೇಲೆ ಈ ಆಪಾದನೆಗಳನ್ನು ಹೊರಿಸಿದರು.
1.ಟಿಪ್ಪು ಸುಲ್ತಾನನು ಫ್ರಾನ್ಸ್ ದ್ವೀಪದ ಸರಕಾರಕ್ಕೆ ರಾಯಭಾರಿಗಳನ್ನು ಕಳುಹಿಸಿದ. ಭಾರತದಲ್ಲಿದ್ದ ಬ್ರಿಟಿಷ್ ಕ್ಷೇತ್ರಗಳಿಗೆ ವಿರುದ್ಧವಾಗಿ ಆ ಸರಕಾರದೊಂದಿಗೆ ಮೇಲೆ ಬೀಳುವ ಮತ್ತು ಆತ್ಮಸಂರಕ್ಷಣೆ ಮಾಡಿಕೊಳ್ಳುವ ಒಪ್ಪಂದವನ್ನು ಮಾಡಿಕೊಂಡ. ಈ ಒಪ್ಪಂದ ಸರಕಾರದಿಂದ ಅಂಗೀಕೃತವಾಯಿತು. ಸಾರ್ವಜನಿಕವಾಗಿ ಪ್ರಕಟವೂ ಆಯಿತು.
2.ಟಿಪ್ಪು ಸುಲ್ತಾನನು ಆ ರಾಯಭಾರಿಗಳ ಕೈಗೆ ಫ್ರಾನ್ಸಿನ ಆಡಳಿತ ಮಂಡಲಿಗಾಗಿ ಪತ್ರಗಳನ್ನು ಕೊಟ್ಟಿದ್ದ. ಮಲಾರ್ಟಕನು ಅವುಗಳನ್ನು ಫ್ರಾನ್ಸಿಗೆ ಕಳುಹಿಸತಕ್ಕದೆಂದು ಸೂಚನೆ ಮಾಡಿದ್ದ.
3.ಟಿಪ್ಪು ಸುಲ್ತಾನನ ಹೆಸರಿನಲ್ಲಿ ರಾಯಭಾರಿಗಳು “ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಮೇಲೆ ಯುದ್ಧವನ್ನಾರಂಭಿಸಲು ಎಲ್ಲ ಸಿದ್ದತೆಗಳೂ ಆಗಿವೆ. ಫ್ರೆಂಚರಿಂದ ಸೈನ್ಯ ಸಹಾಯಕ್ಕಾಗಿ ಸುಲ್ತಾನರು ಕಾದಿದ್ದಾರೆ. ಆ ಸಹಾಯ ಬಂದ ಕೂಡಲೆ ಕಂಪೆನಿಯವರ ಮೇಲೆ ಸಂಗ್ರಾಮ ಘೋಷಣೆ ಮಾಡುತ್ತಾರೆ. ಬ್ರಿಟಿಷ್ ಜನಾಂಗವನ್ನು ಭಾರತದಿಂದ ಓಡಿಸುವುದೇ ಇದರ ಉದ್ದೇಶ’ ಎಂಬುದಾಗಿ ಸಾರ್ವಜನಿಕವಾಗಿ ಸಾರಿದರು.
4.ಫ್ರೆಂಚರಿಂದ ಮಿತಿಮೀರಿದ ಸೈನ್ಯ ಸಹಾಯವನ್ನು ರಾಯಭಾರಿಗಳು ಅಪೇಕ್ಷಿಸಿದರು. ಫ್ರೆಂಚ್ ದ್ವೀಪದಲ್ಲೇ ಸೈನಿಕರನ್ನು ಕೂಡಿಸಿದರು. ಭಾರತದಲ್ಲಿನ ಬ್ರಿಟಿಷ್ ಜನಾಂಗವನ್ನು ಓಡಿಸಲು ತಕ್ಷಣ ಸಂಗ್ರಾಮವನ್ನಾರಂಭಿಸುವುದೇ ಇದರ ಉದ್ದೇಶ.
