ಕೊಪ್ಪಳ ಜಿಲ್ಲೆಯ ಹನುಮಸಾಗರದಲ್ಲಿ ಹಳೆಯ ವಿದ್ಯಾರ್ಥಿಗಳು ತಾವು ಕಲಿತಿರುವ ಶಾಲೆಯಲ್ಲಿ ತಮ್ಮ ಗುರುಗಳನ್ನು ನಮಿಸುವ ಕಾರ್ಯಕ್ರಮ, ೨೬ ವರ್ಷಗಳ ನಂತರ ಒಂದೆಡೆ ಸೇರುವ ಹಿಂದಿನ ನೆನೆಪುಗಳನ್ನು ಮೆಲಕು ಹಾಕುವ " ಮಾಸದ ನೆನೆಪು" ಎಂಬ ವಿಶಿಷ್ಠ ಕಾರ್ಯಕ್ರಮ ನಾಳೆ ನವ್ಹಂಬರ ೨೧ ರಂದು ನಡೆಯಲಿದೆ.
೧೯೮೩-೮೪ ಸಾಲಿನಲ್ಲಿ ಮೇಟ್ರಿಕ್ ಪರೀಕ್ಷೆ ಬರೆಯುವ ಮುನ್ನ ಹತ್ತು ವರ್ಷಗಳ ಕಾಲ ಈ ವಿದ್ಯಾರ್ಥಿಗಳು ಶಾಲೆಯಲ್ಲಿ ಬಾಲ್ಯ, ಕಿಶೋರ ದಿನಗಳಲ್ಲಿ ಮಾಡಿದ ಚೇಷ್ಟೆಗಳು, ಗೆಳೆಯರ ಮಧ್ಯೆ, ನಗೆಚಾಟಿಕೆ, ಓದಿನಲ್ಲಿಯ ತಾ ಮುಂದೆ, ನೀ ಮುಂದೆ ಹಠಕ್ಕೆ ಬಿದ್ದು ಓದುವದು, ಪಾಠಕ್ಕಿಂತ ಅಧಿಕವಾಗಿ ಇಷ್ಟದ ಕ್ರೀಡೆಯಲ್ಲಿ ಎಲ್ಲಾ ನೆನೆಪುಗಳನ್ನು ಮರುಕಳಿಸುವದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಈ ಕಾರ್ಯಕ್ರಮದಿಂದ ಹಳೇಯ ಸ್ನೇಹ ಬಾಂದವ್ಯವನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಲಾಗಿದೆ.
ಹನುಮಸಾಗರದಲ್ಲಿ ಪ್ರಥಮ ಭಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರವಾದಾಗ ಪರೀಕ್ಷೆ ಬರೆದವರಲ್ಲಿ ಶೇ ೯೮ ರಷ್ಟು ಫಲಿತಾಂಶದಲ್ಲಿ ಪಾಸು ಮಾಡಿದ ಅಂದಿನ ವಿದ್ಯಾರ್ಥಿಗಳಲ್ಲಿ ಕೆಲವರು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ, ಬಹುತೇಕರು ಶಿಕ್ಷಕ ವೃತ್ತಿ ಮಾಡುತ್ತಿದ್ದಾರೆ, ಇನ್ನು ಕೆಲವರು ಇಂಜನೀಯರ್, ಪತ್ರಕರ್ತರಾಗಿ ಸಮಾಜದಲ್ಲಿ ತಮ್ಮದೇ ಆದ ನೆಲೆ ಕಂಡುಕೊಂಡಿದ್ದಾರೆ. ವಿಶೇಷವಾಗಿ ಈ ಅವಧಿಯಲ್ಲಿ ಓದಿರುವವರು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ.
ಇಲ್ಲಿಯವರಿಗೂ ಕೆಲ ಕೆಲವರೆ ಇಂದಿನ ದಿನದಲ್ಲಿ ಎಸ್‌ಎಮ್‌ಎಸ್ ಮುಖಾಂತರ ಸ್ನೇಹ ಸಂಬಂಧ ಇಟ್ಟುಕೊಂಡವರು, ಈಗ ಮದ್ಯವಯಸ್ಕ ವಯಸ್ಸಿನಲ್ಲಿ ಈ ಸ್ನೇಹಿತರಲ್ಲಿ ಬಹುತೇಕರು ಮುಖತ: ಬೇಟಿಯಾಗದೆ ದೂರ ಉಳಿದಿದ್ದಾರೆ, ಈ ಕಾರ್ಯಕ್ರಮದಿಂದ ಮುಂದಿನ ದಿನಗಳಲ್ಲಿ ಹಿಂದಿನ ಸ್ನೇಹತನವನ್ನು ವೃಧಿಸಿಕೊಳ್ಳುವ ಆಸೆಯನ್ನು ಹೊಂದಿ ಈ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅಂದಿನ ಶಿಕ್ಷಕರನ್ನು ಸನ್ಮಾನಿಸಲಿದ್ದಾರೆ.
ಈ ಅಪರೂಪದ ಕಾರ್ಯಕ್ರಮಕ್ಕೆ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿಜಿ ಸಾನಿಧ್ಯ ವಹಿಸಿ ಉಪನ್ಯಾಸ ನೀಡಲಿದ್ದಾರೆ, ಕಾರ್ಯಕ್ರಮವನ್ನು ರೇಡಿಯೊ ನಾಟಕಕಾರ ಎನ್ ಪಿ ಕುಲಕರ್ಣಿ ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದ ವಿಶೇಷವಾಗಿ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ಇಬ್ರಾಹಿಂ ಸುತಾರರಿಂದ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂದಿನ ಶಾಲಾ ಸಂಸತ್ತಿನ ಪ್ರದಾನ ಕಾರ್ಯದರ್ಶಿ ಪ್ರಭುದೇವ ಬ್ಯಾಳಿ ವಹಿಸಲಿದ್ಬದ್ದಾರೆ, ಎಲ್ಲಾ ಶಿಕ್ಷಕರು ಹಾಜರಿರಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಹನುಮಸಾಗರದ ಶಾಲಾ ಆವರಣದಲ್ಲಿ ಸಕಲ ಸಿದ್ದತೆ ಮಾಡಲಾಗಿದೆ. ಇಡೀ ದಿನದ ಅಪರೂಪ ಕಾರ್ಯಕ್ರಮ ಈ ಭಾಗದಲ್ಲಿ ವಿಶಿಷ್ಠ ಅನುಭವ ನೀಡಲಿದೆ.
0 comments:
Post a Comment