ಕೊಪ್ಪಳ ಅ.- ಕೊಡಗಿನ ಸೈನಿಕ ಶಾಲೆಗೆ ೨೦೧೨-೧೩ನೇ ಸಾಲಿನ ೬ನೇ ಮತ್ತು ೯ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಲಿಖಿತ ಹಾಗೂ ಮೌಖಿಕ ಪರೀಕ್ಷೆ ಮೂಲಕ ಕೊಡಗಿನ ಸೈನಿಕ ಶಾಲೆಗೆ ಪ್ರವೇಶ ಕಲ್ಪಿಸಲಾಗುತ್ತದೆ. ಪ್ರವೇಶ ಪಡೆಯುವ ವಿದ್ಯಾರ್ಥಿಗಳು ೬ನೇ ತರಗತಿಗಾಗಿ ೧೦-೧೧ ವರ್ಷ ವಯೋಮಿತಿ ಅಂದರೆ ೨ನೇ ಜುಲೈ ೨೦೦೧ ಹಾಗೂ ೧ನೇ ಜುಲೈ ೨೦೦೨ರ ಅವಧಿಯಲ್ಲಿ ಮತ್ತು ೯ನೇ ತರಗತಿಗಾಗಿ ೧೩-೧೪ವರ್ಷ ವಯೋಮಿತಿ ಅಂದರೆ ೨ನೇ ಜುಲೈ ೧೯೯೮ ಹಾಗೂ ೧ನೇ ಜುಲೈ ೧೯೯೯ರ ಅವಧಿಯಲ್ಲಿ ಜನಿಸಿದವರಾಗಿರಬೇಕು. ೬ನೇ ತರಗತಿ ಪ್ರವೇಶಕ್ಕೆ ೨೦೧೨ರ ಜನವರಿ ೮ರಂದು ಬೆಂಗಳೂರು, ದಾವಣಗೆರೆ ಮತ್ತು ಸೈನಿಕ ಶಾಲೆ ಕೊಡಗಿನಲ್ಲಿ ಮತ್ತು ೯ನೇ ತರಗತಿ ಪ್ರವೇಶಕ್ಕೆ ೨೦೧೨ರ ಜನವರಿ ೮ರಂದು ಸೈನಿಕ ಶಾಲೆ ಕೊಡಗಿನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅರ್ಜಿ, ವಿವರಣ ಪತ್ರಕ್ಕಾಗಿ ಸಾಮಾನ್ಯವರ್ಗ ಮತ್ತು ರಕ್ಷಣಾ ವಿಭಾಗದವರು ೫೦೦ ರೂ. ಹಾಗೂ ಎಸ್.ಸಿ., ಎಸ್.ಟಿ., ವರ್ಗದವರು ೩೫೦ ರೂ. ಶುಲ್ಕವನ್ನು ಪಾವತಿಸಿ ಪಡೆಯಬಹುದು. ಅಂಚೆ ಮೂಲಕ ಅರ್ಜಿ ಪಡೆಯುವವರು ಪ್ರಾಚಾರ್ಯರು, ಸೈನಿಕ ಶಾಲೆ, ಕೊಡಗು ಕೂಡಿಗೆ ಅಂಚೆ, ಕೊಡಗು ಜಿಲ್ಲೆ ಕರ್ನಾಟಕ-೫೭೧೨೩೨, ಇವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಮೈಸೂರು ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಆಕ್ಸಸ್ ಬ್ಯಾಂಕ್ ಮತ್ತು ಐ.ಸಿ.ಐ.ಸಿ.ಐ. ಬ್ಯಾಂಕಿನಿಂದ ಪಡೆದ ಡಿಡಿಯನ್ನು ಸ್ವವಿಳಾಸವುಳ್ಳ ೨೫ ರೂ. ಅಂಚೆ ಚೀಟಿ ಅಂಟಿಸಿದ ೯ * ೭ ಅಳತೆಯ ಲಕೋಟೆಯೊಂದಿಗೆ ಕೋರಿಕೆಯನ್ನು ೨೦೧೧ರ ಡಿಸೆಂಬರ್ ೩ರೊಳಗೆ ಸಲ್ಲಿಸಿ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿ:೧೦-೧೨-೨೦೧೧ ಇದ್ದು, ಅರ್ಜಿ ನಮೂನೆ ಮತ್ತಿತರ ವಿವರಗಳಿಗಾಗಿ ಕೊಡಗು ಸೈನಿಕ ಶಾಲೆಯ ಪ್ರಾಚಾರ್ಯರ ಕಚೇರಿಯನ್ನು ಸಂಪರ್ಕಿಸಬಹುದು .
0 comments:
Post a Comment