5.ಈ ಸೈನ್ಯ ಟಿಪ್ಪುವಿನ ರಾಜ್ಯದಲ್ಲಿ ಪ್ರತ್ಯಕ್ಷವಾಗಿ ಬಂದಿಳಿಯಿತು. ಆ ಸೈನ್ಯವನ್ನು ಸಾರ್ವಜನಿಕವಾಗಿ ಅಂUಕರಿಸಿ, ಪ್ರಶಂಸಿಸಲಾಯಿತು. ರಾಯಭಾರಿಗಳಿಗೆ ಅಪೂರ್ವ  ಮರ್ಯಾದೆಯ ಸ್ವಾಗತ ನೀಡಿಲಾಯಿತು.
6.ರಾಯಭಾರಿಗಳು ಗವರ್ನರ್ ಮಲಾರ್ಟಕ್‌ನೊಂದಿಗೆ ಮಾಡಿಕೊಂಡ ಕರಾರಿನ ಷರತ್ತುಗಳಿಗೆಲ್ಲ ಟಿಪ್ಪು ಸುಲ್ತಾನ್ ಒಪ್ಪಿಗೆ ಕೊಟ್ಟು, ಅವುಗಳನ್ನಂUಕರಿಸಿದ. ಫ್ರೆಂಚ್ ದ್ವೀಪದ ಗವರ್ನರ್ ಹೊರಡಿಸಿದ ಪ್ರಕಟಣೆಯೊಳಗಿನ ಎಲ್ಲ ಅಂಶಗಳಿಗೂ ಒಪ್ಪಿಗೆ ಕೊಟ್ಟ. ಅವುಗಳನ್ನಾಚರಣೆಗೆ ತರಲಾರಂಭಿಸಿದ.
7.ಈ ಒಪ್ಪಂದದಿಂದ ಸುಲ್ತಾನನಿಗೆ ಫ್ರೆಂಚರಿಂದ ಸಿಕ್ಕಿದ ಸೈನ್ಯಬಲವಷ್ಟರಲ್ಲೇ ಇದೆ. ಆದರೆ ಒಪ್ಪಂದದ ಹಿಂದಿನ ಮನೋಧರ್ಮ ನೋಡಬೇಕು. ಫ್ರೆಂಚರಿಂದ ಅಮಿತ ಸೈನ್ಯ ಬಲವನ್ನು ಸುಲ್ತಾನನು ಅಪೇಕ್ಷಿಸಿದನೆಂಬುದನ್ನು ಗಮನಿಸಬೇಕು. ಈ ಸೈನ್ಯ ಸಹಾಯವನ್ನು ಅವನು ಅಪೇಕ್ಷಿಸಿದ್ದಾದರೂ ಯಾತಕ್ಕೆ? ಭಾರತದಲ್ಲಿ ಕಂಪೆನಿಯ (ಬ್ರಿಟಿಷರ) ಮೇಲೆ ಸಂಗ್ರಾಮ ಹೂಡಲಿಕ್ಕೆ.
12-8-1784ನೆಯ ದಿನ ಗವರ್ನರ್ ಜನರಲ್ ಈ ರೀತಿ ಟಿಪ್ಪುವಿನ ಮೇಲೆ ಏಳು ಆಪಾದನೆಗಳನ್ನು ಹೊರಿಸಿ, “ಟಿಪ್ಪುವಿನ ನಡತೆಯು ಅಂತಾರಾಷ್ಟ್ರೀಯ ನೀತಿ ನಿಯಮಗಳಿಗೆ ವಿರುದ್ಧ”ವೆಂದು ಹೇಳಿದರು. ಅವರು ಹೀಗೆ ಹೇಳುವ ವೇಳೆಗೆ ಭಾರತದಲ್ಲೇ ಬ್ರಿಟಿಷರು ಇತರ ಪ್ರಭುತ್ವಗಳೊಂದಿಗೆ ಮಾಡಿಕೊಂಡ ಕರಾರುಗಳ ವಿಧಿಗಳನ್ನು ಎಷ್ಟೋ ಸಾರಿ ಉಲ್ಲಂಘಿಸಿದ್ದರು. ಅಷ್ಟೇಕೆ; ಹೈದರನೊಂದಿಗೆ ಬ್ರಿಟಿಷರು ಮಾಡಿಕೊಂಡ ಕರಾರನ್ನು ಎಷ್ಟರ ಮಟ್ಟಿಗೆ ಪಾಲಿಸಿದರು?
