PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಜನರು ನಗರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಗರ ಸ್ವಚ್ಛವಾಗಿಡಲು ಜನರ ಸಹಕಾರ ಅಗತ್ಯವಾಗಿದೆ. ನಗರದಲ್ಲಿ ಒಳಚರಂಡಿ ಯೋಜನೆ ಜಾರಿಯಲ್ಲಿದೆ. ನಾನೂ ಕೂಡ ಒಂದು ದಿನ ಶ್ರಮದಾನದಲ್ಲಿ ಭಾಗವಹಿಸುತ್ತೇನೆ ಎಂದು ನಗರಸಭಾ ಅಧ್ಯಕ್ಷರಾದ ಸುರೇಶ ದೇಸಾಯಿ ಹೇಳಿದರು. 
ಅವರು ಮಂಗಳವಾರ ಮುಂಜಾನೆ ಕೊಪ್ಪಳದ ದೇವರಾಜ ಅರಸು ಕಾಲೋನಿಯಲ್ಲಿ  ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಹಮ್ಮಿಕೊಂಡ ಎನ್.ಎಸ್.ಎಸ್. ವಾರ್ಷಿಕ ವಿಶೆಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 
ಪ್ರಾಚಾರ್ಯರಾದ ಡಾ. ವಿ.ಬಿ.ರಡ್ಡೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನಲ್ಲಿ ಶಿಸ್ತು, ಸಂಘಟನೆ ಈ ಯೋಜನೆಯ ಉದ್ದೇಶವಾಗಿದೆ ಎಂದರು. 
ನಗರಸಭಾ ಉಪಾಧ್ಯಕ್ಷರಾದ ಅಮ್ಜದ್ ಪಟೇಲ, ಸದಸ್ಯರಾದ ಗವಿಸಿದ್ದಪ್ಪ ಮುಂಡರಗಿ, ಮಾನ್ವಿ ಪಾಷ, ಮೆಹಬೂಬಪಾಷಾ ನಾಲಬಂz, ಹಿರಿಯರಾದ ನಾಸೀರ ಹುಸೇನ, ಉಪನ್ಯಾಸಕರಾದ ಐ.ಎಂ. ಚಿಕ್ಕರೆಡ್ಡಿ. ಲಿಂಗಣ್ಣ ಮೇಟಿ, ರಾಜಶೇಖರ ಪಾಟೀಲ, ಸೌಭಾಗ್ಯ ಬಾಯಿ  ವೀರನಗೌಡ, ಎಸ್.ಎಂ ಭೂಸನೂರಮಠ, ಎಂ ಅನ್ವರ ಹುಸೇನಮುಂತಾದವರು ವೇದಿಕೆಮೇಲೆ ಉಪಸ್ಥಿತರಿದ್ದರು. 
ರೂಪಾ ಕೊನಸಾಗರ ಪ್ರಾರ್ಥಿಸಿದರು. ಎಸ್.ಡಿ. ಹಿರೇಮಠ ನಿರೂಪಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮದ ಅಧಿಕಾರಿಗಳಾದ ಲಲಿತಾ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವಿ. ಮೇಳಿ  ಸ್ವಾಗತಿಸಿರು. ಎಸ್.ಎಂ.ಅಂಗಡಿ ವಂದಿಸಿದರು. 

Advertisement

0 comments:

Post a Comment

 
Top