PLEASE LOGIN TO KANNADANET.COM FOR REGULAR NEWS-UPDATES


 ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವ್ಯಾಪ್ತಿಗೆ ಒಳಪಡುವ ಸಂಗೀತ ನೃತ್ಯಾದಿ ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ/ಅಧ್ಯಯನ ಮಾಡಲು ಆಸಕ್ತಿ ಹೊಂದಿರುವ ಪರಿಣಿತ ಕಲಾವಿದರು/ತಜ್ಞರಿಂದ ಫೆಲೋಶಿಪ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
  ಆಸಕ್ತರು ಸಂಶೋಧನೆ/ಅಧ್ಯಯನ ನಡೆಸುವ ವಿಷಯದ ಬಗ್ಗೆ ಸುಮಾರು ೫-೬ ಪುಟಗಳ ಸಾರಲೇಖನವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು, ಅಧ್ಯಯನದ ಅವಧಿ ಒಂದು ವರ್ಷ, ಒಟ್ಟು ಫೆಲೋಶಿಫ್‌ಗಳು ೦೫, ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ೧ ಲಕ್ಷ ರೂ.ಗಳ ಸಂಶೋಧನಾ ನೆರವನ್ನು ನೀಡಲಾಗುವುದು.  ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯ ದೂರವಾಣಿ ಸಂ: ೦೮೦-೨೨೨೧೫೦೭೨ ಕ್ಕೆ ಸಂಪರ್ಕಿಸಬಹುದಾಗಿದೆ.  ಅಥವಾ ವೆಬ್‌ಸೈಟ್   www.karnatakasangeetanrityaacademy.orgರ ಮೂಲಕ ಅರ್ಜಿಯನ್ನು ಪಡೆದು, ಸೂಕ್ತ ದಾಖಲಾತಿಯೊಂದಿಗೆ ಭರ್ತಿ ಮಾಡಿ, ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕಾರ್ಯಾಲಯ, ಕನ್ನಡ ಭವನ, ೨ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨ ಇಲ್ಲಿಗೆ ಅ.೨೦ ರೊಳಗಾಗಿ ಸಲ್ಲಿಸಬೇಕು  ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಸಿ.ಹೆಚ್.ಭಾಗ್ಯ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top