PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಡಿ.೧೩ ರಂದು ನಗರದ ಆಟೋ, ಟಾಟಾ ಮ್ಯಾಜಿಕ್, ಟಾಂಟಾಂ ಚಾಲಕರುಗಳಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
     ಕೊಪ್ಪಳ ನಗರ ಠಾಣೆಯ ಪಿ.ಐ ವಿಜಯಕುಮಾರ ಬಿರಾದಾರ ಮತ್ತು ಕೊಪ್ಪಳ ನಗರ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ರವಿ ಪುರುಷೋತ್ತಮ ಅವರು ವಾಹನ ಚಾಲಕರುಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಸಲಹೆ, ಸೂಚನೆಗಳನ್ನು ನೀಡಿದರು.  ಕರ್ತವ್ಯವನ್ನು ನಿರ್ವಹಿಸುವಾಗ ವಾಹನದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದರಿಂದ ಉಂಟಾಗುವ ತೊಂದರೆಗಳ ಬಗ್ಗೆ ವಾಹನ ಚಾಲಕರಿಗೆ ಮನವರಿಕೆ ಮಾಡಲಾಯಿತು. ವಾಹನವನ್ನು ನಡೆಸುವ ಚಾಲಕರು ಕಡ್ಡಾಯವಾಗಿ ವಾಹನ ಚಾಲನಾ ಪತ್ರ, ವಾಹನದ ನೊಂದಣಿ ಮತ್ತು ವಿಮೇ ಮಾಡಿಸುವುದು, ಸಮವಸ್ತ್ರ ಧರಿಸುವುದು ತುಂಬಾ ಮುಖ್ಯವಾದ ಕೆಲಸವಾಗಿದೆ. ಆಟೋ ಚಾಲಕರು ಕೊಪ್ಪಳ ನಗರದಲ್ಲಿ ಸಂಚರಿಸುವಾಗ ಪ್ರಯಾಣಿಕರನ್ನು ಆಟೋದಿಂದ ಕೆಳಗೆ ಇಳಿಸುವಾಗ ಮತ್ತು ಹತ್ತಿಸಿಕೊಳ್ಳುವಾಗ ಆಟೋ ನಿಲ್ಲಿಸಲು ನಿಗದಿ ಮಾಡಿದ ಸ್ಥಳದಲ್ಲಿಯೇ ನಿಲ್ಲಿಸುವುದರ ಬಗ್ಗೆ ಸೂಚನೆ ನೀಡಿದರು.   ಕೆಲವು ಆಟೋರಿಕ್ಷಾ ಚಾಲಕರುಗಳು ಆಟೋರಿಕ್ಷಾ ನಿಲ್ದಾಣವನ್ನು ಬಿಟ್ಟು ಬೇರೆ ಕಡೆ ಪ್ರಯಾಣಿಕರನ್ನು ನಿಮ್ಮೆದುರಿನಲ್ಲೆ ಹತ್ತಿಸಿಕೊಂಡು ಹೊದರೆ ಅಂತಹ ಆಟೋ ನಂಬರುಗಳನ್ನು ಸಂಚಾರ ಪೊಲೀಸರಿಗೆ ಕೊಡಿ, ಕೊಪ್ಪಳಕ್ಕೆ  ಹೊರಗಡೆಯಿಂದ ಹೊಸದಾಗಿ ಬಂದ ಪ್ರಯಾಣಿಕರಿಗೆ ಸಭ್ಯತೆಯಿಂದ ವರ್ತಿಸಿ, ಅವರು ಕೇಳಿದ ಸ್ಥಳಕ್ಕೆ ಕರೆದುಕೊಂಡು ಹೋದರೆ ಮತ್ತು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ನಿಮಗೆ ಮತ್ತು ಕೊಪ್ಪಳ ನಗರಕ್ಕೆ ಒಳ್ಳೆಯ ಹೆಸರು ಬರುವುದರಲ್ಲಿ ಸಂದೇಹವಿಲ್ಲ, ಸಂಚಾರ ಪೊಲೀಸರಿಗೆ ನಿಮ್ಮ ಸಹಕಾರ ಯಾವಾಗಲೂ ಇರಲಿ ಎಂದು ಕೊಪ್ಪಳ ನಗರ ಠಾಣೆಯ ಪಿ.ಐ ವಿಜಯಕುಮಾರ ಬಿರಾದಾರ ಮತ್ತು ಕೊಪ್ಪಳ ನಗರ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ರವಿ ಪುರುಷೋತ್ತಮ ಅವರು ಕೊಪ್ಪಳ ನಗರ ಚಾಲಕರಿಗೆ ರಸ್ತೆ ಸುರಕ್ಷತೆಯ ಕುರಿತು ವಿವರಿಸಿದರು.
 

Advertisement

0 comments:

Post a Comment

 
Top