ಕೊಪ್ಪಳ : ಇಲ್ಲಿನ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಇತ್ತೀಚಿಗೆ ಅನ್ನವಹ ಸ್ತೋತಸ್ ಮತ್ತು ಕ್ಲಿನಿಕಲ್ ಎನಾಟಮಿ ಎಂಬ ವಿಷಯವಾಗಿ ರಾಷ್ಟ್ರೀಯ ಮಟ್ಟದ ಆಯುರ್ವೇದ ಸಮ್ಮೇಳನ ಜರುಗಿತು. ಕಾಲೇಜಿನ ಚೇರಮನ್‌ರಾದ ಎಸ್.ಆರ್. ನವಲಿ ಹಿರೇಮಠ ಉದ್ಘಾಟಿಸಿ ಇಂತಹ ಸಮ್ಮೇಳನಗಳು ಆಯುರ್ವೇದ ವೈದ್ಯ ವಿದ್ಯಾರ್ಥಿಗಳ ಅರಿವಿನ ದಾಹವನ್ನು ನೀಗಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ನುಡಿದರು.
ವೇದಿಕೆಯ ಮೇಲಿದ್ದ ಪುಣೆಯ ಆಯುರ್ವೇದ ಕಾಲೇಜಿನ ಡೀನ್‌ಗಳಾದ ಡಾ. ದೋಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಡಾ. ವಿ.ಎಸ್. ಶಿರೋಳ, ಪುಣೆಯ ಡಾ. ಮುಕುಂದ್ ಯರಾಂಡೆ, ವಾರಂಗಲ್‌ನ ಡಾ. ಆದಿ ನಾರಾಯಣ ಮತ್ತು ಉಡುಪಿಯ ಡಾ. ಗಿರಿಧರ್ ಕಂಠಿ ವಿವಿಧ ಸಂಶೋಧನಾ ವಿಷಯಗಳನ್ನು ಮಂಡಿಸಿದರು. ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ೨೨ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.
ಶ್ರೀ ಗ.ವಿ.ವ. ಟ್ರಸ್ಟಿನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ, ಸದಸ್ಯರಾದ ಸಂಜಯ್ ಕೊತಬಾಳ ಉಪಸ್ಥಿತರಿದ್ದರು. ಸ್ವಾಗತವನ್ನು ಪ್ರಾಂಶುಪಾಲ ಡಾ. ಬಿ.ಎಸ್. ಸವಡಿ, ಅತಿಥಿಗಳ ಪರಿಚಯವನ್ನು ಡಾ. ಕೆ.ಬಿ. ಹಿರೇಮಠ, ನಿರೂಪಣೆಯನ್ನು ಡಾ. ಸುರೇಶ ಹಕ್ಕಂಡಿ, ಡಾ. ರಾಘವೇಂದ್ರ ಕೆ.ಬಿ. ನೆರವೇರಿಸಿದರು.
0 comments:
Post a Comment