PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಕೊಪ್ಪಳದ ಶ್ರೀ ಗವಿಮಠದ ಜಾತ್ರೆಯ ಆರಂಭದ ಮೊದಲ ದಿನದಲ್ಲಿ ಮಹಾದಾಸೋಹದ ವ್ಯವಸ್ಥೆಯು   ಅಚ್ಚುಕಟ್ಟಾಗಿ, ಸಮರ್ಪಕವಾಗಿ ನಡೆಯುತ್ತಲಿದೆ. ಇಂದು ಬೆಳಿಗ್ಗೆ ೧೧ ಘಂಟೆಗೆ  ಪ್ರಸಾದ ವಿತರಣಾ ಕಾರ್ಯ ಅರಂಭಗೊಂಡು ಅನೇಕ ಭಕ್ತಾಧಿಗಳಿಗೆ ಹಸಿವಿನ ದಾಹ ನೀಗಿಸಿತು. ಇಂದು ರೊಟ್ಟಿ, ಬದನೆಕಾಯಿ, ಮಿಕ್ಸಬಾಜಿ, ಮಾದಲಿ, ಹಾಲು, ತುಪ್ಪ, ಅನ್ನ ಈ ಎನೆಲ್ಲ ಆಹಾರ ಪದಾರ್ಥಗಳು ಭಕ್ತರ ಹಸಿವನ್ನು ನೀಗಿಸಿತು. ಪ್ರಸಾದ ಸವಿದು ಬಂದ ಭಕ್ತರು ಪೂಜ್ಯ ಶ್ರೀಗಳ ಮಹಾಕಾರ್ಯವ್ನು ಶ್ಲಾಘಿಸುತ್ತಾ ಕೃತಾರ್ಥರಾಗಿ ಧನ್ಯತಾ ಭಾವದಿಂದ  ಹೊರಬರುತ್ತಿರುವದು ವಿಶೇಷವಾಗಿತ್ತು. ಇಂದು ಮಂಗಳೂರು,ಕಾಮನೂರು,ಜಂತ್ಲಿ,ಶಿರೂರ, ಹಳ್ಳಿಗೂಡಿ  ಭಕ್ತರು  ಪ್ರಸಾದ ಸಿದ್ದಪಡಿಸುವ ಕಾರ್ಯದಲ್ಲಿ ಸೇವೆಯನ್ನು ಸಲ್ಲಿಸಿದರು.  


ದಾಸೋಹಕ್ಕೆ ಅರ್ಪಣೆ

ಕೊಪ್ಪಳ: ಕೊಪ್ಪಳದ ಶ್ರೀ ಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ ಕಾಣಿಕೆಯ ಮಹಾಪೂರವೇ ಹರಿದುಬರುತ್ತಿದೆ. ಕೊಪ್ಪಳ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಭಕ್ತರು ಜಾತ್ರೆಯ ದಿನ ೪ ಕ್ವಿಂಟಲ್ ಟೊಮೇಟೊ, ೨ ಪಾಕೀಟ್ ಬದನೆ, ೨ ಪಾಕೀಟ್ ಸವತೆಕಾಯಿ, ೧ ಚೀಲ ಮೆಣಸಿನಕಾಯಿ, ೨ ಪಾಕೀಟ್ ಬೆಂಡೆಕಾಯಿ, ೧ ಪಾಕೀಟ್ ಅಕ್ಕಿ, ೩ ಪಾಕೀಟ್ ಜೋಳ ಹೀಗೆ ದವಸ ಧಾನ್ಯ ಮತ್ತು ತರಕಾರಿಗಳ ಕಾಣಿಕೆಯನ್ನ ನೀಡಿರುತ್ತಾರೆ. ಹಾಗೆಯೇ ಇದೇ ಗ್ರಾಮದ ಶ್ರೀಮಠದ ಭಕ್ತರಾದ ಶ್ರೀ ಶಂಕ್ರಪ್ಪ ಚವಡಿ ಹಾಲಹಳ್ಳಿ ಇವರು ಸತತ ೨೫ ವರ್ಷಗಳಿಂದ ಶ್ರೀ ಮಠಕ್ಕೆ ಬಾಳೆದಿಂಡು ಹಾಗೂ ೧೦೦೦ ಬಾಳೆಹಣ್ಣುಗಳನ್ನು ನಿರಂತರವಾಗಿ ಪೂರೈಸುತ್ತಿರುವುದು ಇವರ ಭಕ್ತಿಗೆ ಸಾಕ್ಷಿಯಾಗಿದೆ. 


