ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕರುಣಾ ಟ್ರಸ್ಟ್ ಹಾಗೂ ಪಿ.ಎಸ್.ಐ. ಸಂಸ್ಥೆ ಕೊಪ್ಪಳ ಇವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ೧ ನೇ ಡಿಸೆಂಬರ್ ೨೦೧೧ ರಿಂದ ೧೨ನೇ ಜನವರಿ ೨೦೧೨ ರವರೆಗೆ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.
ಕರುಣಾ ಟ್ರಸ್ಟ್ ಹಾಗೂ ಪಿ.ಎಸ್.ಐ. ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯಾದ್ಯಂತ ೧ ನೇ ಡಿಸೆಂಬರ್ ೨೦೧೧ ರಿಂದ ೧೨ನೇ ಜನವರಿ ೨೦೧೨ ರವರೆಗೆ ಜನಜಾಗೃತಿ ಆಂದೋಲನದ ಕಾರ್ಯಕ್ರಮದ ವಿವರ ಇಂತಿದೆ.
ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ ಪಟ್ಟಣಗಳಲ್ಲಿ ಪ್ರಭಾತ್‌ಬೇರಿ ಹಾಗೂ ಸ್ಟಾಲ್ (ಮಳಿಗೆ) ಮೂಲಕ ಜನರಿಗೆ ಮಾಹಿತಿ ನೀಡುವುದು, ಕರಪತ್ರಗಳನ್ನು ನೀಡುವುದರ ಮೂಲಕ ಹೆಚ್.ಐ.ವಿ. ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕೊಪ್ಪಳ ಜಿಲ್ಲೆಯ ಚಳಗೇರಿ, ಹಿರೇಮ್ಯಾಗೇರಿ, ಬಳ್ಳೊಟಗಿ, ಆಗೋಲಿ, ಹನುಮನಾಳ, ಹೂಲಿಗೇರ, ಕಲ್ಲೂರ, ಹೊಸಳ್ಳಿ, ಸಿದ್ದಾಪುರ, ಬಿಸರಳ್ಳಿ, ಕವಲೂರು ಹಾಗೂ ಹಲಗೇರಿ ಗ್ರಾಮಗಳಲ್ಲಿ ಸ್ಟಾಲ್‌ಗಳನ್ನು ಹಾಕಿ ಹಾಗೂ ಶಾಲೆ/ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್.ಐ.ವಿ. ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕೊಪ್ಪಳ ಜಿಲ್ಲೆಯ ೧೪ ಗ್ರಾಮಗಳಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಹೆಚ್.ಐ.ವಿ. ರಕ್ತಪರೀಕ್ಷೆಯ ಕ್ಯಾಂಪುಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಕ್ಯಾಂಪುಗಳಲ್ಲಿ ಸುಮಾರು ೮೦೦ ಜನರಿಗೆ ಹೆಚ್.ಐ.ವಿ. ರಕ್ತ ಪರೀಕ್ಷೆ ಮಾಡಿಸಲಾಯಿತು.
ಕೊಪ್ಪಳ ಜಿಲ್ಲೆಯ ಸೋಂಕಿತ/ಬಾಧಿತ ಮಕ್ಕಳಿಗೆ ಪೌಷ್ಟಿಕ ಆಹಾರದ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಏಡ್ಸ್ ಸಮನ್ವಯ ಸಮಿತಿಯನ್ನು ರಚಿಸಲಾಯಿತು ಹಾಗೂ ಪ್ರತಿ ತಾಲೂಕಿನಲ್ಲಿ ಟಾಸ್ಕ್ ಫೋರ್ಸ್ ಕಮಿಟಿಯನ್ನು ಮಾಡಬೇಕೆಂದು ನಿರ್ಧರಿಸಲಾಯಿತು.
ಸ್ವಸಹಾಯ ಸಂಘಗಳಿಗೆ, ಯುವಕ ಸಂಘಗಳಿಗೆ ಹೆಚ್.ಐ.ವಿ. ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿ ಹಳ್ಳಿಗಳಲ್ಲಿ ರೆಡ್ ರಿಬ್ಬನ್ ಕ್ಲಬ್‌ಗಳನ್ನು ಪ್ರಾರಂಭಿಸಲಾಯಿತು.
ಈ ದಿವಸ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜನಜಾಗೃತಿ ಆಂದೋಲನದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಯಾದ ಡಾ. ಹರಿಪ್ರಸಾದ, ಎ.ಆರ್.ಟಿ. ವೈದ್ಯಾಧಿಕಾರಿಯಾದ ಡಾ. ಟಿ.ಹೆಚ್. ಮುಲ್ಲಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಇವರ ಸಮ್ಮುಖದಲ್ಲಿ ಕರುಣಾ ಟ್ರಸ್ಟ್‌ನ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ವಿಜಯಕುಮಾರ ರವರು ೪೨ ದಿವಸದ ಒಂದೇ ಹೆಜ್ಜೆಯ ಕಾರ್ಯಕ್ರಮಗಳ ವರದಿಯನ್ನು ಓದಲಾಯಿತು.
ಈ ಕಾರ್ಯಕ್ರಮದಲ್ಲಿ ಪಿ.ಎಸ್.ಐ.ಸಂಸ್ಥೆಯ ಜೀವನ್, ಕರುಣಾ ಟ್ರಸ್ಟಿನ ಸಂಪರ್ಕ ಕಾರ್ಯಕರ್ತರು ಭಾಗವಹಿಸಿದ್ದರು.
0 comments:
Post a Comment