ಏಕೆಂದರೆ ಪ್ರಶಸ್ತಿ ಜೊತೆಗೆ ೨೦ ಗ್ರಾಂ ತೂಕದ ಚಿನ್ನದ ಪದಕವನ್ನೂ ನೀಡಲಾಗುತ್ತದೆ. ಬಂಗಾರ ದ ಬೆಲೆ ಗಗನ ಮುಟ್ಟಿದೆ. ಇದು ದೀಪಾವಳಿ ಸಮಯ ಆಗಿರುವುದರಿಂದ ಬಂಗಾರ ದರ ಇನ್ನೂ ಹೆಚ್ಚಾಗಬಹುದು. ಹೀಗಾಗಿ ಬೆಲೆ ಏರಿಕೆ ಬಿಸಿ ಸರ್ಕಾರಕ್ಕೂ ತಟ್ಟಲಿದೆ. ಅದರ ಪಾಲಿಗೆ ಪ್ರಶಸ್ತಿ ಭಾರವೂ ಆಗಲಿದೆ.
ಈ ವರ್ಷ ೫೦ ಮಂದಿಯನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಸರ್ಕಾರ ವೇನೋ ಹೇಳಿದೆ. ಈ ಹಿಂದೆಯೂ ಇಂಥ ಹೇಳಿಕೆ ಕೊಟ್ಟಿದ್ದುಂಟು. ಆದರೆ ಜಾರಿಗೆ ಬಂದಿರಲಿಲ್ಲ ಅಷ್ಟೇ. ಪ್ರಶಸ್ತಿ ಕೋರಿ ಬರುತ್ತಿರುವ ಆರ್ಜಿಗಳ ಸಂಖ್ಯೆ ನೋಡಿದರೆ ೫೦ರ ಸಂಖ್ಯೆಗೆ ಅಂಟಿ ಕೊಳ್ಳುವುದು ಸರ್ಕಾರದ ಪಾಲಿಗೆ ಕೊಂಚ ಕಷ್ಟವೇ ಆದೀತು.
ಅರ್ಜಿಗಳ ಸಂಖ್ಯೆ ಜೊತೆಗೆ ಚಿನ್ನದ ದರ ಏರಿಕೆಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಾಲಿಗೆ ತಲೆಬಿಸಿಯಾಗಿದೆ. ಶನಿವಾರದವರೆಗೂ ಸಲ್ಲಿಕೆಯಾದ ಅರ್ಜಿಗಳನ್ನು ನೋಡಿ ಇಲಾಖೆ ಅಧಿಕಾರಿ ಗಳ ತಲೆ ಗಿರಗಿರ ತಿರುಗಲು ಆರಂಭಿಸಿದೆ. ಈ ವರೆಗೆ ೪ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದೇ ಇದಕ್ಕೆ ಮುಖ್ಯ ಕಾರಣ. ಈ ಪೈಕಿ ಸಚಿವರ ಕಚೇರಿಗೆ ೨ ಸಾವಿರ ಮತ್ತು ಇಲಾಖೆ ಆಯುಕ್ತರ ಕಚೇರಿಗೆ ೨ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅರ್ಜಿಗಳ ಮಹಾಪೂರ ಕಂಡ ಸಚಿವರು ಮತ್ತು ಅಧಿಕಾರಿಗಳೇ ಬೆಚ್ಚಿದ್ದಾರೆ.
ಪ್ರಶಸ್ತಿ ತುಂಬಾ ಭಾರ: ರಾಜ್ಯೋತ್ಸವ ಪ್ರಶಸ್ತಿ ೧ಲಕ್ಷ ನಗದು, ೨೦ ಗ್ರಾಂ ತೂಕದ ಚಿನ್ನದ ಪದಕ ಒಳಗೊಂಡಿದೆ.
೫೦ ಮಂದಿಗೆ ಪ್ರಶಸ್ತಿ ನೀಡಿದರೆ ಸರ್ಕಾರಕ್ಕೆ ಅಂತಹ ಹೊರೆ ಆಗದು. ಕಳೆದ ವರ್ಷ ಚಿನ್ನದ ಬೆಲೆ ೧೦ ಗ್ರಾಂಗೆ ರು.೧೭ ಸಾವಿರ ಇತ್ತು. ಕೊನೆ ಘಳಿಗೆಯಲ್ಲೂ ಪ್ರಶಸ್ತಿ ವಿಜೇತರ ಪಟ್ಟಿ ಬೆಳೆದಿದ್ದರಿಂದ ೧೮೨ ಮಂದಿಗೆ ನೀಡಬೇಕಾಯಿತು. ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರು.೨.೫ ಕೋಟಿ ವೆಚ್ಚ ಮಾಡಿತ್ತು.
