PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎನ್.ಬಿಲ್ಗಾರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುವ ಪ್ರಯತ್ನಕ್ಕೆ ಮತ್ತೆ ಚಾಲನೆ ದೊರೆತಿದೆ. ಗೊತ್ತುವಳಿ ಮಂಡನೆ ಮಾಡುವ ಕುರಿತಂತೆ ಚರ್ಚಿಸಲು ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯರು  ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಅಲ್ಲದೇ, ರಾಜೀನಾಮೆ ನೀಡುವಂತೆ ಹಲವಾರು ಬಾರಿ ಹೇರಲಾಗಿದ್ದ ಒತ್ತಡಕ್ಕೆ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ   ನಡೆಯಲಿರುವ ಸಭೆಗೆ ಮಹತ್ವ ಬಂದಿದೆ.

ಈ ಬಾರಿ ಏನೇ ಆಗಲಿ ಜ್ಯೋತಿ ಬಿಲ್ಗಾರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮ ಕುರಿತು ಚರ್ಚಿಸಲು    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಂತರ ಸಭೆ ಸೇರಿ ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಅಧ್ಯಕ್ಷೆಯಾದಾಗಿನಿಂದ ಜ್ಯೋತಿ ಬಿಲ್ಗಾರ್ ಯಾವ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವಾಗಲು ಸಹ ಸದಸ್ಯರೊಂದಿಗೆ ಚರ್ಚಿಸದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದರು ಎಂಬುದು ಬಿಜೆಪಿ ಸದಸ್ಯರ ಆರೋಪ.

10 ತಿಂಗಳ ಅವಧಿ ನಂತರ ರಾಜೀನಾಮೆ ನೀಡಬೇಕು ಎಂಬುದಾಗಿ ಜಿಲ್ಲಾ ಪಂಚಾಯಿತಿಗೆ ಚುನಾವಣೆ ಮುಗಿದ ನಂತರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ಜ್ಯೋತಿ ಬಿಲ್ಗಾರ್‌ಗೆ ಸ್ಪಷ್ಟವಾಗಿ ಹೇಳಲಾಗಿತ್ತು. ಈ ಷರತ್ತಿಗೆ ಸ್ಪಂದಿಸಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ, ಈಗ ಹಠಮಾರಿ ಧೋರಣೆ ತಳೆದಿರುವುದು ಎಷ್ಟು ಸರಿ ಎಂದು ಸದಸ್ಯರು ಪ್ರಶ್ನಿಸುತ್ತಾರೆ.

ಒಂದು ವೇಳೆ ಅವಿಶ್ವಾಸ ಮಂಡನೆಯಾಗಿ ಜ್ಯೋತಿ ಬಿಲ್ಗಾರ್ ಅಧ್ಯಕ್ಷ ಸ್ಥಾನ ತೊರೆದ ಪಕ್ಷದಲ್ಲಿ, ಈಗಿರುವ ಮೀಸಲಾತಿ ಪ್ರಕಾರ, ಹಿರೇಮನ್ನಾಪೂರ ಕ್ಷೇತ್ರದ ಸದಸ್ಯೆ ಅನ್ನಪೂರ್ಣಮ್ಮ ಕಂದಕೂರಗೆ ಅಧ್ಯಕ್ಷೆ ಸ್ಥಾನ ಒಲಿಯಲಿದೆ.                 *ಪ್ರಜಾವಾಣಿ ವಾರ್ತೆ

Advertisement

0 comments:

Post a Comment

 
Top