ಕೊಪ್ಪಳ : ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಅಧ್ಯಯನಮಾಡಿ ಸ್ಪೂರ್ತಿ ಪಡೆಯಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳ ಒಳಗಡೆ ಅಡಗಿರುವ ಶಕ್ತಿ ಸಾಮರ್ಥ್ಯಗಳು ತನ್ನ ಅರಿವಿಗೆ ಬರಲು ಸಾಧವಾಗುತ್ತದೆ. ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಚೈತನ್ಯಾನಂದ ಸ್ವಾಮೀಜಿಗಳು ಹೇಳಿದರು.
ಅವರು ಕೊಪ್ಪಳ ತಾಲೂಕಿನ ಬುಡಶೆಟನಾಳದಲ್ಲಿ ಕಿನ್ನಾಳ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯವು ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸಕರಾದ ವಾಸುದೇವ ಜಿ.ಅಡವಿಬಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶಾರದಾತ್ಮಾನಂದ ಸ್ವಾಮೀಜಿ ಉಪನ್ಯಾಸ ನೀಡಿ ಪುಸ್ತಕಗಳು ಒಳ್ಳೆಯ ಗೆಳೆಯರಾಗಿದ್ದು ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳನ್ನು ಅಧ್ಯಯನ ಮಾಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು. ಪ್ರಾಚಾರ್ಯರಾದ ಎಸ್.ಜಿ.ಹೊಸಬಾವಿ, ಹಿರಿಯರಾದ ಅಂದಪ್ಪ ಅಂಗಡಿ , ಯಮನೂರಪ್ಪ ಸಂಗಾಪೂರ, ಸಿದ್ಲಿಂಗಪ್ಪ ಚಂಡೂರ, ನಿಂಗಪ್ಪ ಬಾವಿ, ಶಶಿಧರ ಜೀರಗಿ, ಯಲ್ಲಪ್ಪ ಮಲಕಸಮುದ್ರ, ನಾಗಪ್ಪ ಹಳ್ಳಿಕೇರಿ, ನಾಗನಗೌಡ ಮಾಲಿಪಾಟೀಲ, ದೇವಪ್ಪ ಪೂಜಾರ, ಬಸವರಾಜ ವಾಲ್ಮೀಕಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕೊಪ್ಪಳದ ಕ್ಷೇತ್ರಶಿಕ್ಷಣಾದಿಕಾರಿಗಳ ಕಾರ್ಯಾಯದ ಅಮರೇಶ ಕಮ್ಮಾರ, ರಘುನಾಥ ಸಂಗಳದ, ಪವಾಡ ಬಯಲು ರಹಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಕುಮಾರಿ ಬಸಮ್ಮ ಸಜ್ಜನ ಪ್ರಾರ್ಥಿಸಿದರು. ಉಪನ್ಯಾಸಕರಾದ ಸುಧೀಂದ್ರರಾವ್ ಕುಲಕರ್ಣಿ ನಿರೂಪಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಹೆಚ್. ಎಸ್. ತಿಮ್ಮಾರಡ್ಡಿ ಸ್ವಾಗತಿಸಿದರು. ಉಪನ್ಯಾಸಕರಾದ ಅಡವಿರಾವ್ ಕಸಬೆ ವಂದಿಸಿದರು.
0 comments:
Post a Comment