ಸುಕೋ ಬ್ಯಾಂಕ್‌ನಿಂದ ಶುದ್ಧ ಕುಡಿಯುವ ನೀರಿನ ಅರವಟಿಗೆ ಸ್ಥಾಪನೆ

ಕೊಪ್ಪಳ: ಕೊಪ್ಪಳದ ಶ್ರೀ ಗವಿಮಠದ ಜಾತ್ರೆಯ ಪ್ರಯುಕ್ತ ವಿವಿಧ ಸಂಸ್ಥೆ ಮತ್ತು ಭಕ್ತರು ತಮ್ಮದೇ ಆದ ರೀತಿಯ ಕಾಣಿಕೆಗಳನ್ನು ಸಲ್ಲಿಸುತ್ತಿರುವುದು ಶ್ಲಾಘನೀಯ. ಇದಕ್ಕೆ ಸಾಕ್ಷಿಯೆಂಬಂತೆ ಮಹಾರಥೋತ್ಸವ ದಿನದಂದು  ಜಾತ್ರೆಗೆ ಬಂzಂತಹ ಭಕ್ತರ  ದಾಹ ತಣಿಸಲು ಕೊಪ್ಪಳ ಶಾಖೆಯ ಸುಕೋ ಬ್ಯಾಂಕ್ ಶುದ್ಧ ಕುಡಿಯುವ ನೀರಿನ ಅರವಟಿಗೆಯ ವ್ಯವಸ್ಥೆಯನ ಮಹಾದ್ವಾರದ ಬಲಭಾಗದಲ್ಲಿ ಸ್ಥಾಪಿಸಲಾಗಿದೆ. ಬಿಸಿಲಿನಲ್ಲಿ ಬಂದಂತಹ ಭಕ್ತರ ದಾಹವನ್ನು ನೀಗಿಸಲು ಇಂತಹ ವ್ಯವಸ್ಥೆಯನ್ನು ಮಾಡಿದ  ಸುಕೋ ಬ್ಯಾಂಕ್ ವ್ಯವಸ್ಥಾಕ ಮಂಡಳಿಗೆ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.  

ಕಿನ್ನಾಳದ ಜೈ ಹನುಮಾನ್ ಗರಡಿ ತಂಡದಿಂದ ಸಾಹಸ ಮಲ್ಲಗಂಭ ಪ್ರದರ್ಶನ 
ಕೊಪ್ಪಳ; ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಇಂದು ಶ್ರೀಮಠದ ಆವರಣದಲ್ಲಿ ಕಿನ್ನಾಳದ ಜೈ ಹನುಮಾನ್ ಗರಡಿ ತಂಡವು ಸಂಪ್ರದಾಯದುದ್ದಕ್ಕೂ ಉಳಿಸಿಕೊಂಡು ಬಂದಂತಹ ವಿಜಯನಗರ ಸಾಮ್ರಾಜ್ಯದ ಗರಡಿ ಕಲೆಯ ಸಾಹಸ ಮಲ್ಲಗಂಭ ಪ್ರದರ್ಶನವನ್ನು ಮಾಡಿತು. ಸುಮಾರು ೩೦ ಜನರ ತಂಡವಿರುವ ಈ ಗುಂಪು ವಿಧವಿಧ  ಗರಡಿ ಸಾಹಸ ಕಲೆಗಳನ್ನು ಪ್ರದರ್ಶಿಸಿ ಭಕ್ತರನ್ನು ಹುಬ್ಬೇರಿಸುವಂತೆ ಮಾಡಿದರು.ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ವಿಭಿನ್ನವಾದ ಸಾಹಸಗಳನ್ನು ಪ್ರದರ್ಶಿಸಿದರು. ಇದಕ್ಕೂ ಮುನ್ನ ಶ್ರೀಬಸವರಾಜ ಪುರದ ಉದ್ಘಾಟಿಸಿದರು. ಶ್ರೀ ಪರೀಕ್ಷೀತರಾಜ ಪ್ರಾಚಾರ್ಯರು ಅತಿಥಿಗಳಾಗಿ ಮಾತನಾಡಿದರು. ವೇದಿಕೆಯಲ್ಲಿ ಗುರುರಾಜ ಹಲಗೇರಿ,ಲಚ್ಚಣ್ಣ, ಕಾಳಣ್ಣ ಪರಗಿ, ಪಂಪಣ್ಣ ಎಲಿಗಾರ ಮೊದಲಾದವರು ಉಪಸ್ಥಿತರಿದ್ದರು. 





Advertisement

0 comments:

Post a Comment

 
Top