PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಡಿ ೧೮ ತಾಲೂಕಿನ ಹೊಸ ಕನಕಾಪೂರ ಗ್ರಾಮದಲ್ಲಿ ಇತ್ತೀಚೆಗೆ ದಿನಾಂಕ ೧೬-೧೦-೨೦೧೧ ರವಿವಾರದಂದು ಹೊಸ ಕನಕಾಪೂರ ಕ್ರಾಸ ನಲ್ಲಿ ಕರವೆ ಗ್ರಾಮ ಘಟಕದ ನಾಮ ಪಲಕವನ್ನು ತಾಲೂಕ ಪಂಚಾಯತ ಸದಸ್ಯರಾದ ನಾಗರಾಜ ಚಳ್ಳುಳ್ಳಿ ಅನಾವರಣ ಗೋಳಿಸಿದರು. ಅಲ್ಲಿಂದ ಜಾಂಜಮೇಳದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ವೇದಿಕೆಯ ಮುಂಬಾಗದಲ್ಲಿ ಕನ್ನಡ ದ್ವಜಾರೋಹಣವನ್ನು ಮತ್ತು ಗ್ರಾಮ ಘಟಕವನ್ನು. ಕರವೆ ಜಿಲ್ಲಾಧ್ಯಕ್ಷರಾದ ಬಸನಗೌಡ ಪೋಲಿಸೊಪಾಟೀಲ ಉದ್ಘಾಟಿಸಿದರು ವೇದಿಕೆಯ ಮೇಲೆ ವಿದ್ಯುಕ್ತವಾಗಿ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನಿಡಿಲಾಯಿತು. 
ಕರವೇ ಜಿಲ್ಲಾಧ್ಯಕ್ಷರಾದ ಬಸನಗೌಡ ಪೋಲಿಸೊಪಾಟೀಲ ಮುಂದುವರಿದು ಮಾತನಾಡುತ್ತ, ಕೇವಲ ಯಾವುದೋ ಒಂದು ವಿಷಯಕ್ಕೆ ಅಥವಾ ಹೋರಾಟಕ್ಕೆ ಸೀಮಿತವಾಗಿತವಾಗಿಲ್ಲ. ನಾವು ಸಮಾಜದ ಸುದಾರಣೆಯ ನಿಮಿತ್ತ ನಮ್ಮ ಸಂಘಟನೆಯನ್ನ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಅಂದರೆ , ಆರೋಗ್ಯ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಾಮ ನೈರ್ಯಮಲ್ಯ ದಂತ ಹಲವಾರು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಳ್ಳಬೇಕು ಎಂದು ಗ್ರಾಮ ಘಟಕದ ಪದಾದಿಕಾರಿಗಳಿಗೆ ಕರೆ ನಿಡಿದರು. 
ಕ.g.ವೇ ಗ್ರಾಮ ಘಟಕದ ಅಧ್ಯಕ್ಷರಾದ ಬೀಮಪ್ಪ ಹೆಚ್. ಕಿತ್ತೂರವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕ ಕ.ರ.ವೆ ಅಧ್ಯಕ್ಷರಾದ ಶಿವನಗೌಡ ಪಾಟೀಲ ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತಪ್ಪ ಹಲಗೇರಿ, ತಾಲೂಕ ಪಂಚಾಯತ ಸದಸ್ಯರಾದ ನಾಗರಾಜ ಚಳ್ಳುಳ್ಳಿ, ಯಲಬುರ್ಗಾ ತಾಲೂಕ ಕರವೆ ಅಧ್ಯಕ್ಷರಾದ ಕಳಕಪ್ಪ ಹೋಗಾರ , ಕಲ್ಯಾಣಿ ಕಾರ್ಖಾನೆಯ ಮ್ಯಾನೇಜರ ದುಗ್ಗಪ್ಪ ನವರು ಕರ್‍ಷಾಣಾ ವೇದಿಕೆಯ ಕುರಿತು ಮಾತನಾಡಿದರು. 
ವೇದಿಕೆಯ ಮೇಲೆ ಕರವೇ ಜಿಲ್ಲಾ ವಕ್ತಾರ ಗವಿಸಿದ್ದಪ್ಪ ಕರ್ಕಿಹಳ್ಳಿ, ಕರವೇ ಸಹ ಕಾರ್ಯದರ್ಶಿಯಾದ ಗೋವಿಂದ ರಾಜ ಇಳಗೇರ, ವೀರನ ಗೌಡ ಪಾಟೀಲ, ಅಲ್ಲಾನಗರ ಗ್ರಾಮ ಘಟಕದ ಅಧ್ಯಕ್ಷರಾದ ಮಾರುತ್ತೆಪ್ಪ, ಕನಕಾಪೂರ ಗ್ರಾಮ ಪಂಚಾಯತ ಸದಸ್ಯರುಗಳು ಉಪಸ್ಥಿತರಿದ್ದರು. 
ಈ ಒಂದು ಕಾರ್ಯಕ್ರಮದ ಅಡಿಯಲ್ಲಿ ಹೊಸ ಕನಕಾಪೂರ ಗ್ರಾಮ ಘಟPದ ವತಿಯಿಂದ ವೇದಿಕೆ ಮೇಲಿದ್ದವರಿಗೆ ಶ್ಯಾಲು ಹೊದಿಸಿ ಸನ್ಮಾನಿಸಿದರು ಈ ಕಾರ್ಯಕ್ರಮದ  ನಿರೂಪಣೆಯನ್ನು ನಾಗರಾಜ ಕುರಟ್ಟಿ ವಹಿಸಿದ್ದರು. ಕೊನೆಯಲ್ಲಿ ಮಂಜುನಾಥ ಕಂಪಸಾಗರ ವಂದಿಸಿದರು. 

Advertisement

0 comments:

Post a Comment

 
Top