PLEASE LOGIN TO KANNADANET.COM FOR REGULAR NEWS-UPDATES

 ತುಂಗಭದ್ರಾ ಜಲಾಶಯದಲ್ಲಿ ೨೦೧೨-೧೩ನೇ ಸಾಲಿನ ಹಿಂಗಾರು ಹಂಗಾಮಿಗೆ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇದ್ದು, ಲಭ್ಯತೆ ಅನುಸಾರ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾಗೂ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗಳಿಗೆ ಕಡಿಮೆ ಪ್ರಮಾಣದಲ್ಲಿ ನಿಯಂತ್ರಿಸಿ ಪೂರೈಕೆ ಮಾಡಿ  ಪ್ರಮಾಣಕ್ಕನುಗುಣವಾಗಿ ವಿವಿಧ ವಿತರಣಾ ಕಾಲುವೆಗಳಲ್ಲಿ ನೀರಿನ ಹರಿವಿನ ಪ್ರಮಾಣವನ್ನು ನಿಯಂತ್ರಿಸಿ ಒದಗಿಸಲಾಗುವುದು.
       ಅಚ್ಚುಕಟ್ಟುದಾರರು ಕಾನೂನು ಬಾಹೀರವಾಗಿ ಯಾವುದೇ ಗೇಟ್‌ಗಳನ್ನು ತೆರೆಯುವುದಾಗಲಿ, ದಕ್ಕೆ ಮಾಡುವುದಾಗಲಿ ಮಾಡಬಾರದೆಂದು ಸೂಚನೆ ನೀಡಲಾಗಿದೆ. ಹಾಗೂ ನಿಗದಿಪಡಿಸಿದ ಅಧಿಕೃತ ಅಚ್ಚುಕಟ್ಟಿನಲ್ಲಿ ಮಿತ ನೀರಾವರಿ ಬೆಳೆಗಳನ್ನು ಮಾತ್ರ ಬೆಳೆದು ಇಲಾಖೆಯೊಂದಿಗೆ ಸಹಕರಿಸಬೇಕು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಸ್.ಹೆಚ್. ಮಂಜಪ್ಪ  ಮನವಿ ಮಾಡಿದ್ದಾರೆ.

Advertisement

0 comments:

Post a Comment

 
Top