“ತನಗೂ, ಕಂಪೆನಿಗೂ ಆದ ಕರಾರುಗಳನ್ನು ಶಾಂತಿ ಮತ್ತು ಸ್ನೇಹದ ಕರಾರುಗಳನ್ನು ಟಿಪ್ಪು ಸುಲ್ತಾನ ಉಲ್ಲಂಘಿಸಿದ್ದಾನೆ. ಹೀಗೆ ಉಲ್ಲಂಘಿಸಿ ಇಂಡಿಯಾ ದೇಶದ ಬ್ರಿಟಿಷ್ ಸರಕಾರದ ಮೇಲೆ ವೈರ ಕಟ್ಟಿ, ದುಷ್ಕೃತ್ಯ ನಡೆಸಿದ್ದಾನೆ” ಎಂದು ಹೇಳಿ, ಬ್ರಿಟಿಷರು ಯುದ್ಧವನ್ನಾರಂಭಿಸಿಯೇಬಿಟ್ಟರು.
ಹೈದರನಂತೆಯೇ ಟಿಪ್ಪುವೂ ಸಹ ಬ್ರಿಟಿಷರ ಪರಮ ವೈರಿ. ಅವರನ್ನು ಭಾರತದಿಂದ ಓಡಿಸುವುದೇ ಅವನ ದೃಢ ಸಂಕಲ್ಪ. ಆ ಸಂಕಲ್ಪ ಸಾಧನೆಗಾಗಿ ಹೈದರನು ಭಾರತೀಯ ಅರಸರ, ನವಾಬರ ಸಹಾಯ-ಸಹಕಾರಗಳನ್ನು ಅಪೇಕ್ಷಿಸಿದರೆ ಟಿಪ್ಪು ಭಾರತೀಯ ಅರಸರ ಸಹಜ ದೌರ್ಬಲ್ಯಗಳನ್ನು ಅಳೆದು ಅವರ ಸಹಾಯವನ್ನು ಅಪೇಕ್ಷಿಸಿದ; ಜತೆಗೆ ಭಾರತದ ಹೊರಗಿನ ಪ್ರಭುತ್ವಗಳೊಂದಿಗೂ ರಾಯಭಾರ ನಡೆಸಿ, ಭಾರತ ಸ್ವಾತಂತ್ರದ ಪರಮ ವೈರಿಗಳನ್ನು ಎದುರಿಸಿ, ಧ್ವಂಸ ಮಾಡಲು ಹಂಚಿಕೆ ಹಾಕಿದ.
ಫ್ರಾನ್ಸ್, ತುರ್ಕಿ, ಇರಾನ್, ಅಪಘಾನಿಸ್ತಾನಗಳೊಂದಿಗೆ ಸ್ನೇಹ ಬಾಂಧವ್ಯ ಸ್ಥಾಪಿಸಲು ಪ್ರಯತ್ನ ಮಾಡಿದ. ಅಂತಾರಾಷ್ಟ್ರೀಯ ನೀತಿಯ ದೃಷ್ಟಿಯಿಂದ ಬೆಲೆ ಕಟ್ಟಿ ನೋಡುವಾಗ ಭಾರತೀಯ ರಾಜ ನೀತಿಜ್ಞರಲ್ಲಿ ಟಿಪ್ಪುವೇ ವೊದಲಿಗ. (Studies in Indian History, Sen pm.147)

ಸಂಪಾದನೆ: ಕೋ.ಚೆನ್ನಬಸಪ್ಪ

Advertisement

0 comments:

Post a Comment

 
Top