PLEASE LOGIN TO KANNADANET.COM FOR REGULAR NEWS-UPDATES


ಸಂಸ್ಥಾನ ಶ್ರೀ ಗವಿಮಠದಲ್ಲಿ ಪ್ರತಿ ಅಮವಾಸ್ಯೆಯ ದಿನ ಜರುಗುವ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮವು ದೀಪಾವಳಿ ಅಮವಾಸ್ಯೆಯ ನಿಮಿತ್ಯ, ಅಮವಾಸ್ಯೆಯ ಮರುದಿನ ದಿ. ೨೭-೧೦-೨೦೧೧, ಗುರುವಾರ, ಬಲಿಪಾಡ್ಯದ ದಿನದಂದು ಸಂಜೆ ೬.೩೦ ಗಂಟೆಗೆ ಶ್ರೀಮಠದ ಕೆರೆಯ ದಂಡೆಯ ಮೇಲಿನ ವೇದಿಕೆಯಲ್ಲಿ ಜರುಗುವುದು. ಕುಷ್ಟಗಿಯ ಜಾನಪದ ಕಲಾವಿದರಾದ ಶರಣಪ್ಪ ವಡಿಗೇರಿ ಅವರಿಂದ ಜಾನಪದ ಹಾಗೂ ತತ್ವಪದ ಗಾಯನ ಕಾರ್ಯಕ್ರಮ ಜರುಗುವುದು. ಅಧ್ಯಕ್ಷತೆಯನ್ನು ಡಾ. ಮಹಾಂತೇಶ ಮಲ್ಲನಗೌಡರ್ ವಹಿಸುವರು. ಬದಲಾದ ಈ ಕಾರ್ಯಕ್ರಮಕ್ಕೆ ಸದ್ಭಕ್ತರು ಆಗಮಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top