ಕೊಪ್ಪಳ : ಇತ್ತೀಚಿನ ದಿನಗಳಲ್ಲಿ ಭಾವಗೀತೆಗಳ ಅಪರೂಪವಾಗಿವೆ. ಭಾವಗೀತೆಗಳನ್ನು ಬರೆಯುವವರು ಹಿರಿಯ ಕವಿಗಳ ಭಾವಗೀತೆಗಳನ್ನು ಅಧ್ಯಯನ ಮಾಡಬೇಕು. ಕವಿತೆಗಳಲ್ಲಿ ಭಾವದ ಜೊತೆಗೆ ವೈಚಾರಿಕತೆಯೂ ಇರಲಿ. ಕವಿಯು ಸಿದ್ದಮಾದರಿಯನ್ನು ಮೀರಿ ಹೊಸತನದ ಹುಡುಕಾಟದಲ್ಲಿ ತೊಡಗಬೇಕು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರಲ್ಲಿ ಹಮ್ಮಿಕೊಂಡಿದ್ದ ೫೮ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾವ್ಯ ತನ್ನ ಮೂಲ ಸೊಗಸನ್ನು ಕಳೆದುಕೊಳ್ಳದೇ ಕಡಿಮೆ ಶಬ್ದಗಳಲ್ಲಿ ಗಟ್ಟಿಯಾಗಿ ಅಭಿವ್ಯಕ್ತಿಗೊಳಿಸುವಂತಾಗಬೇಕು ಎಂದರು.
ಕಾರ್‍ಯಕ್ರಮದ ಆರಂಭದಲ್ಲಿ ಇತ್ತೀಚಿಗೆ ನಿಧನರಾದ ಸಾಹಿತಿ ಲಿಂಗದೇವರು ಹಳೆಮನೆ ಹಾಗೂ ಶರಣಬಸಪ್ಪ ಅಳ್ಳಳ್ಳಿ ಇವರ ಸ್ಮರಣಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
ನಂತರ ನಡೆದ ಕವಿಗೋಷ್ಠಿಯಲ್ಲಿ ಅಲ್ಲಮಪ್ರಭು ಬೆಟ್ಟದೂರು-ಕಾರ್ತಿಕ, ಗುರುರಾಜ ದೇಸಾಯಿ- ಮುದುಕನ ಹಸಿವು, ಸಿರಾಜ್ ಬಿಸರಳ್ಳಿ- ಕುಳಿರ್ಗಾಳಿ, ಮಹಾಂತೇಶ ಮಲ್ಲನಗೌಡರ- ಕರ್ನಾಟಕದ ಕುವರಿ, ಮೆಹಮೂದಮಿಯಾ- ಕಪ್ಪು ಹಣ, ಪುಷ್ಪಾವತೊ- ಹೂ, ಪುಷ್ಪಲತಾ ಏಳುಬಾವಿ- ಕೃಷ್ಣ ಕೊಳಲ ನಿನಾದ, ಶಾಂತಾದೇವಿ ಹಿರೇಮಠ- ಕಾಯ್ದು ನೋಡಿ, ನಟರಾಜ ಸವಡಿ - ಯಾರಿವಳು, ಇಂಗ್ಲೀಷ್ ಕವಿತೆ, ಲಲಿತಾ ಭಾವಿಕಟ್ಟಿ - ಒಡಲಾಸೆ, ಶ್ರಾವಣ, ಗಾಯಿತ್ರಿ ಭಾವಿಕಟ್ಟಿ- ಹುಡುಕಾಟ, ಮಹೇಶ ಬಳ್ಳಾರಿ -ಬೇರುಗಳು, ಎ.ಪಿ.ಅಂಗಡಿ - ತುಂಗಾ ಪಾನ ಕವನಗಳನ್ನು ವಾಚನ ಮಾಡಿದರು.
ಗುರುರಾಜ ದೇಸಾಯಿ ವಂದನಾರ್ಪಣೆ ಮಾಡಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಿರೂಪಿಸಿದರು.

0 comments:
Post a Comment