PLEASE LOGIN TO KANNADANET.COM FOR REGULAR NEWS-UPDATES


ಜಿಲ್ಲಾ ಕಾಂಗ್ರೆಸ ಕಾರ್ಯಲಯದಲ್ಲಿ ಮಹಾತ್ಮ ಗಾಂಧಿಯವರ ೧೪೪ ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಮಾತನಾಡಿದವರು ಅಹಿಂಸಾತ್ಮಕವಾಗಿ ಬಿಳಿಯರ ಕಪಿ ಮುಷ್ಠಿಯಿಂದ ನಮ್ಮ ದೇಶಕ್ಕೆ ಸ್ವತಂತ್ರ್ಯವನ್ನು ತಂದು ಕೊಟ್ಟ ಮಹಾತ್ಮ ಗಾಂಧಿಜಿಯವರು ಯಾವತ್ತು ಹಿಂಸೆಯ ಮಾರ್ಗವನ್ನು ಅನುಸರಿಸಲಿಲ್ಲಾ. ಇವರು ಅಹಿಂಸತತ್ವವವು ನಮ್ಮ ಸ್ವತಂತ್ರ್ಯ ಸಂಗ್ರಾಮಕ್ಕೆ ನಾಂದಿಯಾಯಿತು. ದೇಶದ ಬಹಳಷ್ಟು ಜನರು ಮೈ ತುಂಬಾ ಬಟ್ಟೆ ಇಲ್ಲದೆ  ಅರೆಬೆತ್ತಲೆಯ ಪರಸ್ಥಿತಿಯನ್ನು  ನೋಡಿದ ಮಹಾತ್ಮರು ತಾವು ಸಹ ಯಾವತ್ತು ಸಂಪೂರ್ಣ ಮೈ ಮುಚ್ಚುವ ಬಟ್ಟೆಯನ್ನು ಹಾಕಲಿಲ್ಲಾ ಯಾವುದೇ ಅಧಿಕಾರದ ದಾಹವಾಗಲಿ ಇವರಿಗೆ ಇರಲಿಲ್ಲ ಇವರ ತ್ಯಾಗ್ ಬಲಿದಾನವೇ ಇವರನ್ನು ಜಗತ್ತಿನ ಶ್ರೇಷ್ಠರಲ್ಲಿ ಇವರನ್ನು ಮಹಾತ್ಮರನ್ನಾಗಿ ಮಾಡಿತೆಂದು ಹೇಳಿದರು.  
ಈ ಸಂದರ್ಭದಲ್ಲಿ ನಮ್ಮ ದೇಶದ ಎರಡನೇ ಪ್ರಧಾನ ಮಂತ್ರಿಯಾದ ದಿವಗಂತರಾದ ಲಾಲಬಹದ್ದೂರು ಶಾಸ್ರ್ತಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸರೋಜಾ ಬಾಕಳೆಯವರು 
ಲಾಲಬಹದ್ದೂರು ಶಾಸ್ರ್ತಿಯವರ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು. ಎಸ್.ಬಿ.ನಾಗರಳ್ಳಿ, ಮರ್ಧಾನ ಅಲ್ಲಿ ಅಡ್ಡೆವಾಲೆ, ಶಾಂತಣ್ಣ ಮುದಗಲ್, ಗವಿಸಿದ್ದಪ್ಪ ಕಂದಾರಿ, ಇಂದಿರಾ ಭಾವಿಕಟ್ಟಿ, ಕೃಷ್ಣಾ ಇಟ್ಟಂಗಿ, ಗವಿಸಿದ್ದಪ್ಪ ಮುದಗಲ್, ಶಂಕುತಲಾ ಹುಡೇಜಾಲಿ, ಸಿದ್ದಲಿಂಗಯ್ಯ ಹಿರೇಮಠ, ದೇವಮ್ಮ ಚನ್ನವಡೇಯರಮಠ, ಮಾನವಿಪಾಷಾ, ಅಪ್ಸ್‌ರ್‌ಸಾವ್, ಜಿ.ಎಸ್.ಗೋನಾಳ, ಶಿವಾನಂದ ಹೊದ್ಲುರು, ಮುನಿರ ಸಿದ್ದಕ್ಕಿ, ನೂರಜಾ ಬೇಗಂ, ಚನ್ನಮ್ಮ, ಅಕ್ತರ ಪಾರುಕಿ, ಹಾರುನ್ ಖಾನ, ಗೋಲಿಮಹಮ್ಮದ , ಧಾರವಾಡ ರಫಿ, ಮಹೇಬೂಬ್ ಅರಗಂಜಿ, ಪಕ್ಷದ ವಕ್ತಾರರಾದ ಅಕ್ಬರಪಾಷಾ ಪಲ್ಟನ್   ಉಪಸ್ಥಿತರಿದ್ದರು. 

Advertisement

0 comments:

Post a Comment

 
Top