ನಿನ್ನ ಕಥೆಗಳ ಪುಟ ತಿರುವಿದರೆ
ಕನಸುಗಳಿಗೆ
ಹೊಸ ಭಾಷ್ಯ ಬರೆಯಬೇಕೆನ್ನಿಸುತ್ತದೆ.
ನಾಲ್ಕು ಗೋಡೆಗಳ ನಡುವಿನ
ನಿನ್ನ ಮೌನದ ಆರ್ಭಟ
ಅದ್ಯಾವ ಸುನಾಮಿಯಲೆಗಳಿಗೂ ಕಡಿಮೆಲ್ಲ.
ಅಂದು ಗಾಂಧಿ, ನಿನ್ನೆ ನೆಲ್ಸನ್
ಇಂದು ನೀನು
ಕೋಟಿಗೊಬ್ಬರು ನಿನ್ನಂಥವರು
ಸುರಿವ
ನೂರಾರು ಮಳೆಗಳ ಪೈಕಿ
'ಸ್ವಾತಿ' ಇದ್ದಂತೆ.
ಕಗ್ಗತ್ತಲಲ್ಲಿ ಗೀಚಿದ ಕಡ್ಡಿಯ ಗೆಲುವಿನ
ನಗೆಯ ಸಾರ್ಥಕ ಬದುಕು,
ಹೇಯ ನೆಪಗಳ ಹದ್ದುಗಳ ಒದ್ದು,
ಪುಟಿದೆದ್ದ ಚಿಲುಮೆ,
ಅಗೋ ನೋಡಲ್ಲಿ ಬಾನ ಸೂರ್ಯನೇ ನಾಚಿ
ನಿಂತಿದ್ದಾನೆ ನಿನ್ನೆದುರು ತಲೆಬಾಗಿ.
ಹೆಣ್ಣಾಗಿ ಹುಟ್ಟಿ ಜಗದ ಕಣ್ಣಾಗಿ ಬೆಳಗಿ
ಅವರು 'ಗಂಡಸ'ರಲ್ಲವೆಂಬ ಸತ್ಯ
ಹೊರಚೆಲ್ಲಿ,
ನೀ ಹೊರಬರುವ ಹೊತ್ತು
ನಿನ್ನ ನೆರಳ ಕಂಡು
ಭೂತಾಯೂ ದಂಗಾದಳು ಒಂದರೆ ಕ್ಷಣ.
- ಮಹೇಶ ಬಳ್ಳಾರಿ
0 comments:
Post a Comment