PLEASE LOGIN TO KANNADANET.COM FOR REGULAR NEWS-UPDATES

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ವಿಶೇಷ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಡಿ.೧೫ ರಂದು  ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ನ್ಯಾಯಲಯ ಸಂಕೀರ್ಣ ಆವರಣದಲ್ಲಿ ಏರ್ಪಡಿಸಲಾಗಿದೆ.
ಉದ್ಘಾಟನೆಯನ್ನು ಪ್ರಭಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವರಾಮ ಕೆ. ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಅವರು ವಹಿಸಲಿದ್ದಾರೆ.
ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ.ಯ ಕಾವೇರಿ, ಲಾ ಅಕಾಡೆಮಿ ಅಧ್ಯಕ್ಷರು ಹಾಗೂ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಸಂದ್ಯಾ ಬಿ.ಮಾದಿನೂರ, ಜಿಲ್ಲಾ ಸರ್ಕಾರಿ ವಕೀಲರಾದ ವಿ.ಎಂ.ಭೂಸನೂರಮಠ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎನ್.ಮುತ್ತಗಿ,  ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಆರ್.ವಿ. ಮಠದ, ಸಹ ಕಾರ್ಯದರ್ಶಿ ಶಂಕರ ಬಿಸರಳ್ಳಿ, ಖಜಾಂಚಿ ರವಿಕುಮಾರ ಬೆಟಗೇರಿ ಅವರು ಆಗಮಿಸುವರು. ವಿಶೇಷ ಉಪನ್ಯಾಸಕರಾಗಿ ವಕೀಲರಾದ ಎಸ್.ಬಿ. ಪಾಟೀಲ್ ಅವರು ಮಾನವ ಹಕ್ಕುಗಳ ಸಂರಕ್ಷಣೆಯ ಅಧಿನಿಯಮ ೧೯೯೩ ರ ಅನುಷ್ಠಾನದ ಕುರಿತು, ವಕೀಲರಾದ ಭೀಮಸೇನಜೋಶಿ ಅವರು ಮಾನವ ಹಕ್ಕುಗಳ ಆಯೋಗಗಳ ಕುರಿತು ಹಾಗೂ ವಕೀಲರಾದ ಗುರುರಾಜ ಜೋಶಿ ಅವರು ಉಚಿತ ಕಾನೂನು ನೆರವು ಹಾಗೂ ಮೂಲಸೌಲಭ್ಯಗಳು  ವಿಷಯ ಕುರಿತು ಉಪನ್ಯಾಸ ನೀಡುವರು.

Advertisement

0 comments:

Post a Comment

 
Top