ಕೊಪ್ಪಳ,ಅ.೨೩ : ತಾಲೂಕಿನ ಹಲಗೇರಿಯಲ್ಲಿ ಭಾಗ್ಯನಗರ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಹಮ್ಮಿಕೊಂಡ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಯಶಸ್ವಿಯಾಗಿ ಜರುಗಿತು.
ಹಲಗೇರಿ ಗ್ರಾ.ಪಂ.ಅಧ್ಯಕ್ಷ ಗಂಗಮ್ಮ ಕೆಂಚಪ್ಪ ಮ್ಯಾಗಳಮನಿ ಅಧ್ಯಕ್ಷತೆವಹಿಸಿದ್ದರು. ಸದಸ್ಯರಾದ ರೇಣುಕಮ್ಮ ಹಳೇಮನಿ, ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿಗಳಾದ ಶಶಿಧರ ಮೂರ್ತಿ, ಪ್ರಾಚಾರ್ಯ ಸಿ.ವಿ.ಜಡಿ, ಉಪನ್ಯಾಸಕರಾದ ಎಂ.ಎಸ್.ಸಜ್ಜನ್, ನಾಗಲಿಂಗಪ್ಪ ಖಂಡ್ರಿ, ಅಮೀನಸಾಬ್ ಸೂಡಿ, ಎ.ಜಿ.ತಿಮ್ಮಾಪುರ, ಎನ್.ಎಸ್.ಕಾರ್ಯಾಕ್ರಮಾಧಿಕಾರಿ ಬಸವರಾಜ ಹಂದ್ರಾಳ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಬುದ್ದಿವಂತ ಜೀವಣ್ಣ ಸಂಗಡಿಗರು ಪ್ರಾರಂಭದಲ್ಲಿ ಪ್ರಾರ್ಥಿಸಿದರು. ರಾಘವೇಂದ್ರ ಹೊಟ್ಟಿ ಸ್ವಾಗತಿಸಿದರು. ಗಾಳಪ್ಪ ನಿರೂಪಿಸಿದರು, ನವೀನ ಕುಲಕರ್ಣಿ ವಂದಿಸಿದರು.
0 comments:
Post a Comment