ಕೊಪ್ಪಳ ಜೂ. : ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭದಲ್ಲಿ ಉತ್ತಮ ಭರವಸೆಯನ್ನು ಮೂಡಿಸಿತ್ತಾದರೂ, ಜೂನ್ ಎರಡನೆ ವಾರದಲ್ಲಿ ಅಲ್ಲಲ್ಲಿ ಚದುರಿದಂತೆ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೂ ಅನ್ನದಾತನ ಮೊಗದಲ್ಲಿ ಉತ್ತಮ ಮುಂಗಾರಿನ ನಿರೀಕ್ಷೆಯಿದ್ದು, ಕೃಷಿ ಚಟುವಟಿಕೆಯತ್ತ ಮುಖ ಮಾಡುವಂತಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಇದೀಗ ಚುರುಕುಗೊಂಡಿದ್ದು, ಈಗಾಗಲೆ ಜಿಲ್ಲೆಯಲ್ಲಿ ಶೇ. ೧೩ ರಷ್ಟು ಬಿತ್ತನೆಯಾಗಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೨೫೨೫೦೦ ಹೆಕ್ಟೇರ್ ಸಾಗುವಳಿ ಕ್ಷೇತ್ರವಿದ್ದು, ಆ ಪೈಕಿ ೧೮೧೪೫೦ ಹೆ. ಖುಷ್ಕಿ, ೩೮೮೫೦ ಹೆ., ೩೮೮೫೦ ಹೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಹಾಗೂ ೩೨೨೦೦ ಹೆ. ಇತರೆ ಸಾಗುವಳಿ ಕ್ಷೇತ್ರವಿದೆ. ಕಳೆದ ವರ್ಷ ಇದೇ ಅವಧಿಗೆ ೫೭. ೪ ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ೩೨. ೫ ಮಿ.ಮೀ. ಉತ್ತಮ ಮಳೆಯಾಗಿದೆ. ಜಿಲ್ಲೆಯ ೨೫೨೫೦೦ ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ ೩೧೫೦೭ ಹೆ. ನಲ್ಲಿ ಬಿತ್ತನೆಯಾಗಿದ್ದು ಶೇ. ೧೩ ರಷ್ಟು ಬಿತ್ತನೆ ಯಾದಂತಾಗಿದೆ.
ಮಳೆ : ಜಿಲ್ಲೆಯಲ್ಲಿ ಈ ವರ್ಷ ೧೪೪. ೪ ಮಿ.ಮೀ. ವಾಡಿಕೆ ಮಳೆಯ ಬದಲಿಗೆ ೧೨೦.೧ ಮಿ.ಮೀ. ಮಳೆಯಾಗಿದೆ. ಈ ವರ್ಷದ ಮೇ ಮತ್ತು ಜೂನ್ ತಿಂಗಳಿನಲ್ಲಿ ಕ್ರಮವಾಗಿ ೪೯ ಮತ್ತು ೩೨. ೫ ಮಿ.ಮೀ. ಸರಾಸರಿ ಮಳೆ ಬಿದ್ದಿದೆ. ಈ ವರ್ಷ ಕೊಪ್ಪಳ ತಾಲೂಕಿನಲ್ಲಿ ೧೦೮.೩ ಮಿ.ಮೀ., ಕುಷ್ಟಗಿ- ೧೦೨. ೫, ಯಲಬುರ್ಗಾ- ೧೨೯. ೨ ಹಾಗೂ ಗಂಗಾವತಿ ತಾಲೂಕಿನಲ್ಲಿ ೧೨೭. ೨ ಮಿ.ಮೀ. ಮಳೆಯಾಗಿದೆ.
