PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಇಲ್ಲಿನ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ಡೀನ್‌ಗಳಾದ ಡಾ. ಕೆ.ಬಿ. ಹಿರೇಮಠ ಪ್ರಾಧ್ಯಾಪಕರಿಗೆ ಆಯುರ್ವೇದ ಕ್ಷೇತ್ರ ಮತ್ತು ಶಾರೀರ ವಿಭಾಗದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗಮನಿಸಿ ಅಖಿಲ ಭಾರತ ಶಾರೀರ ಸಂಶೋಧನಾ ಸಂಸ್ಥೆ ಹಾಸನ, ಕರ್ನಾಟಕ ವಿಭಾಗವು ಆದರ್ಶ ಶಾರೀರ ಶಿಕ್ಷಕರೆಂದು ಗುರುತಿಸಿರುತ್ತಾರೆ. ಇದೇ ದಿ. ೧೫-೧೦-೨೦೧೧ ರಂದು ಇಲ್ಲಿನ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಆಯುರ್ವೇದ ಸಮ್ಮೇಳನದಲ್ಲಿ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಡಾ. ಕೆ.ಬಿ. ಹಿರೇಮಠರನ್ನು ಸನ್ಮಾನಿಸಿದರು. ಸನ್ಮಾನ ಸಮಾರಂಭದಲ್ಲಿ ಡಾ. ದೋಯಿ ಪಡೆ, ಎಸ್.ಆರ್. ನವಲಿ ಹಿರೇಮಠ, ಡಾ. ಬಿ.ಎಸ್. ಸವಡಿ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top