ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಅವರಾತ್ರಿ ಅಮವಾಸ್ಯೆಯ ನಿಮಿತ್ಯ ಸಂಸ್ಥಾನ ಶ್ರೀ ಗವಿಮಠದಲ್ಲಿ ಮತ್ತೊಂದು ಜಾತ್ರೆಯೆನ್ನುವಷ್ಟು ಭಕ್ತಾಧಿಗಳು ಸೇರಿದ್ದು ವಿಶೇಷವಾಗಿತ್ತು. ಬೆಳಗಿನಿಂದ ಸಾಯಂಕಾಲದವರೆಗೆ ತಂಡೋಪತಂಡವಾಗಿ ಆಗಮಿಸಿ ಭಕ್ತರು ಸಾಲುಸಾಲಾಗಿ ನಿಂತು ಶ್ರೀ ಗವಿಸಿದ್ಧೇಶ್ವರ ಕರ್ತೃ ಗದ್ದುಗೆಗೆ ಕಾಯಿ, ಕರ್ಪೂರ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆಯುತ್ತಿರುವದು ಸಾಮಾನ್ಯವಾಗಿತ್ತು.
ಜಾತ್ರೆಗೆ ಬಂದಂತಹ ಭಕ್ತರು ಮಹಾದಾಸೋಹಕ್ಕೆ ಹೋಗಿ ಗೋಧಿಹುಗ್ಗಿ, ರೊಟ್ಟಿ, ಬಾಜಿ, ಉಪ್ಪಿನಕಾಯಿ,ಅನ್ನ,ಸಾಂಬಾರ ಪ್ರಸಾದವನ್ನು ಸ್ವೀಕರಿಸಿದರು. ಅಚ್ಚುಕಟ್ಟಾದ ವಿಶಾಲ ದಾಸೋಹಮಂಟಪ, ಪುರದ ಪ್ರಮುಖರು, ನೂರಾರು ಬಾಣಸಿಗರು, ಸಾವಿರಾರು ಸೇವಕರು, ಅಲ್ಲದೇ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು, ಸ್ವಯಂ ಸೇವಕರು, ಟೊಂಕಕಟ್ಟಿ ನಿಂತುಕೊಂಡು ಈಡೀ ದಿವಸ ದಾಸೋಹ ಸೇವೆಯಲ್ಲಿ ತೊಡಗಿದ್ದುದು ಕಂಡುಬಂದಿತು. ಹಸಿದವರಿಗೆ ಅನ್ನ ನೀಡುವ ಅನ್ನದಾತರಾದ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ಮನತುಂಬಿ ಕೊಂಡಾಡುತ್ತಿರುವ ದೃಶ್ಯ, ಜನರನ್ನು ನಿಯಂತ್ತಣಮಾಡುವಲ್ಲಿ ಪೋಲಿಸರು ಹರಸಾಹಸ ಮಾಡುತ್ತಿದ್ದ ದೃಶ್ಯ ಕಂಡುಬರುತ್ತಿತು. ಈ ಅಮವಾಸ್ಯೆಯು ಸೋಮವಾರ ದಿನವೇ ಬಂದದ್ದರಿಂದ ರಥೋತ್ಸವದ ದಿನವನ್ನು ನೆನಪಿಸುವಂತಿತ್ತು.
0 comments:
Post a Comment