ಆದರೆ ಈ ಬಾರಿಯ ಪರಿಸ್ಥಿತಿಯೇ ಬೇರೆ. ಚಿನ್ನದ ಬೆಲೆ ೧೦ ಗ್ರಾಮ್‌ಗೆ ರು.೨೭ ಸಾವಿರಕ್ಕೂ ಅಧಿಕ. ನಗದು, ೨೦ ಗ್ರಾಂ ತೂಕದ ಪದಕ ಎಲ್ಲ ಸೇರಿದರೆ ಒಬ್ಬೊಬ್ಬರಿಗೆ ಸುಮಾರು ರು.೨ ಲಕ್ಷದವರೆಗೆ ಖರ್ಚಾಗುತ್ತದೆ. ಇದರಿಂದ ಸರ್ಕಾರಕ್ಕೆ ಹೊರೆಯೂ ಹೆಚ್ಚಾಗುತ್ತದೆ.
೫೦ ಸಾಧಕರಿಗೆ ಮಾತ್ರ: ಈ ವರ್ಷದಿಂದ ಪಟ್ಟಿಯನ್ನು ೫೦ಕ್ಕೆ ಸೀಮಿತಗೊಳಿಸಿ ಪ್ರಶಸ್ತಿಯ ಮೌಲ್ಯ ಕಾಪಾಡಲು ಇಲಾಖೆ ಮುಂದಾಗಿದೆ. ಇದರಿಂದ ವೆಚ್ಚವೂ ಕಡಿಮೆಯಾಗುತ್ತದೆ. ಇದೆಲ್ಲ ಕ್ಕಿಂತ ಮುಖ್ಯವಾಗಿ ಅರ್ಜಿ ಸಲ್ಲಿಸುವವರಿಗಿಂತ ಆರ್ಜಿ ಸಲ್ಲಿಸದ ಮತ್ತು ನೈಜ ಸಾಧಕರನ್ನು ಗುರುತಿಸಿ ಗೌರವಿಸುವ ಬಗ್ಗೆ ಇಲಾಖೆ ಚಿಂತಿಸಿದೆ. ಈ ಬಗ್ಗೆ ಸಚಿವ ಗೋವಿಂದ ಕಾರಜೋಳ ಮುಖ್ಯಮಂತ್ರಿ ಸದಾನಂದಗೌಡರೊಂದಿಗೆ ಮಾತುಕತೆ ನಡೆಸಿದ್ದು, ಇದಕ್ಕೆ ಒಪ್ಪಿಗೆಯೂ ಸಿಕ್ಕಿದೆ.
೨೬ರಂದು ಆಯ್ಕೆ ಸಮಿತಿ ಸಭೆ: ಮುಖ್ಯಮಂತ್ರಿ ನೇತೃತ್ವದಲ್ಲಿ ಅ.೨೬ರಂದು ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಡೆಯಲಿದೆ. ಸಚಿವರಾದ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಡಾ.ವಿ. ಎಸ್.ಆಚಾರ್ಯ, ಅಶೋಕ, ಸುರೇಶ್‌ಕುಮಾರ್, ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ೧೩ ವಿವಿಧ ಅಕಾಡೆಮಿಗಳ ಅಧ್ಯಕ್ಷರನ್ನೊಳಗೊಂಡ ಸಮಿತಿಯಲ್ಲಿ ಪ್ರಶಸ್ತಿ ವಿಜೇತರ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಲಿದೆ.
ಪ್ರಶಸ್ತಿಯ ಮೌಲ್ಯ ಉಳಿಸುವುದಕ್ಕಾಗಿ ಮತ್ತು ನೈಜ ಸಾಧಕರಿಗೆ ಗೌರವ ಸಿಗಲಿ ಎಂಬ ಕಾರಣಕ್ಕೆ ಈ ಬಾರಿ ಪಟ್ಟಿಯನ್ನು ೫೦ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಿದ್ದೇವೆ. -ಗೋವಿಂದ ಕಾರ ಜೋಳ, ಸಚಿವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
0 comments:
Post a Comment