ಕೊಪ್ಪಳ, ಏ, ೦೭ ಜಿಲ್ಲೆಯ ವಿಶ್ವ ಪ್ರಸಿದ್ಧ ಕಲೆಯಲ್ಲಿ ಹೆಸರು ಮಾಡಿರುವ ಕಿನ್ನಾಳ ಗ್ರಾಮದ ಹೇಮಪ್ಪ ಜಿ. ಚಿತ್ರಗಾರ ಅವರು ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ದಿ.೧೦ ರ ರವಿವಾರ ಗೋವಾದ ಬಿಚ್ಚೋಲಿ ಮಹಾನಗರದಲ್ಲಿ ಗೋವಾ ಕನ್ನಡಿಗರ ಬೃಹತ ಸಾಂಸ್ಕೃತಿಕ ಸಮ್ಮೇಳನದಲ್ಲಿ ಈ ಮಹತ್ವದ ಪ್ರಶಸ್ತಿ ಪ್ರದಾನ ಮಾಡಲಾಗುವುದು.
೩೭ ವರ್ಷ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತಿ. ೪೦ ವರ್ಷಗಳ ಕಿನ್ನಾಳದ ಸಾಂಪ್ರದಾಯಿಕ ಕಲೆಯಲ್ಲಿ ಅನುಭವ ಹಾಗೂ ಸೇವೆ. ಕರ್ನಾಟಕ ರಾಜ್ಯ ಸೋಮವಂಶ ಆರ್ಯ ಕ್ಷತ್ತಿಯ ಚಿತ್ರಗಾರ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ೫ ವರ್ಷಗಳ ಸೇವೆ. ೩ ವರ್ಷ ಕೊಪ್ಪಳ ಜಿಲ್ಲಾ ಶ್ರಮ ಶಕ್ತಿ ಯೋಜನೆ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರಾಗಿ ಸೇವೆ. ಸ್ಥಳಿಯ ಸೋಮವಂಶ ಆರ್ಯ ಕ್ಷತ್ತಿಯ ಚಿತ್ರಗಾರ ಸಮಾಜದ ಅಧ್ಯಕ್ಷರಾಗಿ ೪ ವರ್ಷ ಸೇವೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ(ರಿ) ಬೆಂಗಳೂರು ಕೊಪ್ಪಳ ಜಿಲ್ಲಾ ಘಟಕದ ನ್ಯಾಯಸಮಿತಿಯ ಸದಸ್ಯರಾಗಿ ಸೇವೆ. ಗುಲಬರ್ಗಾ ವಿಭಾಗ ಮಟ್ಟದಲ್ಲಿ ಜರುಗಿದ ಚಿತ್ರ ಕಲಾ ಶಿಕ್ಷಕರ ಸಮಾವೇಶದಲ್ಲಿ ಅಧ್ಯಕ್ಷತೆಯನ್ನು ವಹಿಯಿಸಿ ಕಿನ್ನಾಳಿನ ಎಲ್ಲಾ ಹಂತದ ಸಂಪ್ರದಾಯಿಕ ಕಲೆಯನ್ನು ೨ ದಿನ ನಡೆದ ತರಬೇತಿಯಲ್ಲಿ ಪ್ರಚಾರಪಡಿಸಿದರು. ಸದರಿಯವರು ಕಿನ್ನಾಳಿನ ಸಂಪ್ರದಾಯಿಕ ಕಲೆಗಳಾದ ವಲಾಪೇಟೆಂಗ್ ಜೀವರಾಶೀಗಳು, ಪಲ್ಲಕಿ ಚತ್ರಿ ದೇವತೆಗಳ ಮೂರ್ತಿಗಳ ಕೇತ್ತನೆ ಹಣ್ಣಿನ ಸಮಾನುಗಳು ತಯಾರಿಸುವಲ್ಲಿ ಸದಾ ಸಿದ್ದ ಹಸ್ತಾರು.
ಅವರು ೪೦ ವರ್ಷಗಳ ಕಿನ್ನಾಳದ ಸಾಂಪ್ರದಾಯಿಕ ಕಲೆಯಲ್ಲಿ ಅನುಭವ ಹಾಗೂ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸುವುದರ ಜೊತೆಗೆ ತಮ್ಮನ್ನು ತಾವು ಕನ್ನಡ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತ ಕನ್ನಡಾಂಭಿಮಾನ, ಸಾಹಿತ್ಯಾಸಕ್ತರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಸನ್ಮಾನ ಪುರಸ್ಕಾರ : ಹಂಪಿಯಲ್ಲಿ ೧೯೯೬ರಲ್ಲಿ ನಡೆದ ರಾಜ್ಯ ಮಟ್ಟದ ಚಿತ್ರ ಕಲಾ ಶಿಬಿರದಲ್ಲಿ ಸಾಂಪ್ರದಾಯಿಕ ಕಲಾವಿದರಾಗಿ
ಭಾಗವಹಿಸಿ ತಮ್ಮ ಕಿನ್ನಾಳದ ಸಾಂಪ್ರದಾಯಿಕ ಕಲೆಯನ್ನು ರಚಿಸಿ ಮತ್ತು ಪ್ರದರ್ಶಿಸಿ ಉತ್ತಮ ಕಲಾವಿದ ಪ್ರಶಸಿ ಪಡೆದಿದ್ದಾರೆ. ಇವರ ೩೫ ವರ್ಷಗಳ ಶಿಕ್ಷಣದಲ್ಲಿ ಸಲ್ಲಿಸಿದ ಪ್ರಮಾಣಿಕಮತ್ತು ನಿಷ್ಠೆಯ ಸೇವೆಗಾಗಿ ಕಿನ್ನಾಳದ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಶಾಲೆಯಿಂದ ೨೦೦೧-೨೦೦೨ರಲ್ಲಿ ಜನ ಮಚ್ಚಿದ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಸುದೀರ್ಘವಾಗಿ ಶಿಕ್ಷಣದಲ್ಲಿ ಸಲ್ಲಿಸಿದ ಪ್ರಮಾಣೀಕ ಸೇವೆಯನ್ನು ಪರಿಗಣಿಸಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ೨೦೦೬-೨೦೦೭ರಲ್ಲಿ ಗಣರಾಜ್ಯೋತ್ಸವದಂದು ಕೊಪ್ಪಳ ಜಿಲ್ಲಾ ಮಟ್ಟದ
ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶ್ರೀಯುತರು ಸಾಮಾಜಿಕ, ಶಿಕ್ಷಣ, ಮತ್ತು ಸಾಂಪ್ರಾದಾಯಿಕ ಚಿತ್ರಕಲೆಯಲ್ಲಿ ಸಲ್ಲಿಸಿದ ಸೇವೆಗಾಗಿ ೨೦೧೦-೨೦೧೧ ರಲ್ಲಿ ಸೋಮವಂಶ ಆರ್ಯ ಕ್ಷತ್ತಿಯ ಚಿತ್ರಗಾರ ಸಮಾಜದ ಕಂಪ್ಲಿಯಿಂದ ನಿಮಿಷಾಂಬ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಈ ಸಾಹಿತಿಕ ಚಟುವಟಿಕೆಯನ್ನು ಪರಿಗಣಿಸಿ ಅವರನ್ನು ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕರಾದ ಮಹೇಶಬಾಬು ಸುರ್ವೆ, ಹನುಮಂತರೆಡ್ಡಿ ಶಿರೂರ, ಸಾಂಸ್ಕೃತಿಕ ಸಂಘಟಕ ವೈ. ಬಿ. ಜೂಡಿ ರವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
0 comments:
Post a Comment