ಬಿತ್ತನೆ : ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯದಲ್ಲಿ ಬಿದ್ದ ಮಳೆಯಿಂದ ಉತ್ತೇಜಿತರಾದ ರೈತರು ಕೃಷಿ ಚಟುವಟಿಕೆಯನ್ನು ಉತ್ತಮ ಬೆಳೆ ನಿರೀಕ್ಷೆಯಲ್ಲಿ ಪ್ರಾರಂಭಿಸಿದ್ದರು, ಜೂನ್ ತಿಂಗಳ ಆರಂಭದಲ್ಲಿಯೂ ಉತ್ತಮ ಮಳೆಯಾಗುವುದರ ಮೂಲಕ ರೈತರಲ್ಲಿ ಹೊಸ ಹುರುಪು ಮೂಡಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು ೨೫೨೫೦೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ ೩೧೫೦೭ ಹೆ. ನಲ್ಲಿ ಬಿತ್ತನೆಯಾಗಿದೆ. ಇದರಿಂದಾಗಿ ಒಟ್ಟು ಶೇ. ೧೩ ರಷ್ಟು ಬಿತ್ತನೆಯಾದಂತಾಗಿದ್ದು, ಇನ್ನೂ ಹೆಚ್ಚಿನ ಮಳೆ ಬಿದ್ದಲ್ಲಿ ಜುಲೈ ತಿಂಗಳ ಅಂತ್ಯದ ವೇಳೆಗೆ ಶೇ. ೧೦೦ ರಷ್ಟು ಬಿತ್ತನೆಯಾಗುವ ನಿರೀಕ್ಷೆ ಇದೆ. ಕೊಪ್ಪಳ ತಾಲೂಕಿನಲ್ಲಿ ೬೬೨೦೦ ಹೆ. ಗುರಿಯ ಬದಲಿಗೆ ೮೫೩೧ ಹೆ., ಕುಷ್ಟಗಿ- ೬೮೩೫೦ ಹೆ. ಗುರಿಯ ಎದುರು ೧೦೪೨೧ ಹೆ., ಯಲಬುರ್ಗಾ- ೫೫೦೨೦ ಹೆ. ಗುರಿಯ ಬದಲಿಗೆ ೧೧೨೦೨ ಹೆ., ಹಾಗೂ ಗಂಗಾವತಿ ತಾಲೂಕಿನಲ್ಲಿ ೬೪೦೩೦ ಹೆ. ಗುರಿಯ ಬದಲಿಗೆ ೨೭೫೯ ಹೆ. ನಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಏಕದಳ ಬೆಳೆಗಳ ಬಿತ್ತನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೧೩೯೬೦೦ ಹೆಕ್ಟೇರ್ ಗುರಿಯ ಬದಲಿಗೆ ೨೦೪೭೨ ಹೆ. ಬಿತ್ತನೆಯಾಗಿದೆ. ಆ ಪೈಕಿ ಕೊಪ್ಪಳ ತಾಲೂಕಿನಲ್ಲಿ ೫೬೭೮ ಹೆ., ಕುಷ್ಟಗಿ- ೬೫೪೬ ಹೆ., ಯಲಬುರ್ಗಾ- ೬೬೯೨ ಹೆ., ಹಾಗೂ ಗಂಗಾವತಿ- ೧೫೫೬ ಹೆ., ಬಿತ್ತನೆಯಾಗಿದೆ. ದ್ವಿದಳ ಬೆಳೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೩೮೨೦೦ ಹೆ. ಬಿತ್ತನೆಯ ಗುರಿ ಹೊಂದಿದ್ದು, ೮೧೩೮ ಹೆ. ಬಿತ್ತನೆಯಾಗಿದೆ. ಆ ಪೈಕಿ ಕೊಪ್ಪಳ ತಾಲೂಕಿಲ್ಲಿ ೧೮೧೪ ಹೆ., ಕುಷ್ಟಗಿ- ೩೨೯೮ ಹೆ., ಯಲಬುರ್ಗಾ- ೩೪೯೨ ಹೆ., ಹಾಗೂ ಗಂಗಾವತಿ ತಾಲೂಕಿನಲ್ಲಿ ೯೪೦ ಹೆ. ಬಿತ್ತನೆಯಾಗಿದೆ. ಎಣ್ಣೆಕಾಳು ಬೆಳೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೭೨೦೦೦ ಹೆ. ಬಿತ್ತನೆ ಗುರಿಯ ಬದಲಿಗೆ ಕೇವಲ ೨೦೫೫ ಹೆ. ಬಿತ್ತನೆಯಾಗಿದೆ. ಆ ಪೈಕಿ ಕೊಪ್ಪಳ ತಾಲೂಕಿನಲ್ಲಿ ೭೯೬ ಹೆ., ಕುಷ್ಟಗಿ- ೪೧೫ ಹೆ., ಯಲಬುರ್ಗಾ- ೭೬೪ ಹೆ., ಹಾಗೂ ಗಂಗಾವತಿ ತಾಲೂಕಿಲ್ಲಿ ೮೦ ಹೆ., ಬಿತ್ತನೆಯಾಗಿದೆ. ಅದೇ ರೀತಿ ವಾಣಿಜ್ಯ ಬೆಳೆಗೆ ಸಂಬಂಧಿಸಿದಂತೆ ಒಟ್ಟು ೨೭೦೦ ಹೆ. ಗುರಿಯ ಬದಲಿಗೆ ೮೪೨ ಹೆ. ಬಿತ್ತನೆಯಾಗಿದ್ದು, ಆ ಪೈಕಿ ಕೊಪ್ಪಳ- ೨೪೩ ಹೆ., ಕುಷ್ಟಗಿ- ೧೬೨ ಹೆ., ಯಲಬುರ್ಗಾ- ೨೫೪ ಹೆ., ಹಾಗೂ ಗಂಗಾವತಿ ತಾಲೂಕಿನಲ್ಲಿ ೧೮೩ ಹೆ. ಬಿತ್ತನೆಯಾಗಿದೆ.
ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಯಾವುದೇ ಕೊರತೆಯಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.

0 comments:
Post a Comment