PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :- ಕೊಪ್ಪಳ ತಾಲೂಕಿನ ಹನುಮನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ’ಶಿಕ್ಷಣದಲ್ಲಿ ರಂಗಭೂಮಿ’ ಕುರಿತು ನಾಟಕ ಪ್ರದರ್ಶನ ಮತ್ತು ಸಂವಾದ ಶಿಬಿರ ಡಿ.೩ ಮತ್ತು ೪ ರಂದು ನಡೆಯಲಿದೆ. ಇದರ ಜೊತೆಗೆ ನೂತನ ಶಾಲಾ ಕಟ್ಟಡದ ಶಂಕು ಸ್ಥಾಪನೆ ನಡೆಯಲಿದ್ದು, ಶಾಲೆಯನ್ನು ದತ್ತು ಸ್ವೀಕರಿಸಿರುವ ಗುತ್ತಿಗೆದಾರರಾದ ಎಸ್.ಆರ್.ನವಲಿಹಿರೇಮಠ ಮತ್ತು ಶಾಸಕರಾದ ಸಂಗಣ್ಣ ಕರಡಿ, ಜಿ.ಪಂ ಸದಸ್ಯರಾದ ವನೀತಾ ಗಡಾದ, ತಾ.ಪಂ ಸದಸ್ಯರಾದ ಬಾಳಪ್ಪ ಕಾಮನೂರ, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ.
    ಮುಖ್ಯ ಅತಿಥಿಗಳಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ರಾಜರಾಂ, ಅಪರ ಜಿಲ್ಲಾಧಿಕಾರಿ ಬಿ.ಪಿ.ಅಡ್ನೂರು, ಬಿ.ಇ.ಓ. ಬಸವರಾಜಯ್ಯ, ಉಪನಿರ್ದೇಶಕ ಹೆಚ್.ಈರಣ್ಣ, ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಶಂಭುಲಿಂಗನಗೌಡ ಹಲಗೇರಿ. ಪ್ರಭು ಕಿಡದಾಳ, ಮಂಜುನಾಥ.ಬಿ ರವರು ಭಾಗವಹಿಸಲಿದ್ದಾರೆ ಎಂದು ಮುಖ್ಯ ಶಿಕ್ಷಕರಾದ ಮಲ್ಲಪ್ಪ ಹವಳಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top