PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಎರಡನೆಯ ದಿನ ಬಳಗಾನೂರಿನ ಪೂಜ್ಯ ಶ್ರೀಶಿವಶಾಂತವೀರ ಶರಣರು ಶ್ರೀಮಠದ  ಬಲಗಡೆಯ ಪ್ರವೇಶದ್ವಾರದಿಂದ ಹಿಡಿದು ಶ್ರೀ ಲಿಂ.ಜ.ಶ್ರೀಮರಿಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ತನಕ  ಹೂವಿನ ಹಾಸಿಗೆಯ ಮೇಲೆ ಧೀರ್ಘದಂಡ ನಮಸ್ಕಾರ ಹಾಕುವ ಭಕ್ತಿಪೂರ್ವಕ ಕಾರ್ಯಕ್ರಮವು ಭಾರೀಜನಸ್ತೋಮದ ಮಧ್ಯ ಜರುಗಿತು. ಈ ಮೊದಲು ಮೌನತಪಸ್ವಿ ಲಿಂ.ಶರಣರಾದ ಶ್ರೀ ಚನ್ನವೀರ ಶರಣರು ೬೦ ವರ್ಷಗಳ ಕಾಲದಿಂದಲೂ  ಗುರು ಸ್ಮರಣೆಗಾಗಿ ಈ ಧೀರ್ಘದಂಡ ನಮಸ್ಕಾರ ಹಾಕುವ ಭಕ್ತಿಪೂರ್ವಕ ಕಾರ್ಯಕ್ರಮ ಆಯೋಜಿಸಿದ್ದರು
         . ಅವರ ನಂತರ ಶ್ರೀಶಿವಶಾಂತವೀರ ಶರಣರು ಈ ಗುರುರುಪರಂಪರೆಯನ್ನು ಮುಂದುವರಿಸಿದ್ದಾರೆ. ಈ ಕಾರ್ಯಕ್ರಮ ಜಾತ್ರೆಯ ಮರುದಿವಸದ ಕಾರ್ಯಕ್ರಮವಾದರೂ ಜಾತ್ರೆಯಷ್ಟೇ ಜನರು ನಾಡಿನ ಮೂಲೆ ಮೂಲೆಯಿಂದ ಬಂದು ಕಣ್ತೂಂಬಾ ನೋಡಿ ಪುಲಕಿತರಾಗುತ್ತಾರೆ. ಶರಣರ ಹಿಂದೆ ಅಸಂಖ್ಯಾv ಭಕ್ತರುಧೀರ್ಘದಂಡ ನಮಸ್ಕಾರ ಹಾಕಿ ಹರಕೆತೀರಿಸುತ್ತಾರೆ, ಹೊಂಬಳ ಗ್ರಾಮದ ಭಜನಾ ಮಂಡಳಿಯವರ ಭಜನೆ,ತತ್ವಪದಗಾಯನ,ಭಕ್ತಿಗೀತೆಗಳು ಭಕ್ತರನ್ನು ಮಂತ್ರಮುಗ್ದರನ್ನಾಗಿಸುತ್ತದೆ. 

Advertisement

0 comments:

Post a Comment

 
Top