PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ನಗರದ ಹುಲಿಕೆರೆ ಅಭಿವೃದ್ದಿ ಮಾಡುವುದಕ್ಕಾಗಿ ದೇವಾಂಗಮಠ ಮತ್ತು ಮರ್ದಾನಗೈಬ್ ಗೆ ಹೋಗುವ ರಸ್ತೆಯ ಅಗಲೀಕರಣಕ್ಕೆ ಮಾರ್ಕ ಮಾಡಿರುವುದನ್ನು ವಿರೋಧಿಸಿ ಜನತೆ ನಗರಸಭೆಗೆ ಮುತ್ತಿಗೆ ಹಾಕಿದರು. 100 ಅಡಿ ರಸ್ತೆ ನಿರ್ಮಿಸಲು ಈ ಮಾರ್ಕಗಳನ್ನು ನಗರಸಭೆ ಹಾಕಿದೆ ಎನ್ನಲಾಗುತ್ತಿದ್ದು ಇದರಿಂದ ರಸ್ತೆಯ ಎರಡೂ ಕಡೆ ಇರುವ ನೂರಾರು ಕುಟುಂಬಗಳು ಮನೆಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮುಖಂಡರು ಹಾಗೂ ಕನಕಗಿರಿ, ಸಿರಸಪ್ಪಯ್ಯನಮಠದ ಓಣಿಯ ಜನತೆ ನಗರಸಭೆಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದರು.ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಮಾತನಾಡಿ ಅಗಲೀಕರಣ ಇನ್ನೂ ಪರೀಶೀಲನೆ ಹಂತದಲ್ಲಿದೆ ಮನವಿಯನ್ನು ಪರೀಶಿಲಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಬಸವರಾಜ ಹಿಟ್ನಾಳ, ಎಸ್.ಬಿ. ನಾಗರಳ್ಳಿ, ಜೆಡಿಎಸ್ ಕೆ.ಎಂ.ಸಯ್ಯದ್, ರಾಘವೇಂದ್ರ ಹಿಟ್ನಾಳ , ಜುಲ್ಲು ಖಾದ್ರಿ, ಅಮ್ಜದ್ ಪಟೇಲ್, ಮಾನ್ವಿ ಪಾಷಾ ಇನ್ನಿತರರು ಭಾಗವಹಿಸಿದ್ದರು.

Advertisement

1 comments:

  1. thanks!!!!!!!be encouraging our maathrubhasha like this!!!!!!best of luck!!!!!!!

    ReplyDelete

 
Top