PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ. ನ. ೩೦. ಬೆಂಗಳೂರಿನ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಾನ ಕೊಡಮಾಡುವ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಇಬ್ಬರು ಲೇಖಕಿಯರ ಕೃತಿಗಳು ಆಯ್ಕೆಯಾಗಿವೆ ಎಂದು ಸಂಘಟಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
೨೦೦೯-೧೦ ಮತ್ತು ೨೦೧೦-೧೧ ಸಾಲಿನಲ್ಲಿ ಅರುಣಾ ನರೇಂದ್ರ ಪಾಟೀಲ ರವರ ಶ್ರೀ ಧೀರ ಭೀರೇಶ್ವರ ವಚನಗಳು ಮತತು ಪುಷ್ಪಲತಾ ರಾಜಶೇಖರ ಏಳುಬಾವಿಯವರ ಕುಣಿ ಕುಣೀದು ಬಾ ಲವಿಲೆ ಎಂಬ ಕೃತಿಗಳು ಆಯ್ಕೆಯಾಗಿವೆ. ಈ ಪ್ರಶಸ್ತ್ತಿಯನ್ನು ೨೦೧೨ ಡಿಸೆಂಬರ್ ೯ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವದು.
    ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಾನದ ೨೧ ನೇ ವರ್ಷದ ಸಾಧನಾ ಸಂಗಮ ಎಂಬ ಕಾರ್ಯಕ್ರಮವನ್ನು ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ ಮತ್ತು ಸಂಸ್ಥೆಯ ಗೌರವ ಅಧ್ಯಕ್ಷ ಸಿ. ವಿ. ಚಂದ್ರಶೇಖರ ರವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಗುತ್ತಿದ್ದು, ಪ್ರಶಸ್ತಿ ಪುರಸ್ಕೃತ ಲೇಖಕಿಯರಿಗೆ ನಾಗರಾಜ ಚಲವಾದಿ, ಶಿವಾನಂದ ಹೊದ್ಲೂರ, ಅಣ್ಣಪ್ಪ ಕಾಟೇಕರ್, ಪಾರ್ವತಿ ವಾಲ್ಮೀಕಿ, ಶಂಕ್ರಪ್ಪ, ವಿಠ್ಠಲ ಮಾಲಿಪಾಟೀಲ ಇನ್ನೂ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top