ಕೊಪ್ಪಳ. ಡಿ.೩. ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು ಮತ್ತು ಬೆಳ್ಳಿ ಮಂಡಲ, ಕೊಪ್ಪಳದ ಆಶ್ರಯದಲ್ಲಿ ನಗರದಲ್ಲಿ ಎರಡು ದಿನಗಗಳ ಅಂತರರಾಷ್ಟ್ರೀಯ ಮಕ್ಕಳ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಳ್ಳಿಮಂಡಲ ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮತ್ತು ಸಹ ಸಂಚಾಲಕ ರುದ್ರಪ್ಪ ಭಂಡಾರಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ : ಡಿಸೆಂಬರ್ ೪ ಮತ್ತು ೫ ರವಿವಾರ ಮತ್ತು ಸೋಮವಾರ ಬೆಳಿಗ್ಗೆ ೧೦-೩೦ ರಿಂದ ಶ್ರೀ ಗವಿಸಿದ್ದೇಶ್ವರ ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ಶಾರದಾ ಸಂಯುಕ್ತ ಪ. ಪೂ. ಕಾಲೇಜು, ಕೊಪ್ಪಳದಲ್ಲಿ ನಡೆಯಲಿರುವ ಮಕ್ಕಳ ಚಿತ್ರೋತ್ಸವದಲ್ಲಿ ಕನ್ನಡ, ಇಂಗ್ಲೀಷ ಮತ್ತು ಹಿಂದಿಯ ೯ ಚಿತ್ರಗಳನ್ನು ಪ್ರದರ್ಶನ ಮಾಡಲಾಗುವದು. ಕನ್ನಡ ಚಿತ್ರಗಳು :
* ಕಿನ್ನರ ಬಾಲೆ * ಬೆಟ್ಟದ ಹೂವು * ಚಿನ್ನಾರಿ ಮುತ್ತ, ಹಿಂದಿ ಚಿತ್ರಗಳು : * ಪಾ * ಭೀಮರಾವ್ ಅಂಬೇಡ್ಕರ್, * ಚೈನ್ ಕುಲಿ ಕಿ ಮೈನ್ ಕುಲಿ ಹಾಗೂ ಇಂಗ್ಲೀಷ ಚಿತ್ರಗಳು ರೆಡ್ ಬಲೂನ್, ಚಿಲ್ಡ್ರನ್ ಆಫ್ ಹೆವೆನ್ ಮತ್ತು ಗುಡ್ ಬೈ ಚಿಲ್ಡ್ರನ್ ಚಿತ್ರಗಳನ್ನು ಪ್ರದರ್ಶನ ಮಾಡಲಾಗುವದು. ಪ. ಪೂಜ್ಯ ಜ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಶ್ರೀಕ್ಷೇತ್ರ ಗವಿಮಠ, ಕೊಪ್ಪಳವರು ದಿವ್ಯ ಸಾನಿಧ್ಯ ವಹಿಸಿ, ಬೆಳ್ಳಿಮಂಡಲ ಉದ್ಘಾಟಿಸುವರು, ಕೊಪ್ಪಳ ಶಾಸಕ ಸಂಗಣ್ಣ ಕರಡಿ ಚಿತ್ರೋತ್ಸವ ಉದ್ಘಾಟನೆ ಮಾಡುವರು,
ಜಿ. ಪಂ. ಉಪಾಧ್ಯಕ್ಷೆ ಶ್ರೀಮತಿ ಡಾ|| ಸೀತಾ ಗೂಳಪ್ಪ ಹಲಗೇರಿ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ, ತಾ. ಪಂ. ಅಧ್ಯಕ್ಷ ಅಮರೇಶ ಉಪಲಾಪೂರ, ವಿನೂತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ಗುತ್ತಿಗೆದಾರ ಎಸ್. ಆರ್. ನವಲಿ ಹಿರೇಮಠ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರ, ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ. ಎಂ. ಸಯ್ಯದ್, ಡಿಡಿಪಿಐ ಮಂಟೇಲಿಂಗಾಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಚಿತ್ರ ಸಾಹಿತಿ ಎಸ್. ವಿ. ಪಾಟೀಲ ಗುಂಡೂರ, ಸಾಹಿತಿ ಮಹಾಂತೇಶ ಮಲ್ಲನಗೌಡರ, ಯಂಕನಗೌಡ ಪಾಟೀಲ ಹೊರತಟ್ನಾಳ, ವಕೀಲ ವಿಜಯ ಅಮೃತ್ ರಾಜ್, ಕಸಾಪ ಅಧ್ಯಕ್ಷ ಜಿ. ಎಸ್. ಗೋನಾಳ, ಶಾರದಾ ಸಂ. ಪ. ಪೂ. ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಿಮಠ, ಚಿಕ್ಕಮಕ್ಕಳ ತಜ್ಞ ಡಾ. ಬಸವರಾಜ ಬಣ್ಣದಬಾವಿ, ಬೆಳ್ಳಿ ಸಾಕ್ಷಿ ಸಂಚಾಲಕ ರಂಗನಾಥ ಕೋಳೂರು ಭಾಗವಹಿಸುವರು.
ಚಿತ್ರೋತ್ಸವದ ಉದ್ದೇಶ : ಮಕ್ಕಳಲ್ಲಿ ಸದಭಿರುಚಿಯ ಚಿತ್ರಗಳನ್ನು ನೋಡುವ ಮತ್ತು ಅದರಮೂಲಕ ಸಾಮಾಜಿಕ ಕಾಳಜಿಯನ್ನು ಅರಿಯುವ ಹಾಗೂ ಸಂಘ ಜೀವಿಯಾಗಿ ಬೆಳೆಯುವ ಕೆಲಸಕ್ಕೆ ಪ್ರೇರಣೆಯಾಗುವಲ್ಲಿ ಈ ಚಿತ್ರೋತ್ಸವ ಪ್ರಮುಖ ಕಾರ್ಯವಾಗಿದೆ. ಜೊತೆಗೆ ಅತ್ಯಂತ ಪ್ರಬಲವಾಗಿರುವ ದೃಶ್ಯ ಮಾದ್ಯಮದಿಂದ ಮಕ್ಕಳಿಗೆ ಸಿಗುವ ಒಳ್ಳೆಯ ಸಂಸ್ಕಾರವನ್ನು ನೀಡುವದು. ಹಾಗು ಉತ್ತಮ ಚಿತ್ರಗಳನ್ನು ಜನರಿಗೆ ತೋರಿಸುವ ಮೂಲಕ ಆ ಚಿತ್ರಗಳ ತಯಾರಿಕೆ ತಂಡಕ್ಕೂ ಬೆಂಬಲ ನೀಡುವ ಉದ್ದೇಶ ಹೊಂದಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.
0 comments:
Post a Comment